ಆಂಬುಲೆನ್ಸ್ ತಡೆಗಟ್ಟಿದ ಟ್ರಾಫಿಕ್ ಜಾಮ್ ಮಧ್ಯೆ ಟ್ರಾಫಿಕ್ ಕ್ಲಿಯರ್ ಮಾಡಿದ ASI ಅಪರ್ಣಾ

ತಿರುವನಂತಪುರ: ವಾಹನಗಳ ಉದ್ದನೆಯ ಸಾಲು, ಭಾರೀ ಟ್ರಾಫಿಕ್ ಜಾಮ್… ಈ ಟ್ರಾಫಿಕ್ ಮಧ್ಯೆ ನಿರಂತರವಾಗಿ ಕೇಳುತ್ತಿದ್ದ ಅಂಬುಲೆನ್ಸ್ ಸೈರನ್ ಸದ್ದು… ಇದರ ಮಧ್ಯೆ ಓಡೋಡಿ ಬರುತ್ತಿರುವ ಪೊಲೀಸ್ ಅಧಿಕಾರಿ. ಟ್ರಾಫಿಕ್ ಜಾಮ್ನಿಂದ ಅಂಬುಲೆನ್ಸ್ನಲ್ಲಿ ಒದ್ದಾಡುತ್ತಿದ್ದ ಜೀವ ಉಳಿಸಲು ಕೇರಳದ ತ್ರಿಶೂರ್ ನಗರದಲ್ಲಿ ಎಎಸ್ಐ ಅಪರ್ಣಾ ಲವ್ ಕುಮಾರ್ ರಸ್ತೆಯಲ್ಲಿ ಕಿ.ಮೀಗಟ್ಟಲೇ ಓಡಿ ಟ್ರಾಫಿಕ್ ಕ್ಲಿಯರ್ ಮಾಡಲು ಪ್ರಯತ್ನ ಪಟ್ಟಿದ್ದಾರೆ.

ಈ ದೃಶ್ಯ ಈಗ ವೈರಲ್ ಆಗಿದ್ದು, ಮಹಿಳಾ ಅಧಿಕಾರಿಯ ಕಾರ್ಯಕ್ಕೆ ಎಲ್ಲರೂ ಸೆಲ್ಯೂಟ್ ಅನ್ನುತ್ತಿದ್ದಾರೆ. ವೈದ್ಯಕೀಯ ಕಾಲೇಜಿನಿಂದ ತ್ರಿಶೂರ್ನ ಜುಬಿಲಿ ಆಸ್ಪತ್ರೆಗೆ ರೋಗಿ ಶಿಫ್ಟ್ ಆಗಬೇಕಾಗಿತ್ತು. ಕೊನೆಗೆ ಇವರ ಸಮಯ ಪ್ರಜ್ಞೆಯಿಂದ ರೋಗಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕಿದೆ
ಇನ್ನು ಈ ಪೊಲೀಸ್ ಅಧಿಕಾರಿ ಈ ಹಿಂದೆ ದುಡ್ಡಿನ ಕೊರತೆಯಿಂದ ಮಹಿಳೆಯ ಮೃತದೇಹ ನೀಡದ್ದಕ್ಕೆ ತನ್ನ ಬಂಗಾರದ ಬಳೆಯನ್ನು ನೀಡಿ ಗಿರವಿ ಇಡಲು ಹೇಳಿ ದುಡ್ಡಿನ ವ್ಯವಸ್ಥೆ ಮಾಡಿದ್ದರು. ಅಲ್ಲದೇ ಕ್ಯಾನ್ಸರ್ ರೋಗಿಗಳಿಗೆ ತಲೆಗೂದಲನ್ನು ಕೂಡ ದಾನ ಮಾಡಿ ಗಮನ ಸೆಳೆದಿದ್ದರು.
