Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಶ್ಚಿಮ ಬಂಗಾಳ: ರ್ಯಾಲಿ ನಡುವೆ ‘ಜಲ್ಮುರಿ’ ಸವಿದ ಪ್ರಧಾನಿ ಮೋದಿ; ರಾತ್ರೋರಾತ್ರಿ ಫೇಮಸ್ ಆಯ್ತು ಪುಟ್ಟ ಅಂಗಡಿ!

Spread the love

ಪ್ರಧಾನಿ ಮೋದಿ ದಿಢೀರ್ ಭೇಟಿಯಿಂದ ಸಣ್ಣ ಜಲ್ಮುರಿ ಅಂಗಡಿಗೆ ಈಗ ಜನವೋ ಜನ, ಪಶ್ಚಿಮ ಬಂಗಾಳದಲ್ಲಿ ಸರಣಿ ರ‍್ಯಾಲಿಗಳ ಬಳಿಕ ಅಂಗಡಿಗೆ ತೆರಳಿ ಜಲ್ಮುರಿ ಖರೀದಿಸಿ ಸವಿದಿದ್ದಾರೆ, ಸ್ಥಳೀಯರಿಗೂ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಸರಣಿ ರ‍್ಯಾಲಿಗಳ ಬಳಿಕ ಪ್ರಧಾನಿ ಮೋದಿ, ಸ್ಥಳೀಯರ ಜೊತೆ ಸೇರಿ ‘ಜಲ್ಮುರಿ’ ಸವಿದು ಖುಷಿಪಟ್ಟ ವಿಡಿಯೋ ಭಾರಿ ವೈರಲ್ ಆಗಿದೆ.ಪುರುಲಿಯಾ, ಜಾರ್ಗ್ರಾಮ್, ಮೇದಿನಿಪುರ್ ಮತ್ತು ಬಿಷ್ಣುಪುರ್‌ನಲ್ಲಿ ಒಂದರ ಹಿಂದೆ ಒಂದರಂತೆ ನಾಲ್ಕು ರ‍್ಯಾಲಿಗಳನ್ನು ಮುಗಿಸಿದ ಪ್ರಧಾನಿ ನರೇಂದ್ರ ಮೋದಿ, ಸ್ವಲ್ಪ ರಿಲ್ಯಾಕ್ಸ್ ಮೂಡ್‌ಗೆ ಜಾರಿದರು. ಪಶ್ಚಿಮ ಬಂಗಾಳದ ಫೇಮಸ್ ಸ್ಟ್ರೀಟ್ ಸ್ನ್ಯಾಕ್ ‘ಜಲ್ಮುರಿ’ಯನ್ನು ಒಂದು ಸಣ್ಣ ಅಂಗಡಿ ಬಳಿ ನಿಂತು ಸವಿದರುಪ್ರಧಾನಿ ಮೋದಿ ತಮ್ಮ ರ್ಯಾಲಿಗಳ ನಡುವೆ ದಿಢೀರ್ ಆಗಿ ಜಲ್ಮುರಿ ಸವಿಯಲು ಅಂಗಡಿಗೆ ತೆರಳಿದ್ದಾರೆ. ಇದು ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಈ ಅಂಗಡಿಗೆ ಜನ ಸಾಗರವೇ ಹರಿದು ಬರುತ್ತಿದೆ. ಮೋದಿ ತೆರಳಿದ ಬಳಿಕ ಇದೀಗ ಇದೇ ಅಂಗಡಿಯಲ್ಲಿ ಜಲ್ಮುರಿ ಸವಿಯಲು ಜನರು ಆಗಮಿಸುತ್ತಿದ್ದಾರೆ.ಪ್ರಧಾನಿ ಮೋದಿ ದಿಢೀರ್ ಭೇಟಿಯಿಂದ ಜಲ್ಮುರಿ ಅಂಗಡಿ ಭಾರಿ ಜನಪ್ರಿಯಗೊಂಡಿದೆ. ಸುತ್ತಮುತ್ತಲಿನವರು ಮಾತ್ರವಲ್ಲ, ಪಕ್ಕದ ಜಿಲ್ಲೆಗಳಿಂದಲೂ ಜನರು ಆಗಮಿಸಿ ಹಲವು ಖಾದ್ಯ ಸವಿಯುತ್ತಿದ್ದಾರೆ. ಇತ್ತ ಮಾಧ್ಯಮಗಳು ಇದೀಗ ಶಾಪ್ ಮಾಲೀಕನ ಹಿಂದೆ ಬಿದ್ದಿದೆ. ಮೋದಿ ಸಣ್ಣ ಭೇಟಿ ಇದೀಗ ಅಂಗಡಿ ಮಾಲೀಕನ ವ್ಯಾಪಾರವನ್ನು ದುಪ್ಪಟ್ಟು ಮಾಡಿದೆ.ಜಲ್ಮುರಿ ಸವಿಯುತ್ತಾ ಪ್ರಧಾನಿ ಮೋದಿ ಸ್ಥಳೀಯರ ಜೊತೆ ಬೆರೆತಿದ್ದಾರೆ. ಅವರಿಗೂ ಈ ಸಾಂಪ್ರದಾಯಿಕ ತಿಂಡಿಯನ್ನು ಹಂಚಿದರು. ಪ್ರಧಾನಿ ಭೇಟಿ ನೀಡಿದ್ದರಿಂದ ಈ ಪುಟ್ಟ ತಿಂಡಿ ಅಂಗಡಿಯ ಸುತ್ತ ಜನವೋ ಜನ. ಕ್ಷಣಾರ್ಧದಲ್ಲಿ ದೊಡ್ಡ ಗುಂಪೇ ಸೇರಿತು. ಆ ಪುಟ್ಟ ಅಂಗಡಿಯಲ್ಲಿ ಬಗೆಬಗೆಯ ನಮ್ಕೀನ್ ಮತ್ತು ಮಿಕ್ಸ್ಚರ್ ಪ್ಯಾಕೆಟ್‌ಗಳಿದ್ದವು. ಜೊತೆಗೆ, ‘ಮುರಿ’ (ಕಡ್ಲೆಪುರಿ)ಯನ್ನು ಅಂದವಾಗಿ ಬಾಟಲಿಗಳಲ್ಲಿ ತುಂಬಿಡಲಾಗಿತ್ತು. ಪ್ರಧಾನಿ ಭೇಟಿಯಿಂದಾಗಿ ಈ ಅಂಗಡಿಗೆ ದಿಢೀರ್ ಜನಸಾಗರವೇ ಹರಿದುಬಂತು.ಮೋದಿ ತಮ್ಮ ಎಂದಿನ ಶೈಲಿಯ ಬಿಳಿ ಕುರ್ತಾ, ಕಡು ನೀಲಿ ಬಣ್ಣದ ವೇಸ್ಟ್‌ಕೋಟ್ ಮತ್ತು ಬಿಜೆಪಿ ಕಮಲದ ಚಿಹ್ನೆ ಇರುವ ಕೆಂಪು ಶಾಲು ಧರಿಸಿದ್ದರು. ಅವರ ಸುತ್ತಲೂ ಸೇರಿದ್ದ ಜನ, ಅದರಲ್ಲೂ ವಿಶೇಷವಾಗಿ ಮಹಿಳೆಯರು ನಗುತ್ತಾ, ಖುಷಿಯಿಂದ ಈ ಕ್ಷಣವನ್ನು ಕಣ್ತುಂಬಿಕೊಂಡರು. ಹಿನ್ನೆಲೆಯಲ್ಲಿ ಹಲವರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಫೋಟೋ, ವಿಡಿಯೋ ತೆಗೆಯುತ್ತಿದ್ದರು.ಈ ಕ್ಷಣದ ಫೋಟೋಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ಪ್ರಧಾನಿ ಮೋದಿ, “ಭಾನುವಾರದಂದು ಪಶ್ಚಿಮ ಬಂಗಾಳದಲ್ಲಿ ನಾಲ್ಕು ರ‍್ಯಾಲಿಗಳ ಬಿಡುವಿಲ್ಲದ ಕಾರ್ಯಕ್ರಮದ ನಡುವೆ, ಜಾರ್ಗ್ರಾಮ್‌ನಲ್ಲಿ ರುಚಿಕರವಾದ ಜಲ್ಮುರಿ ಸವಿದ ಕ್ಷಣ” ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ, ನಾಲ್ಕು ಕಡೆ ‘ವಿಜಯ್ ಸಂಕಲ್ಪ್ ಸಭಾ’ ಉದ್ದೇಶಿಸಿ ಮಾತನಾಡಿದ್ದ ಮೋದಿ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.


Spread the love
Share:

administrator

Leave a Reply

Your email address will not be published. Required fields are marked *