Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಚದ ಕೆಳಗೆ ಅವಿತಿದ್ದ ಕಾಡುಪ್ರಾಣಿ: ಸಮಯಪ್ರಜ್ಞೆಯಿಂದ ತಪ್ಪಿದ ಭೀಕರ ದುರಂತ

Spread the love

ಮೈಸೂರು:  ಚಿರತೆಯೊಂದು ಮನೆಯೊಳಗೆ ನುಗ್ಗಿ ಸೀದಾ ರೂಮ್ ವೊಂದರ ಮಂಚದ ಕೆಳಗೆ ಕುಳಿತ ಘಟನೆ ಮೈಸೂರಿನ ಸಿದ್ದಾರ್ಥ ಬಡಾವಣೆ ನಡೆದಿದೆ.  ರೂಮ್ ಗೆ ಎಂಟ್ರಿಕೊಟ್ಟ ಅತ್ತೆಯನ್ನು ಸೊಸೆ  ಪ್ರಾಣದ ಹಂಗು ತೊರೆದು ಸಮಯಪ್ರಜ್ಞೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.ಸಿದ್ದಾರ್ಥ ಬಡಾವಣೆಯ  ನಿವಾಸಿ   ಸುರೇಶ್ ಎಂಬುವವರ ಮನೆಗೆ ಬೆಳಿಗ್ಗೆ ಏಕಾಏಕಿ ನುಗ್ಗಿದ ಚಿರತೆಯು, ಸುರೇಶ್ ಅವರ ತಾಯಿ  ಶೈಲಜಾ ಅವರು ಮಲಗಿದ್ದ ಕೊಠಡಿಯನ್ನು ಪ್ರವೇಶಿಸಿ ಮಂಚದ ಕೆಳಗೆ ಅವಿತು ಕುಳಿತಿತ್ತು. ಈ ವೇಳೆ ಮನೆಯಲ್ಲಿದ್ದ ಸುರೇಶ್ ಅವರ ಪತ್ನಿ ಸುಜಾತಾ ಅವರು ಕೊಣೆಗ ಆಗಮಿಸಿದ್ದರು. ಈ ವಳೆ  ಚಿರತೆಯನ್ನು ಕಂಡು ತಕ್ಷಣವೇ ಎಚ್ಚೆತ್ತುಕೊಂಡು, ಮಲಗಿದ್ದ ಅತ್ತೆಯನ್ನು ಸುರಕ್ಷಿತವಾಗಿ ಅಲ್ಲಿಂದ ಹೊರಗೆ ಕರೆತಂದಿದ್ದಾರೆ. ಬಳಿಕ ತಕ್ಷಣವೇ ಕೊಠಡಿಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಆರ್.ಎಫ್.ಒ ಮತ್ತು ಸಿಬ್ಬಂದಿಗಳ ತಂಡವು ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿತು. ಮನೆಯೊಳಗೆ ಅರಿವಳಿಕೆ ತಜ್ಞರ ತಂಡವು ಚಿರತೆಗೆ ಅರವಳಿಕೆ ಚುಚ್ಚುಮದ್ದು (Tranquilizer) ನೀಡುವಲ್ಲಿ ಯಶಸ್ವಿಯಾಯಿತು. ಪ್ರಜ್ಞೆ ತಪ್ಪಿದ ಚಿರತೆಯನ್ನು ಬಲೆ ಮತ್ತು ಬೋನಿನ ಸಹಾಯದಿಂದ ಸುರಕ್ಷಿತವಾಗಿ ಹೊರಕ್ಕೆ ತರಲಾಯಿತು.
ಅರಣ್ಯ ಇಲಾಖೆಯ ಮೂಲಗಳ ಪ್ರಕಾರ, ಸೆರೆಹಿಡಿಯಲಾದ ಚಿರತೆಯು ಸುಮಾರು 4 ರಿಂದ 5 ವರ್ಷ ಪ್ರಾಯದ್ದಾಗಿದ್ದು, ಸದ್ಯ ಅದನ್ನು ಬನ್ನೇರುಘಟ್ಟ ಅಥವಾ ಸಮೀಪದ ಸಂರಕ್ಷಿತ ಅರಣ್ಯಕ್ಕೆ ಬಿಡಲು ತೀರ್ಮಾನಿಸಲಾಗಿದೆ. ಚಾಮಂಡಿ ಬೆಟ್ಟದ ತಪ್ಪಲಿನಲ್ಲಿರುವ ಈ ಪ್ರದೇಶಕ್ಕೆ ಚಿರತೆ ಆಹಾರ ಹುಡುಕುತ್ತಾ ಬಂದಿರಬಹುದು ಎಂದು ಶಂಕಿಸಲಾಗಿದೆ. ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದು, ಸುಜಾತಾ ಅವರ ಧೈರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ


Spread the love
Share:

administrator

Leave a Reply

Your email address will not be published. Required fields are marked *