Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜಮ್ಮುವಿನಲ್ಲಿ ಅಮೆರಿಕನ್ ಗೆಳತಿಗೆ ಭಾರತೀಯ ಪೋಷಕರಿಂದ ಭವ್ಯ ಸ್ವಾಗತ: ಹೃದಯಸ್ಪರ್ಶಿ ವಿಡಿಯೋ ವೈರಲ್

Spread the love

ಭಾರತದ ಯುವಕರು ಹೆಚ್ಚಾಗಿ ವಿದೇಶಿ ಮಹಿಳೆಯರನ್ನು ವರಿಸುತ್ತಿದ್ದಾರೆ. ವಿದೇಶಿ ಮಹಿಳೆಯರು ಕೂಡ ಭಾರತ ಪುರುಷರೇ ಹೆಚ್ಚು ಇಷ್ಟ ಪಡುತ್ತಾರೆ. ಇದರ ಜತೆಗೆ ಭಾರತದ ಸಂಪ್ರದಾಯಗಳು ಕೂಡ ಈ ವಿದೇಶಿ ಮಹಿಳೆಯರಿಗೆ ಇಷ್ಟ. ಇದೀಗ ಇಲ್ಲೊಂದು ಹೃದಯಸ್ಪರ್ಶಿ ವಿಡಿಯೋ ವೈರಲ್​​ ಆಗಿದೆ. ಜಮ್ಮುವಿನಲ್ಲಿರುವ ತನ್ನ ಮನೆಗೆ ವಿದೇಶಿ ಸ್ನೇಹಿತೆಯನ್ನು ಕೆರದುಕೊಂಡು ಬಂದ ಭಾರತದ ಯುವಕನಿಗೆ ಮನೆಯವರು (Indian Parents) ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಮಗ ಹೆಂಡತಿಯನ್ನು ತುಂಬಾ ಖುಷಿಯಿಂದ ಸ್ವಾಗತ ಮಾಡಿದ್ದಾರೆ. ಜಮ್ಮುವಿನ ಅತುಲ್ ಮತ್ತು ಅವರ ಅಮೇರಿಕನ್ ಗೆಳತಿ ಕ್ಲೇರ್ (American Girlfriend) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇಲ್ಲಿ ತಮ್ಮ ಜೀವನದ ಅದ್ಭುತ ಕ್ಷಣಗಳ ಬಗ್ಗೆ ಹಂಚಿಕೊಂಡಿದ್ದಾರೆ. ಭಾರತೀಯ ಸಂಸ್ಕೃತಿಯ ಬಗ್ಗೆ, ಸಾಂಪ್ರದಾಯಿಕ ಪದ್ಧತಿಗಳನ್ನು ಕಲಿಯುವ ಬಗ್ಗೆ, ಹೊಸ ಆಹಾರಗಳನ್ನು ಪ್ರಯತ್ನಿಸುವ ಬಗ್ಗೆ ಇಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಅತುಲ್ ಪೋಷಕರು ಅವರ ಗೆಳತಿಯನ್ನು ಹೃತ್ಪೂರ್ವಕವಾಗಿ ನಗುತ್ತಾ ಸ್ವಾಗತಿಸುತ್ತಾ, ಅವಳ ಹಣೆಯ ಮೇಲೆ ತಿಲಕ ಇಡುತ್ತಾರೆ. ಹೂಗಳನ್ನು ಸುರಿದು ಸ್ವಾಗತಿಸುತ್ತಾರೆ. ಕ್ಲೇರ್​ನನ್ನು ಕುಟುಂಬ ಸದಸ್ಯರು ಮಾತನಾಡಿಸಿದಾಗ ಅವಳು ಸಂತೋಷ ಮತ್ತು ಆರಾಮದಾಯಕವಾಗದ್ದಾಳೆ ಎಂದುಕೊಂಡೆ ಎಂದು ತಮ್ಮ ಪೋಸ್ಟ್​​ನಲ್ಲಿ ಅತುಲ್ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದ್ದಂತೆ, ಬಳಕೆದಾರರು ಈ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 12, 2025 ರಂದು ಇದನ್ನು ಹಂಚಿಕೊಳ್ಳಲಾಗಿದೆ. 23 ಸಾವಿರಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಹಲವು ಇನ್ಸ್ಟಾ ಬಳಕೆದಾರರು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಅರ್ಜುನ್ ಶರ್ಮಾ ಎಂಬ ಇನ್ಸ್ಟಾ ಬಳಕೆದಾರ ಅಭಿನಂದನೆಗಳು, ಸಹೋದರ ದೇವರು ನಿಮ್ಮಿಬ್ಬರಿಗೂ ಒಳ್ಳೆದು ಮಾಡಲಿ ಎಂದು ಹೇಳಿದ್ದಾರೆ. ಗುಲ್ನಾಜ್ ಎಂಬ ಬಳಕೆದಾರ ಭಾರತಕ್ಕೆ ಸ್ವಾಗತ ಎಂದು ಕಾಮೆಂಟ್​ ಮಾಡಿದ್ದಾರೆ. ತುಂಬಾ ಸ್ವಾಗತಾರ್ಹ, ಮತ್ತು ಹುಡುಗಿ ಕೂಡ ಸಂತೋಷವಾಗಿ ಕಾಣುತ್ತಿದ್ದಾಳೆ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್​​ ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *