Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೆಹಲಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ: ರನ್‌ವೇನಲ್ಲಿ ಆಕಾಸ ಮತ್ತು ಸ್ಪೈಸ್‌ಜೆಟ್ ವಿಮಾನಗಳ ನಡುವೆ ಡಿಕ್ಕಿ

Spread the love

ನವದೆಹಲಿ:  ಆಕಾಸ ಮತ್ತು ಸ್ಪೈಸ್ ಜೆಟ್  ವಿಮಾನಗಳ ನಡುವೆ ನಡೆದ ಡಿಕ್ಕಿಯಲ್ಲಿ  ಎರಡೂ ವಿಮಾನಗಳ ರೆಕ್ಕೆಗಳಿಗೆ ಹಾನಿಯಾದ ಘಟನೆ ದೆಹಲಿಯ   ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (IGI) ಟರ್ಮಿನಲ್ 1ರ ಟ್ಯಾಕ್ಸಿವೇನಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಮಧ್ಯಾಹ್ನ ಸುಮಾರು 2:15ರ ಸುಮಾರಿಗೆ ಲೇಹ್‌ನಿಂದ ಆಗಮಿಸಿದ್ದ ಸ್ಪೈಸ್‌ಜೆಟ್ ವಿಮಾನವು ರನ್‌ವೇನಿಂದ ಪಾರ್ಕಿಂಗ್ ಬೇ ಕಡೆಗೆ ತೆರಳುತ್ತಿತ್ತು. ಈ ವೇಳೆ ದೆಹಲಿಯಿಂದ ಹೈದರಾಬಾದ್‌ಗೆ (ವಿಮಾನ ಸಂಖ್ಯೆ QP 1406) ಪ್ರಯಾಣಿಕರನ್ನು ಹೊತ್ತು ಹಾರಾಟಕ್ಕೆ ಸಿದ್ಧವಾಗಿ ಟ್ಯಾಕ್ಸಿವೇನಲ್ಲಿ ನಿಂತಿದ್ದ ಆಕಾಸ ಏರ್ ವಿಮಾನದ ಹಿಂಭಾಗದ ರೆಕ್ಕೆಗೆ (Stabilizer) ಸ್ಪೈಸ್‌ಜೆಟ್‌ನ ರೆಕ್ಕೆಯ ತುದಿ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಕಾಸ ಏರ್ ವಿಮಾನದ ಎಡಭಾಗದ  Horizontal Stabiliser  ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಸ್ಪೈಸ್‌ಜೆಟ್‌ನ ಬಲ ರೆಕ್ಕೆಯ ತುದಿ (Right Winglet) ಜಖಂಗೊಂಡಿದೆ.

ಘಟನೆಯ ಸಮಯದಲ್ಲಿ ಎರಡೂ ವಿಮಾನಗಳಲ್ಲಿ ಸಿಬ್ಬಂದಿ ಸೇರಿದಂತೆ ನೂರಾರು ಪ್ರಯಾಣಿಕರಿದ್ದರು. ಅನಿರೀಕ್ಷಿತ ಡಿಕ್ಕಿಯಿಂದ ವಿಮಾನದ ಒಳಗಿದ್ದ ಪ್ರಯಾಣಿಕರು ಕೆಲಕಾಲ ಆತಂಕಕ್ಕೊಳಗಾದರೂ, ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಘಟನೆಯ ನಂತರ ಆಕಾಸ ಏರ್ ವಿಮಾನದಲ್ಲಿದ್ದ ಪ್ರಯಾಣಿಕರನ್ನು ತಕ್ಷಣವೇ ಸುರಕ್ಷಿತವಾಗಿ ಕೆಳಗಿಳಿಸಿ, ಪರ್ಯಾಯ ವಿಮಾನದ ಮೂಲಕ ಹೈದರಾಬಾದ್‌ಗೆ ಪ್ರಯಾಣ ಬೆಳೆಸಲು ವ್ಯವಸ್ಥೆ ಮಾಡಲಾಯಿತು. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಘಟನೆ ಕುರಿತಂತೆ  ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.


Spread the love
Share:

administrator

Leave a Reply

Your email address will not be published. Required fields are marked *