ಮ್ಯಾಟ್ರಿಮೋನಿಯಲ್ ಪರಿಚಯದಿಂದ 39.8 ಲಕ್ಷ ವಂಚನೆ: ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಪ್ರಕರಣ

ಥಾಣೆ: 35 ವರ್ಷದ ವ್ಯಕ್ತಿಯೊಬ್ಬರಿಗೆ ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ಭೇಟಿಯಾದ ಮಹಿಳೆಯೊಬ್ಬಳು ಫಾರೆಕ್ಸ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಿ 39.8 ಲಕ್ಷ ರೂ.ಗಳನ್ನು ವಂಚಿಸಿದ ಘಟನೆ ರವಿವಾರ (ಮೇ 11) ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.
ಕಲ್ಯಾಣ್ ಮೂಲದ ಉದ್ಯಮಿಯೋರ್ವ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 318 (4) (ವಂಚನೆ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೂರುದಾರರು ಆರೋಪಿಯೊಂದಿಗೆ ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ಪರಿಚಯವಾಗಿದ್ದು, ವಾಟ್ಸಾಪ್ ಮೂಲಕ ಸಂವಹನ ನಡೆಸುತ್ತಿದ್ದ ಸಂದರ್ಭ, ಆರೋಪಿಯು ಕಂಪನಿಯ ಮೂಲಕ ಫಾರೆಕ್ಸ್ ವ್ಯಾಪಾರದಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಿ ಲಿಂಕ್ ಕಳುಹಿಸಿದ್ದಾರೆ.
ಆರೋಪಿಯು ಮಾರ್ಚ್ 15 ರಿಂದ ಏಪ್ರಿಲ್ 25 ರ ನಡುವೆ ಯುಎಸ್ಡಿ ನಲ್ಲಿ ಹಣದ ಭರವಸೆ ನೀಡಿ 39.8 ಲಕ್ಷ ರೂ. ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ದೂರುದಾರನಿಗೆ ತನ್ನ ಹೂಡಿಕೆಯ ಮೇಲೆ ಯಾವುದೇ ಲಾಭ ಸಿಗದಿದ್ದಾಗ, ತಾನು ಮೋಸ ಹೋಗಿರುವುದಾಗಿ ಅರಿತು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು