ಮಕ್ಕಳ ಜಗಳದಿಂದ ವೃದ್ಧಾಪ್ಯ ಕದನಕ್ಕೆ! ಹಳೆಯ ಶತ್ರುತ್ವ ಇನ್ನೂ ಜೀವಂತ!

ಕಾಸರಗೋಡು: ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ನಡೆದ ಜಗಳದ ಹಳೇ ದ್ವೇಷದಿಂದ ಈಗ 60 ವರ್ಷ ದಾಟಿದ ಸಹಪಾಠಿಗಳಿಬ್ಬರೂ ಮತ್ತೆ ಪರಸ್ಪರ ಕಲ್ಲಿನಿಂದ ಹೊಡೆದಾಡಿಕೊಂಡ ಘಟನೆ ನಡೆದಿದೆ.
ವೆಳ್ಳರಿಕುಂಡು ಮಾಲೋಂ ವೆಟಕೊಂಬಿಲ್ ಬಾಬು (62) ನೀಡಿದ ದೂರಿನಂತೆ ನಾಲ್ಕನೇ ತರಗತಿಯಲ್ಲಿ ಸಹಪಾಠಿಯಾಗಿದ್ದ ಮಾಲೋ ನಿವಾಸಿ ಬಾಲಕೃಷ್ಣನ್ (62) ಮತ್ತು ಅವರ ಸ್ನೇಹಿತ ವಲಿಯ ಪ್ಲಾಕಲ್ ಮ್ಯಾಥ್ಯೂ (62) ವಿರುದ್ಧ ವೆಳ್ಳರಿಕುಂಡು ಪೊಲೀಸರು ಕೇಸು ದಾಖಲಿಸಿದ್ದಾರೆ
ಗಾಯಗೊಂಡ ಬಾಬು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಕಲ್ಲಿನಿಂದ ಮುಖ ಮತ್ತು ಬೆನ್ನಿಗೆ ಹೊಡೆದು ಗಾಯಗೊಳಿಸಿರುವುದಾಗಿ ಪೊಲೀಸರಿಗೆ ಬಾಬು ದೂರು ನೀಡಿದ್ದಾರೆ.