ಪೋಷಕರ ಸಂವಹನದ ಕೊಂಡಿಯಾದ ಮುದ್ದಾದ ಮಗಳು: ಫೋಟೋಗ್ರಾಫರ್ ಜೊತೆ ಮಾತನಾಡಿದ ಪರಿಯೇ ಅದ್ಭುತ

ಕಳೆದ 24 ಗಂಟೆಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮುದ್ದ ಮಗುವೊಂದು ತನ್ನ ತಂದೆ-ತಾಯಿಗೆ ಧ್ವನಿಯಾಗಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು, ಮೆಚ್ಚುಗೆ ಸೂಚಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.ಸ್ಟ್ರೀಟ್ ಫೋಟೋಗ್ರಾಫರ್ ವಿಡಿಯೋ
ಇಂದು ಪ್ರವಾಸಿ ತಾಣ, ಬ್ಯೂಸಿ ರೋಡ್‌ಗಳಲ್ಲಿ ನಿಮಗೆ ಸ್ಟ್ರೀಟ್ ಫೋಟೋಗ್ರಾಫರ್ ಸಿಗುತ್ತಾರೆ. ಪ್ರವಾಸಿಗರನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡಿ ಅನುಮತಿ ಪಡೆದುಕೊಂಡು ಫೋಟೋ ಕ್ಲಿಕ್ಕಿಸುತ್ತಾರೆ. ನಂತರ ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಹಂಚಿಕೊಳ್ಳುತ್ತಾರೆ. ಇಂತಹ ವಿಡಿಯೋಗಳು ಹೆಚ್ಚೆಚ್ಚು ವೈರಲ್ ಆಗುತ್ತಿರುತ್ತವೆ.ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ
ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಎಂಬಲ್ಲಿ ಆದಿ ಯೋಗಿ ಪ್ರತಿಮೆ ನೋಡಲು ಪ್ರತಿದಿನ ನೂರಾರು ಪ್ರವಾಸಿಗರು ಬರುತ್ತಾರೆ. ಇಲ್ಲಿಯ ಸ್ಟ್ರೀಟ್ ಫೋಟೋಗ್ರಾಫರ್, ವಿಶೇಷ ಕುಟುಂಬವನ್ನು ಭೇಟಿಯಾಗಿ ಮಾತನಾಡಿದ್ದಾರೆ. ಇಬ್ಬರು ಮಕ್ಕಳೊಂದಿಗೆ ಬಂದ ದಂಪತಿಯನ್ನು ಮಾತನಾಡಿಸಲು ಹೋದಾಗ ಅವರಿಗೆ ಕಿವಿ ಕೇಳಿಸಲ್ಲ ಮತ್ತು ಮಾತು ಬರಲ್ಲ ಎಂದು ಗೊತ್ತಾಗಿದೆ. ಆದ್ರೆ ಈ ವಿಶೇಷ ಚೇತನ ದಂಪತಿಗೆ ಅವರ ಮಗಳು ಧ್ವನಿಯಾಗಿದ್ದಾರೆ.ಪುಟ್ಟ ಹುಡುಗಿಯ ಮಾತು
ಫೋಟೋಗ್ರಾಫರ್ ಬರುತ್ತಿದ್ದಂತೆ ತಮಗೆ ಮಾತು ಬರಲ್ಲ, ಕಿವಿ ಕೇಳಲ್ಲ. ಮಗಳೊಂದಿಗೆ ಮಾತನಾಡುವಂತೆ ಸನ್ನೆ ಮಾಡುತ್ತಾರೆ. ಫೋಟೋಗ್ರಾಫರ್ ಪುಟ್ಟ ಹುಡುಗಿ ಜೊತೆ ಮಾತು ಆರಂಭಿಸುತ್ತಾರೆ. ನನ್ನ ಹೆಸರು ಲಿಪ್ಸಾ, ಓಡಿಶಾದವಳು. ಮೊದಲ ಬಾರಿಗೆ ಬೆಂಗಳೂರಿಗೆ ರಜಾದಿನಗಳನ್ನು ಕಳೆಯಲು ಬಂದಿದ್ದೇವೆ. ಮೂರ್ನಾಲ್ಕು ದಿನಗಳಿಂದ ಇಲ್ಲಿದ್ದು, ಹಾಗಾಗಿ ಕನ್ನಡ ಭಾಷೆ ಬರಲ್ಲ. ತಾಯಿ ಗೃಹಿಣಿ ಮತ್ತು ತಂದೆ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ ಎಂದು ಹೇಳುತ್ತಾಳೆ.

ನೆಟ್ಟಿಗರು ಹೇಳಿದ್ದೇನು?
ಈ ವಿಡಿಯೋ ನೋಡಿದ ನೆಟ್ಟಿಗರು, ಮಕ್ಕಳಲ್ಲಿ ಸಂಸ್ಕಾರ ತುಂಬಲು ನಿಮಗೆ ಧ್ವನಿ ಬೇಕೆಂತೇನಿಲ್ಲ ಎಂಬುದಕ್ಕೆ ಇದುವೇ ಉದಾಹರಣೆ. ಪೋಷಕರು ಸಂವಹನ ನಡೆಸಲು ಸಂಪೂರ್ಣವಾಗಿ ಮಗಳ ಮೇಲೆ ಅವಲಂಬಿತಳಾಗಿದ್ದಾರೆ ಎಂದು ತಿಳಿಯುತ್ತದೆ. ಇಲ್ಲಿ ಎಲ್ಲರೂ ಒಬ್ಬರ ಮೇಲೆ ಪ್ರೀತಿಯ ಕಾಳಜಿ ಹೊಂದಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.