Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ತಲೆಗೆ ಸಿಲುಕಿದ 15 ಲೀಟರ್ ಸ್ಟೀಲ್ ಕ್ಯಾನ್: ಪಾರಾಗಲು ಗ್ರೈಂಡರ್ ಯಂತ್ರ ಬಳಸಿ ಕತ್ತರಿಸಿದ ಗ್ರಾಮಸ್ಥರು

Spread the love

ಅಲ್ವಾರ್: ಬೇಸಿಗೆಯ ಸುಡುವ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ತರಹೇವಾರಿ ಹರಸಾಹಸ ಮಾಡುವುದು ಸಾಮಾನ್ಯ. ಆದರೆ, ಅಲ್ವಾರ್‌ನ ಮಾಧೋಗಢ ಗ್ರಾಮದ ಕಲೂರಾಮ್ ರೆಬಾರಿ ಎಂಬ ವ್ಯಕ್ತಿ ಮಾಡಿದ ಉಪಾಯ ಮಾತ್ರ ಆತನನ್ನೇ ಸಂಕಷ್ಟಕ್ಕೆ ದೂಡಿತ್ತು. ತಲೆಯ ಮೇಲೆ ಸಿಲುಕಿಕೊಂಡ ಹಾಲಿನ ಕ್ಯಾನ್‌ನಿಂದಾಗಿ ಎರಡು ಗಂಟೆಗಳ ಕಾಲ ಪರದಾಡಿದ ಘಟನೆ ಈಗ ಬೆಳಕಿಗೆ ಬಂದಿದೆ.
ಏಪ್ರಿಲ್ 24ರಂದು ಕಲೂರಾಮ್ ರೆಬಾರಿ ಗೋಧಿ ವಿತರಿಸಲು ಹೋಗುತ್ತಿದ್ದರು. ಅಂದು ಬಿಸಿಲು ವಿಪರೀತವಾಗಿದ್ದರಿಂದ, ತಲೆಗೆ ಬಿಸಿ ತಗುಲಬಾರದೆಂದು ತಮಾಷೆಗಾಗಿ ಅಥವಾ ರಕ್ಷಣೆಗಾಗಿ ಪಕ್ಕದಲ್ಲಿದ್ದ 15 ಲೀಟರ್ ಹಾಲಿನ ಸ್ಟೀಲ್ ಕ್ಯಾನ್ ಅನ್ನು ತಮ್ಮ ತಲೆಯ ಮೇಲೆ ಹಾಕಿಕೊಂಡರು. ಆದರೆ, ಕ್ಯಾನ್ ಒಳಗೆ ಹೋದ ತಲೆ ಹೊರಗೆ ಬರಲೇ ಇಲ್ಲ.
ಕೂಡಲೇ ಗ್ರಾಮಸ್ಥರು ಜಮಾಯಿಸಿ ಕ್ಯಾನ್ ತೆಗೆಯಲು ಹರಸಾಹಸ ಪಟ್ಟರು. ಎಣ್ಣೆ ಹಚ್ಚುವುದು, ಸೋಪು ಹಚ್ಚಿ ಎಳೆಯುವುದು ಸೇರಿದಂತೆ ಹಲವು ದೇಸಿ ತಂತ್ರಗಳನ್ನು ಬಳಸಿದರೂ ಕ್ಯಾನ್ ಮಾತ್ರ ಇಂಚೂ ಕದಲಲಿಲ್ಲ. ವಿದ್ಯುತ್ ಚಾಲಿತ ಗ್ರೈಂಡರ್ ಯಂತ್ರವನ್ನು ಬಳಸಿ ಅತ್ಯಂತ ನಾಜೂಕಿನಿಂದ ಕ್ಯಾನ್ ಅನ್ನು ಕತ್ತರಿಸಲು ನಿರ್ಧರಿಸಲಾಯಿತು. ಸ್ವಲ್ಪವೇ ಹೆಚ್ಚುಕಡಿಮೆಯಾದರೂ ವ್ಯಕ್ತಿ ಮುಖಕ್ಕೆ ಗಾಯವಾಗುವ ಅಪಾಯವಿತ್ತು.


Spread the love
Share:

administrator

Leave a Reply

Your email address will not be published. Required fields are marked *