ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಪಾಯಲ್ ರಜಪೂತ್: ವೈಯಕ್ತಿಕ ಪ್ರಶ್ನೆಗೆ ನೊಂದು ವೇದಿಕೆಯಿಂದಲೇ ಹೊರನಡೆದ ನಟಿ!

ಸುದ್ದಿಗೋಷ್ಠಿಯಲ್ಲಿ ಎದುರಾಗುವ ಎಲ್ಲಾ ಪ್ರಶ್ನೆಗಳನ್ನು ಎದುರಿಸಲು ಸೆಲೆಬ್ರಿಟಿಗಳಿಂದ ಸಾಧ್ಯವಾಗುವುದಿಲ್ಲ. ಅದರಲ್ಲೂ ವೈಯಕ್ತಿಕ ಪ್ರಶ್ನೆ ಬಂದರೆ ಕಲಾವಿದರು ಹೆದರುತ್ತಾರೆ. ಈಗ ಡಾಲಿ ಧನಂಜಯ್ ಅವರ ‘ಹೆಡ್ ಬುಶ್’ ಸಿನಿಮಾ ನಾಯಕಿ ಪಾಯಲ್ ರಜಪೂತ್ (Payal Rajput) ಅವರಿಗೂ ಹೀಗೆಯೇ ಆಗಿದೆ. ವೈಯಕ್ತಿಕ ಚಾಲೆಂಜ್ಗಳ ಬಗ್ಗೆ ಅವರಿಗೆ ಪ್ರಶ್ನೆ ಎದುರಾಯಿತು. ಈ ಬಗ್ಗೆ ಮಾತನಾಡುತ್ತಾ ಅವರು ಕಣ್ಣೀರು ಹಾಕಿದರು. ಆ ಬಳಿಕ ವೇದಿಕೆಯಿಂದಲೇ ಎದ್ದು ಹೋದರು.
2018ರ ‘ಆರ್ಎಕ್ಸ್ 100’ ಸಿನಿಮಾ ಮೂಲಕ ಪಾಯಲ್ ರಜಪೂತ್ ಅವರು ಜನಪ್ರಿಯತೆ ಪಡೆದುಕೊಂಡರು. ಈ ಸಿನಿಮಾದಲ್ಲಿ ಅವರು ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. 2022ರಲ್ಲಿ ‘ಹೆಡ್ ಬುಷ್’ ಸಿನಿಮಾದಲ್ಲಿ ನಟಿಸಿದರು. ಡಾಲಿ ಧನಂಜಯ್ ಅವರು ಈ ಚಿತ್ರಕ್ಕೆ ಹೀರೋ ಆಗಿದ್ದರು. ಈ ಸಿನಿಮಾ ಅಂದುಕೊಂಡಷ್ಟು ದೊಡ್ಡ ಯಶಸ್ಸು ಕಾಣಲಿಲ್ಲ. ಈಗ ಅವರು ತೆಲುಗು, ತಮಿಳು ಸಿನಿಮಾ ರಂಗದಲ್ಲಿ ಬ್ಯುಸಿ ಇದ್ದಾರೆ.
ಈಗ ಪಾಯಲ್ ಮುಂಬರುವ ‘ಫಸ್ಟ್ ಟೈಮ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಪ್ರಮೋಷನ್ ವೇಳೆ ಅವರಿಗೆ ವೃತ್ತಿ ಜೀವನದ ಏರಿಳಿತ ಹಾಗೂ ಅವರು ವೈಯಕ್ತಿಕವಾಗಿ ಅನುಭವಿಸಿದ ತೊಂದರೆ ಬಗ್ಗೆ ಕೇಳಲಾಯಿತು. ಅವರಿಗೆ ಉಂಟಾಗಿದೆ ಎನ್ನಲಾದ ಖಿನ್ನತೆ ಬಗ್ಗೆಯೂ ಪ್ರಶ್ನಿಸಲಾಯಿತು. ಇದಕ್ಕೆ ಅವರು ಭಾವನಾತ್ಮಕವಾಗಿ ಉತ್ತರಿಸಿದರು.ಪಾಯಲ್ ರಜಪೂತ್ಗೆ ತಂದೆಯೇ ಎಲ್ಲವೂ ಆಗಿದ್ದರಂತೆ. ಆದರೆ, ಇತ್ತೀಚೆಗೆ ಅವರು ನಿಧನ ಹೊಂದಿದರು. ಈ ಸಮಸ್ಯೆಯಿಂದ ಹೊರ ಬರಲು ಅವರು ಯೋಗ ಮಾಡುವುದನ್ನು ಅಭ್ಯಾಸ ಮಾಡಿಕೊಂಡರು. ಆ ಬಳಿಕ ಪಾಯಲ್ ಮಾತನಾಡುತ್ತಾ ಒಮ್ಮೆ ಸಮಾಧಾನ ಮಾಡಿಕೊಂಡರು. ನಂತರ ಅವರು ಮತ್ತೆ ಅಳಲು ಆರಂಭಿಸಿದರು. ಕೊನೆಗೆ ತಡೆಯಲಾರದೆ ಸುದ್ದಿಗೋಷ್ಠಿಯಿಂದಲೇ ಹೊರ ನಡೆದರು. ಇದು ಸಾಕಷ್ಟು ಚರ್ಚೆಗೆ ಕಾರಣ ಆಯಿತು.ಈ ಬಗ್ಗೆ ಚರ್ಚೆ ನಡೆಯುತ್ತಿದೆ. ವೈಯಕ್ತಿವಾಗ ಹಾಗೂ ಕಟುವಾದ ಪ್ರಶ್ನೆಗಳನ್ನು ಕೇಳುವ ಮೊದಲು ಸ್ವಲ್ಪ ಯೋಚಿಸಬೇಕು ಎಂದು ಅನೇಕರು ತೆಲುಗು ಮಾಧ್ಯಮದವರಿಗೆ ಬುದ್ಧಿ ಹೇಳಿದ್ದಾರೆ.
