ಪಾಕ್ಸ್‌ಕಾನ್ ಕಂಪನಿ ಶೌಚಾಲಯದಲ್ಲಿ ನವಜಾತ ಶಿಶುವಿನ ಕತ್ತು ಸೀಳಿ ಹ*ತ್ಯೆ; ಕಾರ್ಮಿಕೆ ಕೃತ್ಯ

ದೇವನಹಳ್ಳಿ: ತಾಲೂಕಿನ ಬೀರಸಂದ್ರದ ಬಳಿಯಿರುವ ಪಾಕ್ಸ್ ಕಾನ್ ಕಂಪೆನಿಯ ಶೌಚಾಲಯದಲ್ಲಿ, ಕತ್ತು ಸೀಳಿ ಕೊಲೆ ಮಾಡಿರುವ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿರುವ ಬಗ್ಗೆ ವರದಿಯಾಗಿದ್ದು, ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕೆಯೊಬ್ಬಳು, ಶೌಚಾಲಯಕ್ಕೆ ಹೋದಾಗ, ಮಗುವಿನ ಜನನವಾಗಿದ್ದು, ಆಕೆಗೆ ಮದುವೆಯಾಗದ ಕಾರಣ, ವಿಚಾರ ಯಾರಿಗೂ ಗೊತ್ತಾಗಬಾರದೆಂದು, ಶೌಚಾಲಯದಲ್ಲಿದ್ದ ಹರಿತವಾದ ವಸ್ತುವನ್ನು ತೆಗೆದುಕೊಂಡು, ಮಗುವಿನ ಕತ್ತುಕೊಯ್ದು ಸಾಯಿಸಿ, ಶೌಚಾಲಯದೊಳಗೆ ಹಾಕಿ, ಹೊರಗೆ ಬಂದಿದ್ದಾಳೆ. ಅಲ್ಲಿನ ಕಾರ್ಮಿಕರು ಶೌಚಾಲಯಕ್ಕೆ ಹೋದಾಗ, ಘಟನೆ ಬೆಳಕಿಗೆ ಬಂದಿದ್ದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದಿದ್ದ ವಿಶ್ವನಾಥಪುರ ಪೊಲೀಸ್ ಠಾಣೆಯ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೃತ್ಯವನ್ನು ಎಸಗಿರುವ ಕಾರ್ಮಿಕೆಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಆರೋಗ್ಯ ಚೇತರಿಸಿಕೊಂಡ ನಂತರ ಪೊಲೀಸರು ವಶಕ್ಕೆ ಪಡೆದುಕೊಳ್ಳಲಿದ್ದಾರೆ. ಪ್ರೀತಿಸಿದ್ದ ಯುವಕ, ಮೋಸ ಮಾಡಿದ್ದರಿಂದ ಶೌಚಾಲಯದಲ್ಲಿ ಮಗುವನ ಕತ್ತು ಸೀಳಿ ಸಾಯಿಸಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.
