Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಡೇಟಿಂಗ್ ಆಪ್‌ನಲ್ಲಿ ಪರಿಚಯ: ಮಹಿಳೆಯಿಂದ ಎಡಿಟೆಡ್ ವಿಡಿಯೋ ಮೂಲಕ ಟೆಕ್ಕಿಗೆ 64,800 ರೂ. ಬ್ಲ್ಯಾಕ್‌ಮೇಲ್

Spread the love

ಬೆಂಗಳೂರು: ಡೇಟಿಂಗ್ ಆಯಪ್‌ನಲ್ಲಿ ಪರಿಚಯವಾದ ಯುವತಿ, ವಿಡಿಯೋ ಕಾಲ್ ಮಾಡಿ ಎಡಿಟೆಡ್ ವಿಡಿಯೋ ಕಳುಹಿಸಿ ಟೆಕ್ಕಿಗೆ ಬ್ಲ್ಯಾಕ್‌ಮೇಲ್ ಮಾಡಿ 64 ಸಾವಿರ ರೂ. ಸುಲಿಗೆ ಮಾಡಿದ್ದಾಳೆ.
ದೊಡ್ಡನೆಕ್ಕುಂದಿ ನಿವಾಸಿ 27 ವರ್ಷದ ಸ್‌ಟಾವೇರ್ ಇಂಜಿನಿಯರ್ ವಂಚನೆಗೆ ಒಳಗಾದವ. ಈತ ಕೊಟ್ಟ ದೂರಿನ ಮೇರೆಗೆ ವೈಟ್‌ಫೀಲ್ಡ್ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏ. 22ರಂದು ಡೇಟಿಂಗ್ ್ಲಾಟ್‌ಾರ್ಮ್‌ನಲ್ಲಿ ಸಾಕ್ಷಿ ಅಗರ್ವಾಲ್ ಎಂಬಾಕೆ ಪರಿಚಯವಾಗಿ ಇನ್‌ಸ್ಟಾಗ್ರಾಮ್ ಲಿಂಕ್ ಕಳುಹಿಸಿದ್ದಳು. ಅದನ್ನು ಟೆಕ್ಕಿ ಾಲೋ ಮಾಡಿದಾಗ ಅಲ್ಲಿಂದ ಚಾಟಿಂಗ್ ಶುರು ಮಾಡಿ, ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಸಂಭಾಷಣೆಗೆ ಇಳಿದಿದ್ದರು. ರಾತ್ರಿ ವಾಟ್ಸ್‌ಆಯಪ್‌ನಲ್ಲಿ ವಿಡಿಯೋ ಕರೆ ಮಾಡಿದ ಸಾಕ್ಷಿ , ತಾನು ಅರೆನಗ್ನವಾಗಿ ಕಾಣಿಸಿಕೊಂಡಿದ್ದಳು. ಬಳಿಕ ಟೆಕ್ಕಿಗೂ ಬಟ್ಟೆ ಬಿಚ್ಚುವಂತೆ ಪುಸಲಾಯಿಸಿದ್ದಳು.

ಟೆಕ್ಕಿ ಅರೆನಗ್ನವಾಗುತ್ತಿದಂತೆ ವಿಡಿಯೋ ರೆಕಾರ್ಡ್ ಮಾಡಿಕೊಂಡ ಸಾಕ್ಷಿ, ಅದನ್ನು ಎಡಿಟ್ ಮಾಡಿ ಕೂಡಲೇ ವಾಟ್ಸ್‌ಆಯಪ್‌ಗೆ ಕಳುಹಿಸಿ ಬ್ಲ್ಯಾಕ್‌ಮೇಲ್ ಶುರು ಮಾಡಿದ್ದಳು. ಸಾಕ್ಷಿಯ ಮೂವರು ಸ್ನೇಹಿತರು, ಟೆಕ್ಕಿಗೆ ಕರೆ ಮಾಡಿ ‘ಹಣ ಕೊಡದೆ ಇದ್ದರೆ ನಿನ್ನ ಸ್ನೇಹಿತರಿಗೆ ವಿಡಿಯೋ ಕಳುಹಿಸಿ ಮರ್ಯಾದೆ ತೆಗೆಯುತ್ತೇನೆ’ ಎಂದಿದ್ದಳು.

ಹೆದರಿದ ಸ್‌ಟಾವೇರ್ ಇಂಜಿನಿಯರ್, ಹಂತ ಹಂತವಾಗಿ 64,800 ರೂ. ಕಳುಹಿಸಿದ್ದ. ಮತ್ತಷ್ಟು ಹಣಕ್ಕಾಗಿ ಪೀಡಿಸುತ್ತಿದ್ದಾಗ ನೊಂದ ಟೆಕ್ಕಿ, ನೊಂದು ಸಿಇಎನ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *