Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಮೇಶ್ವರಂ ಕೆಫೆ ವಿರುದ್ಧ ಸುಳ್ಳು ಕೀಟ ಆರೋಪ – ಹಣ ಸುಲಿಗೆ ಯತ್ನ ವಿಫಲ

Spread the love

ಬೆಂಗಳೂರು: ಭಾರತದ ಅತ್ಯಂತ ಜನಪ್ರಿಯ ದಕ್ಷಿಣ ಭಾರತದ ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ಬ್ರ್ಯಾಂಡ್‌ಗಳಲ್ಲಿ ಒಂದಾದ ರಾಮೇಶ್ವರಂ ಕೆಫೆಯ ಬೆಂಗಳೂರು ವಿಮಾನ ನಿಲ್ದಾಣದ ಔಟ್‌ಲೆಟ್‌ನಲ್ಲಿ (Bengaluru Airport Rameshwaram Cafe Outlet) ಆಹಾರದಲ್ಲಿ ಕೀಟವಿದೆ ಎಂದು ಸುಳ್ಳು ಆರೋಪ ಮಾಡಿ, ಹಣ ಸುಲಿಗೆ ಮಾಡಲು ಪ್ರಯತ್ನಿಸಿದ ವ್ಯಕ್ತಿಗಳ ಗುಂಪಿನ ವಿರುದ್ಧ ಅಧಿಕೃತ ಪೊಲೀಸ್ ದೂರು ದಾಖಲಿಸಲಾಗಿದೆ.
ಕಾರ್ಯನಿರ್ವಹಿಸುತ್ತೇವೆ. ವಿಶೇಷವಾಗಿ ವಿಮಾನ ನಿಲ್ದಾಣಗಳಂತಹ ಸೂಕ್ಷ್ಮ ಸ್ಥಳಗಳಲ್ಲಿ, ಅಲ್ಲಿ ನಿಯಮಿತ ಪರಿಶೋಧನೆ ಮತ್ತು ನೈರ್ಮಲ್ಯ ತಪಾಸಣೆಗಳು ಕಡ್ಡಾಯವಾಗಿರುತ್ತವೆ. ಇಲ್ಲಿ ಹಣವನ್ನು ಸುಲಿಗೆ ಮಾಡಲು ಮತ್ತು ನಮ್ಮ ಬ್ರ್ಯಾಂಡ್‌ಗೆ ಕಳಂಕ ತರುವ ದುರುದ್ದೇಶದಿಂದ ಕಿಡಿಗೇಡಿಗಳು ಈ ಪ್ರಯತ್ನ ನಡೆಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಮೇಶ್ವರಂ ಕೆಫೆ ಹೆಸರು ಕೆಡಿಸಲು ಹಿಂದೆಯೂ ವಿಫಲ ಯತ್ನ:

ಈ ಹಿಂದೆಯೂ ಇದೇ ರೀತಿಯ ಪ್ರಯತ್ನಗಳು ರಾಮೇಶ್ವರಂ ಕೆಫೆಯ ವಿರುದ್ಧ ನಡೆದಿವೆ. ಆಹಾರದಲ್ಲಿ ಕಲ್ಲು, ಕೀಟಗಳನ್ನು ಹಾಕಿ ಬಳಿಕ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ನಾವು ಬೆದರಿಕೆ ಅಥವಾ ಬ್ಲ್ಯಾಕ್‌ಮೇಲ್‌ಗೆ ಹೆದರುವುದಿಲ್ಲ. ಈ ಘಟನೆ ಸಂಬಂಧ ನಾವು ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ. ಇಂತಹ ಅನುಚಿತ ಕೃತ್ಯಗಳನ್ನು ಬಹಿರಂಗಪಡಿಸಿ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದರು.

ಇನ್ನು ರಾಮೇಶ್ವರಂ ಹೋಟೆಲ್‌ನ ಗ್ರಾಹಕರನ್ನು ದಾರಿ ತಪ್ಪಿಸುವ ಮತ್ತು ನಮ್ಮ ಒಗ್ಗಟ್ಟಿನ ಕೆಲಸ ಮಾಡುವ ವ್ಯವಹಾರಗಳ ಖ್ಯಾತಿಗೆ ಹಾನಿಯನ್ನು ಉಂಟುಮಾಡುವ ಇಂತಹ ಆಧಾರ ರಹಿತ ವಿಡಿಯೋಗಳನ್ನು ಹಂಚಿಕೊಳ್ಳದಂತೆ ರಾಮೇಶ್ವರಂ ಕೆಫೆಯು ಸಾರ್ವಜನಿಕರನ್ನು ಮತ್ತು ಮಾಧ್ಯಮಗಳನ್ನು ಮನವಿ ಮಾಡಿದೆ.


Spread the love
Share:

administrator

Leave a Reply

Your email address will not be published. Required fields are marked *