Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕ್ರಿಕೆಟ್ ಫೈನಲ್‌ಗೆ ಆಹ್ವಾನಿಸದ್ದಕ್ಕೆ ಪುರಸಭೆ ಅಧ್ಯಕ್ಷರ ಗರಂ; ಟ್ರ್ಯಾಕ್ಟರ್ ಓಡಿಸಿ ಪಿಚ್ ಧ್ವಂಸ!

Spread the love

ಪಿಟಿಐ ಮುಂಬೈ : ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯಲ್ಲಿ ನಡೆದ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೆ ತಮ್ಮನ್ನು ಆಹ್ವಾನಿಸದ್ದಕ್ಕೆ ಕೋಪಗೊಂಡ ಪುರಸಭೆ ಅಧ್ಯಕ್ಷರೊಬ್ಬರು, ಟ್ರ್ಯಾಕ್ಟರ್‌ ಬಳಸಿ ಪಿಚ್‌ ಅನ್ನೇ ಧ್ವಂಸಗೊಳಿಸಿದ ಘಟನೆ ಏ.12ರಂದು ನಡೆದಿದೆ.

ಧರಂಗಾವ್ ಎಂಎಲ್‌ಎ ಟ್ರೋಪಿ
ಜಲಗಾಂವ್‌ ಜಿಲ್ಲೆಯ ಧರಂಗಾವ್‌ನಲ್ಲಿ ಎಂಎಲ್‌ಎ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಏರ್ಪಾಡಾಗುತ್ತು ಹಾಗೂ 12ರಂದು ಫೈನಲ್ ಪಂದ್ಯ ನಡೆಯುತ್ತಿತ್ತು. ಪಂದ್ಯಕ್ಕೆ ಆಯೋಜಕರು ಧರಂಗಾಂವ್ ಪುರಸಭೆಯ ಅಧ್ಯಕ್ಷರನ್ನು ಆಹ್ವಾನಿಸಿರಲಿಲ್ಲ. ಇದರಿಂದ ಕೋಪಗೊಂಡ ಅವರು, ಅಂತಿಮ ಪಂದ್ಯ ನಡೆಯುವ ವೇಳೆಯೇ ಟ್ರ್ಯಾಕ್ಟರ್ ಕಳಿಸಿದ್ದಾರೆ. ಆ ಟ್ರ್ಯಾಕ್ಟರ್‌ ಪಿಚ್ ಮೇಲೆ ನುಗ್ಗಿ ಟರ್ಫ್ ಅನ್ನು ಅಲ್ಲಾಡಿಸಿ ಪಿಚ್ ಅನ್ನು ನಾಶ ಮಾಡಿದೆ.
ಘಟನೆಯಿಂದ ಆಟಗಾರರು, ವೀಕ್ಷಕರು ಹಾಗೂ ಆಯೋಜಕರು ಕಕ್ಕಾಬಿಕ್ಕಿಯಾದರು. ಮೈದಾನದಲ್ಲಿ ಆಟುವಾಡುತ್ತಿರುವಾಗಲೇ ಟ್ರ್ಯಾಕ್ಟರ್ ನುಗ್ಗಿದಾಗ ಒಂದು ಕ್ಷಣ ಬೆಚ್ಚಿಬಿದ್ದ ಆಟಗಾರರು ನೋಡನೋಡುತ್ತಿದ್ದಂತೆ ಪಿಚ್ ಯದ್ವತದ್ವ ಕೆಡಿಸಲಾರಂಭಿಸಿದ. ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ. ಆದರೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ


Spread the love
Share:

administrator

Leave a Reply

Your email address will not be published. Required fields are marked *