Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿಮಾನದಲ್ಲಿ ನಟಿ ಉರ್ವಿ ಕೊಠಾರಿಗೆ ಸಹಪ್ರಯಾಣಿಕನಿಂದ ಕಿರುಕು*ಳ; ವಿಡಿಯೋ ವೈರಲ್!

Spread the love

ಬೆಂಗಳೂರು: ವಿಮಾನದಲ್ಲಿ ಸಹ ಪ್ರಯಾಣಿಕನೊಬ್ಬ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ನಟಿ ಮತ್ತು ಕಂಟೆಂಟ್ ಕ್ರಿಯೇಟರ್ ಆಗಿರುವ ಉರ್ವಿ ಕೊಠಾರಿ ಎಂಬವರು ಆರೋಪಿಸಿದ್ದು, ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಂಡು ತಮಗಾದ ಅಹಿತಕರ ಅನುಭವವನ್ನು ವಿವರಿಸಿದ್ದಾರೆ.

ಹಂಚಿಕೊಂಡ ವಿಡಿಯೊ ಜೊತೆಗೆ ‘ಇದಕ್ಕಾಗಿಯೇ ಮಹಿಳೆಯರು ಯಾವಾಗಲೂ ಜಾಗರೂಕರಾಗಿರುತ್ತಾರೆ. ವಿಮಾನದಲ್ಲಿಯೂ ಸಹ’ ಎಂದು ಅಡಿಬರಹ ನೀಡಿದ್ದಾರೆ. ಈ ವಿಡಿಯೊವನ್ನು 1.8 ಕೋಟಿ ಜನರು ವೀಕ್ಷಿಸಿದ್ದಾರೆ.

ಅಸಲಿಗೆ ವಿಮಾನದಲ್ಲಿ ಆಗಿದ್ದೇನು?

ಏಪ್ರಿಲ್ 1ರಂದು ಉರ್ವಿ ಅವರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಹಿಂದೆ ಕುಳಿತುಕೊಂಡಿದ್ದ ಸಹ ಪ್ರಯಾಣಿಕನೊಬ್ಬ ಸೀಟಿನ ಮೇಲೆ ಕೈ ಹಾಗೂ ಕಾಲುಗಳು ಹಾಕುತ್ತಲೇ ಇದ್ದರು. ಆಗ ಉರ್ವಿ ಕೊಠಾರಿ ಅವರು ವಿಮಾನ ಸಿಬ್ಬಂದಿಗೆ ಈ ವಿಚಾರ ತಿಳಿಸಿದ್ದಾರೆ. ಆ ಕೂಡಲೇ ಸಿಬ್ಬಂದಿ ಸಹ ಪ್ರಯಾಣಿಕನಿಗೆ ಆ ರೀತಿ ಮಾಡಬೇಡಿ ಎಂದು ಬುದ್ಧಿ ಹೇಳಿದ್ದಾರೆ. ಆದರೆ, ಕೆಲವು ನಿಮಿಷಗಳ ನಂತರ ಮತ್ತೆ ಆ ವ್ಯಕ್ತಿ ಬೆರಳುಗಳು ಹಾಗೂ ಕಾಲುಗಳಿಂದ ನಟಿಯನ್ನು ಸ್ಪರ್ಶಿಸಲು ಯತ್ನಿಸುತ್ತಿದ್ದ. ಆಗ ಸಿಬ್ಬಂದಿ ಬಳಿ ಉರ್ಮಿ ಅವರು ಸೀಟ್ ಬದಲಾವಣೆ ಬಗ್ಗೆ ಕೇಳಿಕೊಂಡರು. ನಂತರ ಆ ಸೀಟನ್ನು ಬದಲಾಯಿಸಲಾಯಿತು ಎಂದು ವಿವರಿಸಿದ್ದಾರೆ.

ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. ಹಲವು ಜನರು ಉರ್ವಿ ಕೊಠಾರಿಗೆ ಬೆಂಬಲ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *