ಅನುಮತಿಯಿಲ್ಲದೆ ಯುವಕನನ್ನು ಮುಟ್ಟಿ ಕಿರಿಕ್; ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ.

ರೈಲ್ವೆ ನಿಲ್ದಾಣದಲ್ಲಿ ಯುವತಿಯೊಬ್ಬಳು ಮಾಡಿದ ಎರಡು ರೀಲ್ಸ್ ವೈರಲ್ ಆಗಿವೆ. ಒಂದರಲ್ಲಿ ತನ್ನನ್ನು ಮುಟ್ಟಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಹಲ್ಲೆ ಮಾಡಿದರೆ, ಮತ್ತೊಂದರಲ್ಲಿ ತಾನೇ ಯುವಕನೊಬ್ಬನನ್ನು ಅನುಮತಿಯಿಲ್ಲದೆ ಮುಟ್ಟಿದ್ದಾಳೆ. ಹುಡುಗ, ಮಹಿಳೆಯನ್ನು ಟಚ್ ಮಾಡಿದ್ರೆ ಪರಿಣಾಮ ಭಯಂಕರವಾಗಿರುತ್ತದೆ.ಯುವತಿ ವಿಡಿಯೋ ವೈರಲ್
ರೈಲ್ವೆ ನಿಲ್ದಾಣದಲ್ಲಿ ರೀಲ್ಸ್ ಮಾಡುತ್ತಿದ್ದ ಯುವತಿ ವಿಡಿಯೋ ನೋಡುಗರನ್ನು ಕೆರಳಿಸಿವೆ. ಈ ಎರಡು ವಿಡಿಯೋಗಳು ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಪ್ರಶ್ನೆ ಮೂಡಿಸುತ್ತಿವೆ. ರೈಲ್ವೆ ನಿಲ್ದಾಣಗಳಲ್ಲಿ ಇಂತಹ ಘಟನೆಗಳು ಹೆಚವ್ಚಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಇಂಥಾ ಹುಚ್ಚಾಟಗಳಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪುರುಷರ ಪ್ರಶ್ನೆ
ಯುವತಿಯೊಬ್ಬಳ ಎರಡು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಒಂದರಲ್ಲಿ ವ್ಯಕ್ತಿಯೊಬ್ಬ ತನ್ನನ್ನು ಟಚ್ ಮಾಡಿದ್ದಾನೆಂದು ಆತನ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ. ಮತ್ತೊಂದು ವಿಡಿಯೋದಲ್ಲಿ ಚಲಿಸುತ್ತಿದ್ದ ರೈಲಿನೊಳಗೆ ರೀಲ್ಸ್ಗೆ ಕುಣಿಯುತ್ತಾ ಅಲ್ಲಿದ್ದ ಯುವಕನನ್ನು ಆತನ ಅನುಮತಿ ಇಲ್ಲದೇ ಟಚ್ ಮಾಡ್ತಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು, ಹುಡುಗಿಯರು ಏನು ಬೇಕಾದ್ರೂ ಮಾಡಬಹುದಾ ಎಂಬ ಪ್ರಶ್ನೆಯನ್ನು ಪುರುಷರು ಪ್ರಶ್ನೆ ಮಾಡುತ್ತಾರೆ.ಅನುಚಿತ ವರ್ತನೆ ಅಲ್ಲವಾ?
ಈ ಎರಡು ವಿಡಿಯೋಗಳು ಅನೇಕ ನೆಟ್ಟಿಗರನ್ನು ಕೆರಳಿಸಿವೆ. ಫೋನ್ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯನ್ನು ನಿಂದಿಸುತ್ತಾ ಹಲ್ಲೆ ಮಾಡುತ್ತಾಳೆ. ಆತ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಯುವತಿ ಹೇಳಿದ್ದಾಳೆ. ಇನ್ನು ಎರಡನೇ ಕ್ಲಿಪ್ನಲ್ಲಿ ಇದೇ ಯುವತಿ ವ್ಯಕ್ತಿಯನ್ನು ಅನುಮತಿಯಿಲ್ಲದೆ ಮುಟ್ಟುತ್ತಾಳೆ. ಇದು ಸಹ ಅನುಚಿತ ವರ್ತನೆ ಅಲ್ಲವಾ? ಒಂದು ವೇಳೆ ಆ ಯುವಕ ತಿರುಗಿ ಹಲ್ಲೆ ಮಾಡಿದ್ದಾರೆ ಏನಾಗುತ್ತಿತ್ತು? ಮತ್ತೆ ಆತನ ಮೇಲೆಯೇ ಈಕೆ ಆರೋಪ ಮಾಡುತ್ತಿದ್ದಳು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮುಂಬೈನಲ್ಲಿ ನಡೆದ ಘಟನೆ
ಮುಂಬೈನ ಬಾಂದ್ರಾ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ನೆಟ್ಟಿಗರು ಯುವತಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸರಿಗೆ ವಿಡಿಯೋ ಟ್ಯಾಗ್ ಮಾಡುತ್ತಿದ್ದಾರೆ. ಈ ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸರು, ಇದು ರೈಲ್ವೆ ಇಲಾಖೆ (Government Railway Police- GRP) ವ್ಯಾಪ್ತಿಯಲ್ಲಿ ನಡೆದ ಘಟನೆ ಆಗಿದೆ. ರೈಲ್ವೆ ಪೊಲೀಸರ ವ್ಯಾಪ್ತಿಗೆ ಪ್ರಕರಣ ಬರುತ್ತದೆ. ಸದ್ಯಕ್ಕೆ ಈ ಸಂಬಂಧ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.