ನಕಲಿ ಶೇರು ಮಾರುಕಟ್ಟೆ ನಂಬಿ 4 ಲಕ್ಷ ಕಳೆದುಕೊಂಡ ಯುವಕ

ಪಡುಬಿದ್ರಿ : ಯುವಕನೊಬ್ಬ ನಕಲಿ ಶೇರು ಮಾರುಕಟ್ಟೆ ಲಿಂಕ್ ಗಳನ್ನು ನಂಬಿ ಬರೋಬ್ಬರಿ 4 ಲಕ್ಷ ಹಣವನ್ನು ಕಳೆದುಕೊಂಡ ಘಟನೆ ನಡೆದಿದೆ.

ಕಾಪು ನಿವಾಸಿ ಯುವಕ ಉತ್ತಮ್ ವಂಚನೆಗೊಳಗಾದ ಯುವಕ. ಉತ್ತಮ್ ತಮ್ಮ ಇನ್‌ಸ್ಟಾಗಾಂ ನಲ್ಲಿ ಸ್ಟಾಕ್ ಮಾರ್ಕೇಟ್ ಬಗ್ಗೆ ಸರ್ಚ್ ಮಾಡುತ್ತಿರುವಾಗ 6 Investment Alliance A Team ಎಂಬ ಹೆಸರಿನ ವಾಟ್ಸಪ್ ಗ್ರೂಪ್ ಲಿಂಕ್ ಇದ್ದು, ಅದರಲ್ಲಿ ಪಿರ್ಯಾದಿದಾರರು Intrested ಎಂಬುದಾಗಿ ಸಂದೇಶ ಕಳುಹಿಸಿದ್ದು, ನಂತರ ಪಿರ್ಯಾದಿದಾರರ ಮೊಬೈಲ್‌ಗೆ ನಂಬ್ರಕ್ಕೆ ದಿನಾಂಕ 29/09/2025 ರಂದು ಮದ್ಯಾಹ್ನ 13:21 ಗಂಟೆಗೆ http://m.confier –llc.com/register?u=50656237 ಎಂಬ ಲಿಂಕ್ ಕಳುಹಿಸಿ ಸದ್ರಿ ಲಿಂಕ್ ಓಪನ್ ಮಾಡಿ confier ಎಂಬ ಹೆಸರಿನ ಆಪ್ ಡೌನ್‌ಲೋಡ್ ಮಾಡಿದ್ದು ಪಿರ್ಯಾದಿದಾರರಿಗೆ ವೈಯಕ್ತಿಕ ಡಾಟಾ ಭರ್ತಿ ಮಾಡಲು ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು ತನ್ನ ವೈಯಕ್ತಿಕ ಡಾಟಾ ಭರ್ತಿ ಮಾಡಿ ನಂತರ ಸದ್ರಿ ಲಿಂಕ್‌ನಲ್ಲಿ ಇತರರ ಸ್ಟಾಕ್ ಮಾರ್ಕೇಟ್ ವ್ಯವಹಾರ ಪರಿಶೀಲಿಸುತ್ತಿದ್ದು.
ನಂತರ ಸದ್ರಿ 6 Investment Alliance A Team ಎಂಬ ಹೆಸರಿನ ವಾಟ್ಸಪ್ ಗ್ರೂಪ್‌ನಲ್ಲಿ ಇದ್ದವರು ಸದ್ರಿ confier ಆಪ್ ನಲ್ಲಿ ಸ್ಟಾಕ್ ಮಾರ್ಕೇಟ್‌ಗೆ ಇನ್‌ವೆಸ್ಟ್ ಮಾಡಿ, ಹಣ ಗಳಿಸಿರುವ ಬಗ್ಗೆ ಪಿರ್ಯಾದಿದಾರರಿಗೆ ಮೆಸೇಜ್ ಮಾಡುತ್ತಿದ್ದು. ಅದನ್ನು ನಂಬಿದ ಪಿರ್ಯಾದಿದಾರರು ಸದ್ರಿ confier ಆಪ್ ನಲ್ಲಿ ದಿನಾಂಕ 06/11/2025 ರಂದು ನಾನು ರೂ 50,000/ ರೂ ಸ್ಟಾಕ್ ಮಾರ್ಕೇಟ್‌ಗೆ ಇನ್‌ವೆಸ್ಟ್ ಮಾಡಿದ್ದು, ನಂತರ ಸದ್ರಿ ಹಣದಿಂದ ಪಿರ್ಯಾದಿದಾರರು ರೂಪಾಯಿ 10000/ ರೂ ವಿತ್‌ಡ್ರಾ ಮಾಡಿದ್ದು, ಅದರ ನಂತರ ಪಿರ್ಯಾದಿದಾರರು ಅದೇ ದಿನ ಹಂತ ಹಂತವಾಗಿ ಒಟ್ಟು 5,00,000/ (ಐದು ಲಕ್ಷ ರೂ) ವನ್ನು ಸ್ಟಾಕ್ ಮಾರ್ಕೇಟ್‌ಗೆ ಇನ್‌ವೆಸ್ಟ್ ಮಾಡಿದ್ದು, ನಂತರ ಉಳಿದ 4,90,000 ಹಣವನ್ನು ವಾಪಾಸು ತೆಗೆಯಲು ಹೋದಾಗ ಆಗದೇ ಇರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 131/2025 ಕಲಂ: 66(D) IT Act 2008, 318(4), 319(2) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.