ಐಪಿಎಲ್ನಲ್ಲಿ ಅಭಿಷೇಕ್ ಶರ್ಮಾ ಸಿಡಿಲಬ್ಬರ: ಕ್ರಿಸ್ ಗೇಲ್ ದಾಖಲೆಗೆ ಸವಾಲೊಡ್ಡಿದ ‘ಯಂಗ್ ಸೆನ್ಸೇಷನ್’

ಹೊಸದಿಲ್ಲಿ : ಇಂಡಿಯನ್ ಪ್ರಿಮಿಯರ್ ಲೀಗ್ನಲ್ಲಿ ಹೊಸ ಪೀಳಿಗೆಯ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಎದುರಾಳಿಗಳ ಬೌಲಿಂಗ್ ದಾಳಿ ಪುಡಿಗಟ್ಟುವ ಮೂಲಕ ಸುದ್ದಿ ಮಾಡುತ್ತಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಬೌಲರ್ಗಳ ಪಾಲಿಗೆ ಅತ್ಯಂತ ಅಪಾಯಕಾರಿ ಆರಂಭಿಕ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಕೇವಲ ಅಂಕಿ-ಅಂಶಗಳಲ್ಲಿ ಮಾತ್ರವಲ್ಲ: ಅಭಿಮಾನಿಗಳಿಗೆ ರೋಚಕತೆ ಮತ್ತು ಭರವಸೆ ನೀಡುವಲ್ಲಿ ಸ್ಟೈಲಿಂಗ್ ಬುದ್ದ ಹೆಸರಾಗಿದ್ದಾರೆ.
ಅಭಿಷೇಕ್ ಶರ್ಮಾ ಐಪಿಎಲ್ ವೇದಿಕೆಯಲ್ಲಿ ಇದುವರೆಗೆ ಬಂದ ಎಲ್ಲ ಪ್ರಮುಖ ಆರಂಭಿಕ ಆಟಗಾರರ ಪ್ಯೂಷನ್ ಎನಿಸಿದ್ದಾರೆ. ಕ್ರಿಸ್ ಗೇಲ್ ಅವರ ಸಿಕ್ಸರ್ ಸಿಡಿಸುವ ಹೆಚ್ಚು ಅವರಲ್ಲಿದೆ; ಆರಂಭಿಕ ಆಟಗಾರನಾಗಿ ಪ್ರತಿ 9.8 ಎಸೆತಕ್ಕೊಮ್ಮೆ ಅವರು ಸಿಕ್ಸರ್ ಅಟ್ಟುತ್ತಾರೆ. ಜಮೈಕಾ ಆಟಗಾರ ಪ್ರತಿ ಒಂಬತ್ತು ಎಸೆತಗಳಲ್ಲಿ ಒಂದು ಸಿಕ್ಸರ್ ಬಾರಿಸುವ ಮೂಲಕ ಖ್ಯಾತಿ ಪಡೆದಿದ್ದರು. ಆದರೆ ಅವರ ಶಕ್ತಿಶಾಲಿ ಶೈಲಿ ಮತ್ತು ವಿಧಾನ ವಿಭಿನ್ನ ಇಬ್ಬರೂ ಎತ್ತರದಲ್ಲಿ ಬ್ಯಾಟ್ ಸ್ವಿಂಗ್ ಮಾಡುವ ಮೂಲಕ ಸಿಕ್ಸರ್ ಬಾರಿಸುತ್ತಾರೆ.
ಸ್ವಲ್ಪ ಮಟ್ಟಿಗೆ ವೀರೇಂದ್ರ ಸೆಹ್ವಾಗ್ ಅವರ ಶೈಲಿಯನ್ನು ಹೋಲುವ ಅಭಿಷೇಕ್ ಬ್ಯಾಟಿಂಗ್, ಡೇವಿಡ್ ವಾರ್ನರ್ ಅವರ ಹೊಡಿಬಡಿಯ ಶೈಲಿಯನ್ನೂ ಹೊಂದಿದೆ. ಕೆಲವೇ ಪಂದ್ಯಗಳಲ್ಲಿ ಸೆಹ್ವಾಗ್ಗಿಂತ ಹೆಚ್ಚು ಸಿಕ್ಸರ್ ಸಿಡಿಸಿದ್ದಾರೆ. ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ 138 ಸಿಕ್ಸರ್ ಬಾರಿಸಿದ್ದರೆ, ಸೆಹ್ವಾಗ್ 104 ಸಿಕ್ಸರ್ ಸಿಡಿಸಿದ್ದರು. ಅಭಿಷೇಕ್ ಶರ್ಮಾ 29.05 ಸರಾಸರಿ ಹೊಂದಿದ್ದರೆ, ಸೆಹ್ವಾಗ್ ಸರಾಸರಿ 27.55. ಶರ್ಮಾ 169.81 ಸ್ಟೈಕ್ರೇಟ್ ಹೊಂದಿದ್ದರೆ ಸೆಹ್ವಾಗ್ ಸ್ಟೈಕ್ರೇಟ್ 155.
ಇನ್ನು ಆಕ್ರಮಣಕಾರಿ ಬ್ಯಾಟಿಂಗ್ ವಿಚಾರಕ್ಕೆ ಬಂದರೆ, ಡೇವಿಡ್ ವಾರ್ನರ್ ಅವರನ್ನು ಈ ಅದ್ಭುತ ಓಪನರ್ ಹೋಲುತ್ತಾರೆ. ಮಾಜಿ ಆಸ್ಟ್ರೇಲಿಯಾ ಆಟಗಾರನ ನಿರ್ಭೀತ ಶಕ್ತಿ ಹಾಗೂ ಬಲಿಷ್ಠ ತೋಳುಗಳನ್ನು ಅಭಿಷೇಕ್ ಶರ್ಮಾ ಹೊಂದಿದ್ದಾರೆ. ಎಲ್ಲ ಪ್ರಮುಖ ದಿಗ್ಗಜರ ಶೈಲಿಯ ಪ್ಯೂಷನ್ ಎನಿಸಿರುವ ಶರ್ಮಾ, ತಮ್ಮ ಬ್ಯಾಟಿಂಗ್ ಅಬ್ಬರದಲ್ಲಿ ಎದುರಾಳಿ ಬೌಲರ್ಗಳ ಬೆವರಿಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
