Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕುಲ್ಗಾಮ್‌ ಅರಣ್ಯದಲ್ಲಿ ‘ಆಪರೇಷನ್ ಅಖಾಲ್’ ಉಗ್ರನ ಹ*ತ್ಯೆ

Spread the love

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ನಡೆಯುತ್ತಿರುವ ʻಆಪರೇಷನ್‌ ಅಖಾಲ್‌ʼ (Operation Akhal) ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಹತ್ಯೆಗೀಡಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ (South Kashamir) ಕುಲ್ಗಾಮ್ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಗುಪ್ತಚರ (Intelligence) ಮಾಹಿತಿ ಪಡೆದ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ʻಆಪರೇಷನ್‌ ಅಖಾಲ್‌ʼ ಹೆಸರಿನಲ್ಲಿ ಕಾರ್ಯಾಚರಣೆ ಶುರು ಮಾಡಿತು. ಅರಣ್ಯ ಪ್ರದೇಶ ಸುತ್ತುವರಿದು ಶೋಧ ಆರಂಭಿಸಿದ ಭದ್ರತಾ ಪಡೆಗಳು ಓರ್ವ ಉಗ್ರನನ್ನ ಹತ್ಯೆಗೈದಿವೆ ಎಂದು ಪೊಲೀಸ್‌ (J&K Police) ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ಶೋಧ ನಡೆಯುತ್ತಿದ್ದಂತೆಯೇ ಉಗ್ರರು ಗುಂಡಿನ ದಾಳಿ ನಡೆಸಲು ಮುಂದಾದ್ರು. ಇದರಿಂದ ಯೋಧರು ಪ್ರತಿದಾಳಿಗೆ ಮುಂದಾದರು. ರಾತ್ರಿಯಿಡೀ ಕಾರ್ಯಾಚರಣೆ ಮುಂದುವರಿಯಿತು, ಗುಂಡಿನ ಸದ್ದು ಮೊಳಗುತ್ತಿದ್ದರಿಂದ ಸ್ಥಳೀಯರಿಗೂ ಈ ಪ್ರದೇಶದತ್ತ ಸುಳಿಯದಂತೆ ಎಚ್ಚರಿಕೆ ನೀಡಲಾಗಿತ್ತು. ಈವರೆಗೆ ಓರ್ವ ಉಗ್ರರನ್ನು ಹತ್ಯೆ ಮಾಡಲಾಗಿದ್ದು, ʻಆಪರೇಷನ್‌ ಅಖಾಲ್‌ʼ ಮುಂದುವರಿದಿದೆ ಎಂದು ಸೇನೆಯ ಚಿನಾರ್ ಕಾರ್ಪ್ಸ್ (Chinar Corps) ತಿಳಿಸಿ

ಇತ್ತೀಚೆಗಷ್ಟೇ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಲಿಡ್ವಾಸ್‌ ಪ್ರದೇಶದ ದಚಿಗಮ್ ಅರಣ್ಯ ಪ್ರದೇಶದಲ್ಲಿ ʻಆಪರೇಷನ್‌ ಮಹಾದೇವ್‌ʼ (Operation MAHADEV) ಕಾರ್ಯಾಚರಣೆ ನಡೆಸಿದ್ದ ಚಿನಾರ್‌ ಕಾರ್ಪ್ಸ್‌ ಮೂವರು ವಿದೇಶಿ ಉಗ್ರರನ್ನ ಬೇಟೆಯಾಡಿತ್ತು. ಈ ಪೈಕಿಯಲ್ಲಿ ಹೊಬ್ಬ ಪಹಲ್ಗಾಮ್‌ ನರಮೇಧಕ್ಕೆ ಕಾರಣವಾದ ಉಗ್ರನಾಗಿದ್ದ. ಈ ಬೆನ್ನಲ್ಲೇ ಮತ್ತು ಕಾರ್ಯಾಚರಣೆ ಕೈಗೊಂಡಿದೆ.


Spread the love
Share:

administrator

Leave a Reply

Your email address will not be published. Required fields are marked *