Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಕಸವನ್ನು ರಸ್ತೆಗೆ ಎಸೆಯಬೇಡಿ”: BMTC ಬಸ್ಸಿನಲ್ಲಿ ಪ್ರಯಾಣಿಕರಿಗೆ ಸ್ವಚ್ಛತೆಯ ಪಾಠ ಮಾಡಿದ ಮಹಿಳೆ – ವಿಡಿಯೋ ವೈರಲ್

Spread the love

ಬೆಂಗಳೂರು: ಇತ್ತೀಚಿಗಂತೂ ರಸ್ತೆ ಬದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ, ಕಸ ಎಸೆದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ರೂ ಜನ ಮಾತ್ರ ಕ್ಯಾರೇ ಅನ್ನಲ್ಲ. ಇನ್ನು ಬಸ್ಸಿನಲ್ಲಿ ಪ್ರಯಾಣಿಸುವಾಗ ಗುಟ್ಕಾ, ವಿಮಲ್ ತಿಂದು ಅದರ ಪ್ಯಾಕೆಟನ್ನು ರಸ್ತೆಗೆ ಎಸೆಯುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬರು ಮಹಿಳೆಯೂ ಬೆಂಗಳೂರಿನ ಬಸ್ ಹತ್ತಿ ಪ್ರಯಾಣಿಕರಲ್ಲಿ ನಿಮ್ಮ ಟಿಕೆಟ್‌ಗಳನ್ನು ಎಲ್ಲೆಂದರಲ್ಲಿ ಬಿಸಾಕಬೇಡಿ. ಕಸವನ್ನು ಡಸ್ಟ್ ಬಿನ್‌ಗೆ ಹಾಕಿ ಪರಿಸರ ಸ್ವಚ್ಛತೆ ಕಾಪಾಡಿ ಎಂದು ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ. ಪ್ರಯಾಣಿಕರಿಗೆ ಸ್ವಚ್ಛತೆಯ ಪಾಠ ಮಾಡುತ್ತಿರುವ ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ಮಹಿಳೆಯ ಈ ಕೆಲಸವನ್ನು ಎಲ್ಲರೂ ಶ್ಲಾಘಿಸಿದ್ದಾರೆ.

ಬಸ್ಸಿನಲ್ಲಿ ಪ್ರಯಾಣಿಕರಿಗೆ ಮಹಿಳೆಯ ಸ್ವಚ್ಛತೆಯ ಪಾಠ

ಆರ್‌ ಬೆಂಗಳೂರು (r/ Bengaluru) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಬೆಂಗಳೂರಿನ ಬಸ್ಸಿನಲ್ಲಿ ಸ್ವಚ್ಛತೆಯ ಪಾಠ ಮಾಡುವ ಮಹಿಳೆಯ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಮಹಿಳಾ ಸ್ವಯಂಸೇವಕಿಯೊಬ್ಬರು ಬಸ್ಸಿನೊಳಗೆ ಹತ್ತಿ ಪ್ರಯಾಣಿಕರಲ್ಲಿ ಟಿಕೆಟ್, ಕಸ ಅಥವಾ ಗುಟ್ಕಾ ಪ್ಯಾಕೆಟ್‌ಗಳನ್ನು ರಸ್ತೆಗೆ ಎಸೆಯದಂತೆ ವಿನಂತಿಸುತ್ತಾರೆ. ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಬದಲಾವಣೆ ಒಳಗಿನಿಂದ ಪ್ರಾರಂಭವಾಗುತ್ತದೆ, ನಿಮ್ಮ ಕಸವನ್ನು ಮನೆಗೆ ತೆಗೆದುಕೊಂಡು ಹೋಗಿ!” ಎಂದು ಬರೆಯಲಾಗಿದೆ.

ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಬಿಎಂಟಿಸಿ ಬಸ್ ಒಂದರ ಮೆಟ್ಟಿಲುಗಳ ಮೇಲೆ ನಿಂತು, “ಪ್ರಯಾಣಿಕರು ಟಿಕೆಟ್‌ಗಳು, ಚಾಕೊಲೇಟ್ ಹಾಳೆಗಳು ಮತ್ತು ಪ್ಯಾನ್ ಪ್ಯಾರಾಗ್ ಪ್ಯಾಕೆಟ್‌ ನಂತಹ ಕಸವನ್ನು ಕಿಟಕಿಗಳ ಹೊರಗೆ ಎಸೆಯಬಾರದು” ಎಂದು ಕನ್ನಡದಲ್ಲಿ ಹೇಳುವುದನ್ನು ಕಾಣಬಹುದು ಆ ಬಳಿಕ ಹಿಂದಿಯಲ್ಲಿ ಅದೇ ಸಂದೇಶವನ್ನು ಮತ್ತೊಮ್ಮೆ ಹೇಳಿ ಪ್ರಯಾಣಿಕರು ಮಾಡುತ್ತಿರುವ ತಪ್ಪನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದ್ದಾರೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ ಈ ರೀತಿ ಉತ್ತಮ ಕೆಲಸ ಮಾಡುತ್ತಿರುವ ನಿಮಗೆ ಧನ್ಯವಾದಗಳು ಮೇಡಂ, ಕನಿಷ್ಠ ಒಬ್ಬ ವ್ಯಕ್ತಿಯಾದ್ರು ನೀವು ಹೇಳುವ ಮಾತನ್ನು ಕೇಳಿ ತಮ್ಮನ್ನು ತಾವು ಬದಲಾಯಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತಾರೆ ಎಂದು ಹೇಳಿದ್ದಾರೆ.

ಇನ್ನೊಬ್ಬರು, ಇದರ ಬಗ್ಗೆ ಜನರಿಗೆ ಅರಿವು ಮೂಡಿಸುವುದನ್ನು ನೋಡುವುದೇ ಬೇಸರದ ಸಂಗತಿ. ನನ್ನ ಕಚೇರಿಯ ಸಹೋದ್ಯೋಗಿಗಳು ಕೂಡ ಪೇಪರ್ ಕಪ್‌ಗಳಲ್ಲಿ ಚಹಾ ಕುಡಿದು ಪಕ್ಕಕ್ಕೆ ಎಸೆಯುತ್ತಾರೆ. ನನ್ನ ಪ್ರಶ್ನೆ ಏನೆಂದರೆ, ಈ ಶಿಕ್ಷಣದ ಅರ್ಥವೇನು? ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಅತ್ಯುತ್ತಮ ಕೆಲಸ, ವಯಸ್ಕರಿಗೆ ಇದರ ಬಗ್ಗೆ ಜಾಗೃತಿ ನೀಡಬೇಕಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *