ಬೆಂಗಳೂರು: ಆನ್‌ಲೈನ್ ಆಪ್ ಮೂಲಕ ಮನೆಕೆಲಸದ ಹೆಸರಿನಲ್ಲಿ ದಂಪತಿಗೆ ವಂಚನೆ

ಬೆಂಗಳೂರು : ಇತ್ತಿಚೆಗೆ ಯಾರನ್ನು ನಂಬೋದು ಯಾರನ್ನು ಬಿಡೋದು ಅನ್ನೋ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಪಕ್ಕದಲ್ಲಿರುವವರನ್ನೇ ನಂಬೋಕೆ ಆಗೋದಿಲ್ಲ. ಅಷ್ಟರ ಮಟ್ಟಿಗೆ ವಂಚನೆಗಳು ನಡಿತೀವೆ. ಇನ್ನೂ ಆನ್ಲೈನ್ ನಲ್ಲಿ ಕೇಳಬೇಕ. ಗೊತ್ತಿಲ್ಲದವರ ಕಟ್ಯಾಂಕ್ಟ್ ಮಾಡ್ಕೊಂಡು ಅವರಿಂದ ಕೆಲಸ ಆಗುತ್ತೆ ಅನ್ನೋದು ದೊಡ್ಡ ಮೂರ್ಖತನವೇ ಸರಿ.
ಅಂತಹದೇ ಒಂದು ವಂಚನೆ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಯೆಸ್ ಸುಲೇಖಾ ಆಪ್ ಮೂಲಕ ಕೆಲಸಗಾರರನ್ನ ಹುಡುಕ್ತಿದ್ದ ದಂಪತಿಗೆ ವಂಚನೆಯಾಗಿದೆ. ಸಮೀಕ್ಷ ಮೇಡ್ ಸರ್ವಿಸ್ ಎಂಬಲ್ಲಿ ಮನೆ ಕೆಲಸದವರನ್ನ ಸೇಲ್ಸ್ ಮ್ಯಾನೇಜರ್ ಆಗಿರುವ ರಶ್ಮಿ ಮತ್ತವರ ಪತಿ ಅನೂಪ್ ಹುಡುಕುತ್ತಿದ್ದರು. ಅನೂಒ ಖಾಸಗಿ ಕಾಲೇಜಿನಲ್ಲಿ ಪ್ರೊಫೆಸರ್ ಕೆಲಸ ಮಾಡುತ್ತಿದ್ದರು. ರಶ್ಮಿ ಅನೂಪ್ ದಂಪತಿಗೆ ಒಂದೂವರೆ ವರ್ಷದ ಮಗುವಿದ್ದು, ಅದನ್ನು ನೋಡಿಕೊಳ್ಳಲು ಆನ್ಲೈನ್ ನಲ್ಲಿ ಮನೆಕೆಲಸದವರನ್ನ ಹುಡುಕಿದ್ರು. ಈ ವೇಳೆ ಸಮೀಕ್ಷ ಮೇಡ್ ಸರ್ವೀಸ್ ಆಪ್ ನಲ್ಲಿ ಸಚಿನ್ ಎಂಬಾತ ಪರಿಚಿತನಾಗಿದ್ದ.
ಮನೆಕೆಲಸದವಳನ್ನು ಕೆಲಸಕ್ಕೆ ಕಳಿಸೋದಾಗಿ ಬಿಮಲಾ ಎಂಬ ಯುವತಿಯ ಪ್ರೊಫೈಲನ್ನ ರಶ್ಮಿಯವರ ಮೊಬೈಲ್ ಗೆ ಕಳಿಸಿದ್ದ. ಬಿಮಲಾ ಎಂಬಾಕೆಯ ಪ್ರೊಫೈಲ್ ನ್ನು ರಶ್ಮಿ ಅನೂಪ್ ದಂಪತಿ ಓಕೆ ಮಾಡಿದ್ರು. ಇಲ್ಲಿಯೇ ನೋಡಿ ಕೆಲಸ ಕೆಟ್ಟಿದ್ದು. ಮನೆ ಕೆಲಸದವಳನ್ನು ಕಳಿಸಬೇಕಾದ್ರೆ ತಿಂಗಳಿಗೆ 16 ಸಾವಿರ ಹಣದಂತೆ 3 ತಿಂಗಳ ಮುಂಗಡ ಸಂಬಳವನ್ನು ಮಧ್ಯವರ್ತಿ ಸಚಿನ್ ಕೇಳಿದ್ದ. ಬಿಮಲಾ ಎಂಬಾಕೆ ಮನೆಕೆಲಸಕ್ಕೆ ಅಪಾರ್ಟ್ಮೆಂಟ್ ಫ್ಲಾಟ್ ಗೆ ಬಂದಾಗ ಆನ್ಲೈನ್ ನಲ್ಲಿ ಎರಡು ತಿಂಗಳ ಸಂಬಳ ಮುಂಗಡವಾಗಿ ರಶ್ನಿ ಪಾವತಿಸಿದ್ರು. ಒಂದು ತಿಂಗಳ ಸಂಬಳನ್ನು ಕ್ಯಾಶ್ ರೂಪದಲ್ಲಿ ಕೊಟ್ಟಿದ್ರು.
ಆದ್ರೆ ಸಂಬಳ ಪಾವತಿ ಆಗ್ತಿದ್ದಂತೆ ಕೆಲಸಕ್ಕೆ ಬಂದಿದ್ದ ಯುವತಿ ಬಿಮಾಲ ಎಸ್ಕೇಪ್ ಆಗಿದ್ದು, ಮಧ್ಯವರ್ತಿ ಸಚಿನ್ ಸಹ ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ದಂಪತಿ ಸಂಪೂರ್ಣ ಕಂಗಲಾಗಿದ್ದಾರೆ. ಆದರೆ ಮನೆಯಲ್ಲಿ ಮಗುವಿನ ಜೊತೆ ರಶ್ಮಿ ಒಬ್ಬರೇ ಇದ್ದಾಗ ಈ ಘಟನೆ ನಡೆದಿದ್ದು.
ಹಣ ಹೋದ್ರೆ ಹೋಯ್ತು ಮನೆಕಳ್ಳತನ ಮಾಡಿ ಮಗು ಎತ್ತಿಕೊಂಡು ಹೋಗಿದ್ರೆ ಎನು ಗತಿ ಎಂಬ ಭಯದಲ್ಲಿ ದಂಪತಿ ಇದ್ದಾರೆ. ಸದ್ಯ ಘಟನೆ ಸಂಬಂಧ ಸೇಲ್ಸ್ ಮ್ಯಾನೇಜರ್ ರಶ್ಮಿ ಕುಂಬಳಗೋಡು ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.