Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೀಗೂ ಕಳ್ಳತನ ಮಾಡ್ತಾರಾ! ಗಡಿಬಿಡಿಯಲ್ಲಿ ಬಸ್ ಹತ್ತೋರೆ ಇವರ ಟಾರ್ಗೆಟ್

Spread the love

ಹಾಸನ; ರಾಜ್ಯ ಸರ್ಕಾರದ ಮಹತ್ವಾಕಾಂಕ್ಕಿ ಪಂಚ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆಯೂ ಒಂದು. ಈ ಶಕ್ತಿ ಯೋಜನೆಯ ಮುಖ್ಯ ಉದ್ದೇಶ. ರಾಜ್ಯದ ಮಹಿಳೆಯರು ಕರ್ನಾಟಕದಲ್ಲಿ ಎಲ್ಲಿ ಬೇಕಾದ್ರೂ ಉಚಿತವಾಗಿ ಪ್ರಯಾಣ ಮಾಡಬಹುದು.
ಆದ್ರೆ ಶಕ್ತಿ ಯೋಜನೆ ಜಾರಿ ಆದ ಮೇಲೆ ಮಹಿಳೆಯರು ಬಸ್ ನಲ್ಲಿ ಪ್ರಯಾಣಿಸುವ ಸಂಖ್ಯೆ ಹೆಚ್ಚಿದ್ದು, ಬರುವ ಬಸ್ ಗಳೆಲ್ಲಾ ಆಲ್ಮೋಸ್ಟ್ ರಷ್ ಇರುತ್ತೆ. ಆದ್ರೆ ಇಂತಹ ರಷ್ ಬಸ್ ಹತ್ತುವ ಮುನ್ನ ಈ ಸ್ಟೋರಿ ನೋಡಲೇಬೇಕು.

ಬಸ್ ರಷ್ ಇದೆ ಎಂದು ನೂಕು ನುಗ್ಗಲಿನಲ್ಲಿ ಬಸ್ ಹತ್ತೋ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚುತ್ತಿದ್ದ ಕತರ್ನಾಕ್ ತಂಡವನ್ನು ಹಾಸನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರದ ಚಿತ್ತೂರು ಜಿಲ್ಲೆ ಕುಪ್ಪಂನ ಗ್ರಾಮದ ಶಶಿ(35), ಮಾಧವಿ(40), ಅಕಿಲ(30), ವಿದ್ಯಾ(29) ಬಂಧಿತರು. ಇನ್ನು ಆರೋಪಿಗಳ ಬಳಿ ಇದ್ದ 6.38 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಹೊಳೆನರಸೀಪುರ ಠಾಣೆ ಪೊಲೀಸರು ನಡೆಸಿದ ಕಾರ್ಯಚರಣೆ ವೇಲೆ ಈ ಗ್ಯಾಂಗ್ ಸಿಕ್ಕಿಬಿದ್ದಿದೆ.

ಹೊಳೆನರಸೀಪುರ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಳಿ ಮಹಿಳೆಯೊಬ್ಬರ ಸರ ಕಳ್ಳತನವಾಗಿದೆ. ಈ ಬಗ್ಗೆ ಕೇಸ್ ದಾಖಲಿಸಿಕೊಂಡ ಹೊಳೆನರಸೀಪುರ ನಗರ ಠಾಣೆ ಪೋಲೀಸರು ತನಿಖೆಗಿಳಿದಾಗ ಭಯಾನಕ ಸತ್ಯ ಬಯಲಾಗಿದೆ. ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತಲು ಬರೋದು, ಗಡಿಬಿಡಿಯಲ್ಲಿ ಬಸ್ ಹತ್ತೋ ವೇಳೆ ಜನರ ಗಮನ ಬಸ್ ಹತ್ತೋಕಡೆ ಇದ್ದಾಗ ಚಿನ್ನದ ಸರ, ಮಾಂಗಲ್ಯ ಸರ, ನೆಕ್ಲೇಸ್ ಎಗರಿಸಿ ಎಸ್ಕೇಪ್ ಆಗೋದು ಇವರ ಕಾಯಕ. ಚಿನ್ನಾಭರಣ ಕಳ್ಳತನವನ್ಮೇ ಫ್ಯಾಶನ್ ಆಗಿಸಿಕೊಂಡ ಆಂಧ್ರಪ್ರದೇಶ ಮೂಲದ ಕುಪ್ಪಂನ ನಾಲ್ವರು ಕತರ್ನಾಕ್ ಲೇಡೀಸ್ ಅಂದರ್ ಆಗಿದ್ದಾರೆ.

ಕಳ್ಳಿಯರಿಗಾಗಿ ಬಲೆ ಬೀಸಿದ ಇನ್ಸ್ಪೆಕ್ಟರ್ ಪ್ರದೀಪ್ ಪಿಎಸ್ ಐ ಅಭಿಜಿತ್ ನೇತೃತ್ವದ ಟೀಂ ಕಾರ್ಯಾಚರಣೆ ನಡೆಸಿ ಕತರ್ನಾಕ್ ಚೋರಿಯರಾದ ಆಂಧ್ರಪ್ರದೇಶ ಮೂಲದ ಚಿತ್ತೂರು ಜಿಲ್ಲೆ, ಕುಪ್ಪಂ ಗ್ರಾಮದ ಶಶಿ (35), ಮಾಧವಿ (40), ಅಕಿಲ (30) ಮತ್ತು ವಿದ್ಯಾ (29) ರನ್ನ ಬಂಧಿಸಿದ್ದಾರೆ. ಬಂಧಿತರಿಂದ 6.38 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳಲ್ಲಿ 35 ಗ್ರಾಂ ತೂಕದ ಚಿನ್ನದ ಸರ, 22 ಗ್ರಾಂ ತೂಕದ ನೆಕ್ಲೆಸ್‌‍, 5 ಗ್ರಾಂ ತೂಕದ ಬೆಳ್ಳಿ ಗಣಪತಿ ಡಾಲರ್‌ ಹಾಗೂ 29 ಗ್ರಾಂ ತೂಕದ ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *