40 ವರ್ಷಗಳ ಸಂಗೀತ ಯುಗ ಅಂತ್ಯ: ಎಂಟಿವಿ ತನ್ನ ಬಹುತೇಕ ಮ್ಯೂಸಿಕ್ ಚಾನೆಲ್ಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಣೆ; ಸಂಗೀತ ಪ್ರಿಯರಿಗೆ ಶಾಕ್

ಮುಂಬೈ : ಕಳೆದ 40 ವರ್ಷಗಳಿಂದ ಸಂಗೀತ ಪ್ರಿಯರಿಗೆ ಸಂಗಿತದ ರಸದೌತಣ ಬಡಿಸುತ್ತಿದ್ದ ಎಂಟಿವಿ ಇದೀಗ ತನ್ನ ಮ್ಯೂಸಿಕ್ ಚಾನೆಲ್ ಗಳನ್ನು ಡಿಸೆಂಬರ್ ನಲ್ಲಿ ನಿಲ್ಲಿಸಲಿದೆ. ಈ ವರ್ಷದ ಅಂತ್ಯಕ್ಕೆ ತನ್ನ ಮ್ಯೂಸಿಕ್ ಚಾನೆಲ್ ಗಳಿಂದ ವಿದಾಯ ಹೇಳಲಿದೆಟ

MTV ಯ ಕಂಪನಿಯಾದ ಪ್ಯಾರಾಮೌಂಟ್ ಗ್ಲೋಬಲ್, ತನ್ನ ಸಂಗೀತ ಚಾನೆಲ್ಗಳಾದ MTV 80s, MTV ಮ್ಯೂಸಿಕ್, ಕ್ಲಬ್ MTV, MTV 90s ಮತ್ತು MTV ಲೈವ್ ಡಿಸೆಂಬರ್ 31, 2025 ರ ವೇಳೆಗೆ ವಿಶ್ವಾದ್ಯಂತ ಸ್ಥಗಿತಗೊಳ್ಳಲಿವೆ ಎಂದು ಘೋಷಿಸಿದೆ. ಯುಕೆ ಮತ್ತು ಐರ್ಲೆಂಡ್ನಲ್ಲಿ ಸ್ಥಗಿತಗೊಳಿಸುವಿಕೆಗಳು ಪ್ರಾರಂಭವಾಗಲಿದ್ದು, ನಂತರ ಯುರೋಪ್ನ ಉಳಿದ ಭಾಗಗಳು, ಬ್ರೆಜಿಲ್, ಫ್ರಾನ್ಸ್ ಮತ್ತು ಪೋಲೆಂಡ್ ಮತ್ತು ನಂತರ ಏಷ್ಯಾದಲ್ಲಿ ಸ್ಥಗಿತಗೊಳ್ಳುತ್ತವೆ.
ಆದರೆ ರಿಯಾಲಿಟಿ ಶೋಗಳು ಮತ್ತು ಮನರಂಜನಾ ಕಾರ್ಯಕ್ರಮಗಳಿಗೆ ಹೆಸರುವಾಸಿಯಾದ MTV HD ಮಾತ್ರ ಉಳಿದುಕೊಳ್ಳಲಿದೆ. 180 ದೇಶಗಳಲ್ಲಿ 1.4 ಶತಕೋಟಿಗೂ ಹೆಚ್ಚು ಜನರನ್ನು ರಂಜಿಸುತ್ತಿದ್ದ ಒಂದು ಕಾಲದಲ್ಲಿ ಪ್ರಬಲ ಜಾಗತಿಕ ಮನರಂಜನಾ ಬ್ರ್ಯಾಂಡ್ ಆಗಿದ್ದ MTV, ಇನ್ನು ಮುಂದೆ ನೆನಪು ಮಾತ್ರ. ಇದೀಗ ಡಿಜಿಟಲ್ ಮಾಧ್ಯಮಗಳು ಸಂಗೀತ ಕ್ಷೇತ್ರವನ್ನು ಆವರಿಸಿಕೊಂಡಿರುವ ಕಾರಣ ಎಂಟಿವಿ ತನ್ನ ಮ್ಯೂಸಿಕ್ ಚಾನೆಲ್ ಗಳನ್ನು ಬಂದ್ ಮಾಡಿದೆ.
1981 ರಲ್ಲಿ ‘ಲೇಡೀಸ್ ಅಂಡ್ ಜಂಟಲ್ಮೆನ್, ರಾಕ್ ಅಂಡ್ ರೋಲ್’ ಎಂಬ ಟ್ಯಾಗ್ ಲೈನ್ ನೊಂದಿಗೆ MTV ಪಾದಾರ್ಪಣೆ ಮಾಡಿತ್ತು. ಬಳಿಕ ನಡೆದಿದ್ದೆ ಇತಿಹಾಸ 1980 ಮತ್ತು 1990ರ ಸಮಯದಲ್ಲಿ ಎಂಟಿವಿ ಇಡೀ ವಿಶ್ವವನ್ನೇ ಆಳಿತ್ತು,. ಸಂಗೀತ ಕ್ಷೇತ್ರದ ದಿಗ್ಗಜರು ಎಂಟಿವಿ ಜೊತೆ ಕಾರ್ಯನಿರ್ವಹಿಸುತ್ತಿದ್ದರು. ಭಾರತ ಮತ್ತು ಏಷ್ಯಾದ ಬಹುಪಾಲು ಭಾಗಕ್ಕೆ, MTV ಜಗತ್ತಿಗೆ ಒಂದು ಕಿಟಕಿಯಾಗಿತ್ತು. ವೆಸ್ಟರ್ನ್ ಮೂಸಿಕ್ ಗಳನ್ನು ಎಂಟಿವಿ ಈ ಭಾಗಗಳಿಗೆ ತಲುಪಿಸಿತ್ತು. ಡಿಜಿಟಲ್ ಯುಗದಲ್ಲಿನ ಸವಾಲಗಳನ್ನು ಎದುರಿಸಲಾಗದೇ ಇದೀಗ ಎಂಟಿವಿ ಮುಚ್ಚುವ ಹಂತಕ್ಕೆ ಬಂದಿದೆ. ಇದು ಸಂಗೀತ ಪ್ರಿಯರಿಗೆ ಶಾಕಿಂಗ್ ಸುದ್ದಿ