Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸರ ಕಳ್ಳತನಕ್ಕೆ ಯತ್ನ, ಸ್ಥಳೀಯರಿಂದಲೇ ಕಳ್ಳನ ಬಂಧನ

Spread the love

ಚಿಕ್ಕಮಗಳೂರು : ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಬೈಕ್ ನಲ್ಲಿ ಬಂದ ಕಳ್ಳನೋರ್ವ ಕದಿಯಲು ಯತ್ನಿಸಿದ ಘಟನೆ ಕೊಪ್ಪ ತಾಲೂಕಿನ ಮಾವಿನಕಟ್ಟೆ ಗ್ರಾಮದಲ್ಲಿ ಮಂಗಳವಾರ ( ಸೆ . 16 ) ನಡೆದಿದೆ .

ಹೇಮಂತ್ , ಮಹಿಳೆ ಸರ ಕದಿಯಲು ಯತ್ನಿಸಿದ ಯುವಕನಾಗಿದ್ದಾನೆ .

ಶಿಲ್ಪಾ ಎಂಬ ಮಹಿಳೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭ ಬೈಕ್ ನಲ್ಲಿ ಬಂದ ಹೇಮಂತ್ ಬೈಕ್ ರೈಡಿಂಗ್ ನಲ್ಲಿ ಇದ್ದಂತೆ ಮಹಿಳೆಯ ಕತ್ತಿನಲ್ಲಿದ್ದ 30 ಗ್ರಾಂ ಚಿನ್ನದ ಸರವನ್ನು ಕಸಿಯಲು ಯತ್ನಿಸಿದ್ದಾನೆ , ಈ ವೇಳೆ ಮಹಿಳೆ ಗಾಬರಿಗೊಂಡ ಮಹಿಳೆ ಅಲ್ಲಿದ್ದ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ , ಇತ್ತ ಸ್ಥಳೀಯರು ಒಟ್ಟಾಗುತ್ತಿದ್ದಂತೆ ಸ್ಥಳದಿಂದ ಯುವಕ ಕಾಲ್ಕಿತ್ತಿದ್ದಾನೆ ಕೂಡಲೇ ಸ್ಥಳೀಯರು ಪಕ್ಕದ ಗ್ರಾಮಕ್ಕೆ ಮಾಹಿತಿ ರವಾನಿಸಿದ್ದಾರೆ ಅದರಂತೆ ಕುರುಕುಬಳ್ಳಿ ಗ್ರಾಮದಲ್ಲಿ ಯುವಕನನ್ನು ಸೆರೆ ಹಿಡಿದಿದ್ದಾರೆ .

ಘಟನೆಗೆ ಸಂಬಂಧಿಸಿ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .


Spread the love
Share:

administrator

Leave a Reply

Your email address will not be published. Required fields are marked *