Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕತ್ರಿನಾ ಕೈಫ್, ವಿಕ್ಕಿ ಕೌಶಾಲ್ ಮನೆಗೆ ಗಂಡು ಮಗು ಆಗಮನ! ಸಂತಸದ ಸುದ್ದಿ ಹಂಚಿಕೊಂಡ ಬಾಲಿವುಡ್ ಜೋಡಿ

Spread the love

ಬಾಲಿವುಡ್‌ನ ಜೋಡಿ ಕತ್ರಿನಾ ಕೈಫ್ (Katrina Kaif) ಹಾಗೂ ವಿಕ್ಕಿ ಕೌಶಾಲ್ (Vicky Kaushal) ಮನೆಗೆ ಹೊಸ ಅತಿಥಿ ಆಗಮನವಾಗಿದೆ. 2021ರ ಡಿಸೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ತಾರಾ ದಂಪತಿಗಳು ಇತ್ತೀಚೆಗೆ ಬೇಬಿ ಶೋವರ್ ಫೋಟೋಗಳನ್ನ ಹಂಚಿಕೊಂಡು ಸಿಹಿ ಸುದ್ದಿಯನ್ನ ನೀಡಿತ್ತು. ಇದೀಗ ಗಂಡು ಮಗುವನ್ನ ಅದ್ಧೂರಿಯಾಗಿ ಸ್ವಾಗತಿಸಿದೆ ಈ ಜೋಡಿ.

ವಿಕ್ಕಿ ಕೌಶಾಲ್ ಹಾಗೂ ಕತ್ರಿನಾ ಕೈಫ್ ಈ ಸುದ್ದಿಯನ್ನ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ನವೆಂಬರ್ 7 ಈ ಸುದ್ದಿ ಹಂಚಿಕೊಂಡಿದ್ದು, ಬಾಲಿವುಡ್‌ನ ಆಪ್ತರಾದ ಪ್ರಿಯಾಂಕ ಚೋಪ್ರಾ, ಕರಿನಾ ಕಪೂರ್, ಶ್ರೇಯಾ ಗೋಷಾಲ್ ಹಾಗೂ ಕತ್ರಿನಾ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿಕ್ಕಿ ಹಾಗೂ ಕತ್ರಿನಾಗೆ ಶುಭ ಹಾರೈಸುತ್ತಿದ್ದಾರೆ

ಬಾಲಿವುಡ್ ತಾರಾ ದಂಪತಿಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮಗುವಿಗಾಗಿ ಕುಕ್ಕೆ ಸುಬ್ರಮಣ್ಯ ದೇವರ ಮೊರೆ ಹೋಗಿದ್ದ ಬಾಲಿವುಡ್ ತಾರಾ ಜೋಡಿಗೆ ಮಗು ಜನಿಸಿದೆ. ಮದುವೆ ಬಳಿಕ ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ಕತ್ರಿನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *