Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೇರಳ: ಶಾಲಾ ಆವರಣದಲ್ಲಿ ಸ್ಫೋಟಕ ಎಸೆದ ಬಾಲಕ, ಇಬ್ಬರಿಗೆ ಗಾಯ

Spread the love

ತಿರುವನಂತಪುರಂ: ಶಾಲಾ ಆವರಣದಲ್ಲಿ ಸಿಕ್ಕ ವಸ್ತುವನ್ನು ಸ್ಫೋಟಕ(Explosive)ವೆಂದು ಅರಿಯದೆ ಎಸೆದ ಪರಿಣಾಮ ಸ್ಫೋಟಗೊಂಡು, ಬಾಲಕ ಸೇರಿ ಇಬ್ಬರು ಗಾಯಗೊಂಡಿರುವ ಘಟನೆ ಕೇರಳದ ಪಾಲಕ್ಕಾಡ್​​ ಜಿಲ್ಲೆಯ ವಡಕ್ಕಂತರಾದಲ್ಲಿ ನಡೆದಿದೆ. ಶಾಲಾ ಆವರಣದ ಹೊರಗೆ ಬುಧವಾರ ಸ್ಫೋಟಕಗಳು ಪತ್ತೆಯಾಗಿದ್ದು, ನಂತರ ಅವು ಅಪಾಯಕಾರಿ ಸ್ವರೂಪದ್ದಾಗಿದ್ದವು ಎಂದು ಪೊಲೀಸರು ಸಲ್ಲಿಸಿದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್)ಯಲ್ಲಿ ತಿಳಿಸಲಾಗಿದೆ.

ಆದರೆ ಬಾಲಕ ಇದರ ಬಗ್ಗೆ ಅರಿಯದೆ ಎಸೆದಿದ್ದ, ಕಾಡು ಹಂದಿಯನ್ನು ಹೊಡೆಯಲು ಆ ಸ್ಫೋಟಕವನ್ನು ಬಳಸಲಾಗುತ್ತಿತ್ತು ಎಂದು ಹೇಳಲಾಗಿದೆ. ಸ್ಫೋಟಕಗಳಲ್ಲಿ ಒಂದನ್ನು 10 ವರ್ಷದ ಬಾಲಕ ನಾರಾಯಣನ್ ಎಂಬಾತ ಎಸೆದಿದ್ದಾನೆ. ಸಾಧನವು ಸ್ಫೋಟಗೊಂಡ ಪರಿಣಾಮವಾಗಿ, ಹುಡುಗ ಮತ್ತು ಹತ್ತಿರದಲ್ಲಿದ್ದ 84 ವರ್ಷದ ಮಹಿಳೆ ಲೀಲಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮಧ್ಯಾಹ್ನ 3.45 ರ ಸುಮಾರಿಗೆ ವ್ಯಾಸ ವಿದ್ಯಾ ಪೀಡಂ ಪೂರ್ವ ಪ್ರಾಥಮಿಕ ಶಾಲೆಯ ಗೇಟ್ ಬಳಿ ನಾರಾಯಣನ್​​ಗೆ ಸ್ಫೋಟಕಗಳು ಸಿಕ್ಕಿದ್ದವು. ಏನಾಗುತ್ತೆ ನೋಡೋಣವೆಂದು ಕೆಳಕ್ಕೆ ಎಸೆದಿದ್ದಾನೆ. ಬಳಿಕ ದೊಡ್ಡ ಶಬ್ದ ಕೇಳಿಸಿತ್ತು. ಶಾಲಾ ಅಧಿಕಾರಿಗಳು ಮತ್ತು ನಿವಾಸಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದರು.


Spread the love
Share:

administrator

Leave a Reply

Your email address will not be published. Required fields are marked *