Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪುಣೆಯ ಮಲ್ಹರ್ ಕೋಟೆಯಲ್ಲಿ ನೈತಿಕ ಪಾಠ: ಧೂಮಪಾನ ಮಾಡುತ್ತಿದ್ದ ಯುವಕರಿಗೆ ಬುದ್ಧಿವಾದ ಹೇಳಿದ ವ್ಯಕ್ತಿಗೆ ಭಾರೀ ಮೆಚ್ಚುಗೆ

Spread the love

ಪುಣೆ : ಇತ್ತೀಚೆಗೆ ಯುವಕರು( youths ) ಎಲ್ಲೆಂದರಲ್ಲಿ ಧೂಮಪಾನ ( smoking )ಮಾಡೋದು ತುಂಬಾನೇ ಕಾಮನ್ ಆಗಿದೆ. ಇದೀಗ ಪಡ್ಡೆ ಹುಡುಗ್ರ ಗುಂಪು ಪುಣೆಯ(pune) ಐತಿಹಾಸಿಕ ಮಲ್ಹರ್ ಕೋಟೆಯಲ್ಲಿ ಹುಕ್ಕಾ(Hookah) ಸೇವಿಸಿದ್ದಾರೆ.ಪುಣೆಯ ಮಲ್ಹರ್ ಕೋಟೆಯಲ್ಲಿ ಪ್ರವಾಸ ಬಂದಿದ್ದ ಯುವಕರು ಹುಕ್ಕಾ ಹೊಡೆದು ಎಂಜಾಯ್ ಮಾಡ್ತಿದ್ದರು.

ಇದನ್ನು ಗಮನಿಸಿದ ಮತ್ತೊರ್ವ ವ್ಯಕ್ತಿ ಯುವಕರಿಂದ ಹುಕ್ಕಾ ಪಾಟ್ ಪಡೆದು ಅಲ್ಲಿಯೇ ನಾಶ ಮಾಡಿ ಬುದ್ಧಿವಾದ ಹೇಳಿದ್ದಾನೆ. ಮಲ್ಹರ್ ಕೋಟೆಯ ಐತಿಹಾಸಿಕ ಹಿನ್ನೆಲೆ ಸ್ಥಳದ ಮಹತ್ವದ ಬಗ್ಗೆ ಎಳೆಎಳೆಯಾಗಿ ಬಿಡಿಸಿ ಹೇಳಿದ್ದಾನೆ.

ವ್ಯಕ್ತಿ ಹೇಳಿದ ನೀತಿ ಪಾಠ ಹುಕ್ಕಾ ಹೊಡೆಯುತ್ತಿದ್ದ ಯುವಕರ ಮನಸ್ಸನ್ನು ಬದಲಿಸಿದೆ. ಯುವಕರು ತಪ್ಪೊಪ್ಪಿಕೊಂಡು ಕ್ಷಮಾಪಣೆ ಕೇಳಿದ್ದಾರೆ. ಅಲ್ಲದೆ ಭವಿಷ್ಯದಲ್ಲಿ ಈ ರೀತಿಯ ಚಟುವಟಿಕೆ ಮುಂದುವರಿಸಲ್ಲ ಎಂದು ಹೇಳಿದ್ದಾರೆ. ಸದ್ಯ ಈ ಘಟನೆಯ ವೀಡಿಯೊ ಎಲ್ಲೆಡೆ ವೈರಲ್ ಆಗಿದೆ. ಯುವಕರ ಮನಪರಿವರ್ತನೆಯ ಸಂಗತಿಗೆ ಕಾರಣವಾದ ವ್ಯಕ್ತಿಗೆ ನೆಟ್ಟಿಗರು ಕಮೆಂಟ್ಸ್ ಮೂಲಕ ಸಾಕಷ್ಟು ಪ್ರಶಂಸೆ ನೀಡಿದ್ದಾರೆ.

ಪುಣೆಯ ಮಲ್ಹರ್ ಕೋಟೆ ಬಹಳ ಸುಂದರವಾದ ಐತಿಹಾಸಿಕ ಪ್ರವಾಸಿ ತಾಣವಾಗಿದೆ. ವಾರ್ಷಿಕ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ನಯನ ಮನೋಹರ ಸ್ಥಳಗಳು ಸಾಕಷ್ಟು ಮೆಚ್ಚುಗೆ ಪಡೆದಿದೆ.


Spread the love
Share:

administrator

Leave a Reply

Your email address will not be published. Required fields are marked *