Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವೈಟಿಪಿಎಸ್ ಕಲ್ಲಿದ್ದಲು ಅಕ್ರಮ ಸಾಗಾಟ

Spread the love

ರಾಯಚೂರು: ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಸೇರಿದ ಕಲ್ಲಿದ್ದಲು ಅಕ್ರಮ ಸಾಗಾಟ ಸಂಬಂಧ ಖಾಸಗಿ ನಿರ್ವಣಾ ಕಂಪನಿ ವಿರುದ್ಧ ದೂರು ದಾಖಲಾಗಿದೆ. ವಿದ್ಯುತ್​​ ಉತ್ಪಾದನಾ ಘಟಕದ ಮುಖ್ಯ ಅಭಿಯಂತರ ಚಂದ್ರಶೇಖರ್ ಶೆಟ್ಟಿ ಅವರ ದೂರಿನ ಅನ್ವಯ ಕಲ್ಲಿದ್ದಿಲು ಡಂಪಿಂಗ್ ಹಾಗೂ ಸ್ವಚ್ಛತೆ ನಿರ್ವಹಣೆ ಮಾಡುತ್ತಿದ್ದ ಎಂ.ಆರ್.​​ಎಸ್. ಪವರ್ ಮೆಕ್ ಕಂಪನಿಯ ಉಪಾಧ್ಯಕ್ಷ ಅಜಯ್ ಕುಮಾರ್ ಹಾಗೂ ಉಸ್ತುವಾರಿ ಸುರೇಂದ್ರನಾಥ್ ವಿರುದ್ಧ ಕೇಸ್​​ ದಾಖಲಾಗಿದೆ.

200 ಟನ್ ಕಲ್ಲಿದ್ದಲು ಅಕ್ರಮ ಸಾಗಾಟ

2025ರ ಮೇ ತಿಂಗಳಿನಿಂದ ಡಿಸೆಂಬರ್ 11ರ ವರೆಗೆ ಅಕ್ರಮವಾಗಿ 10 ಲಕ್ಷ ಮೌಲ್ಯದ ಸುಮಾರು 200 ಟನ್ ಕಲ್ಲಿದ್ದಲು ಸಾಗಾಟ ನಡೆಸಲಾಗಿದೆ. ಆ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಿರ್ವಹಣಾ ಕಂಪನಿ ನಷ್ಟ ಉಂಟುಮಾಡಿದೆ ಎಂದು ರಾಯಚೂರು ಗ್ರಾಮೀಣ ಠಾಣೆಗೆ ನೀಡಲಾದ ದೂರಿನಲ್ಲಿ ಆರೋಪಿಸಲಾಗಿದೆ.

ಕಂಪನಿ ಕಳ್ಳಾಟ

ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಪ್ರತಿನಿತ್ಯ 3-4 ಗೂಡ್ಸ್​​ ರೈಲುಗಳ ಮೂಲಕ 180-240 ಬೋಗಿ ಕಲ್ಲಿದ್ದಲು ಸರಬರಾಜಾಗುತ್ತದೆ. ರೈಲಿನಲ್ಲಿ ಬರುವ ಸುಮಾರು 12-16 ಸಾವಿರ ಟನ್​​ ಪೈಕಿ ಪೂರ್ಣ ಕಲ್ಲಿದ್ದಲು ಡಂಪ್​​ ಮಾಡದೆ ಕಳ್ಳಾಟ ಆಡುತ್ತಿದ್ದ ಕಂಪನಿ, ಕೆಲ ಪ್ರಮಾಣದ ಕಲ್ಲಿದ್ದಲನ್ನು ರೈಲಿನಲ್ಲಿಯೇ ಬಾಕಿ ಉಳಿಸಿಕೊಳ್ಳುತ್ತಿತ್ತು. ಬಳಿಕ ಯರಮರಸ್ ರೈಲು ನಿಲ್ದಾಣದ ಬಳಿ ಉಳಿದ ಕಲ್ಲಿದ್ದಲು ಅನ್​​ಲೋಡ್​​ ಮಾಡಿಕೊಂಡು, ಅಲ್ಲಿಂದ ಅವನ್ನು ಖಾಸಗಿ ಫ್ಯಾಕಟ್ರಿಗಳು ಮತ್ತು ಇಟ್ಟಿಗೆ ಕಾರ್ಖಾನೆಗಳಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿತ್ತು ಎಂದು ದೂರಲ್ಲಿ ಆರೋಪಿಸಲಾಗಿದೆ.

ವಿದ್ಯುತ್ ಉತ್ಪಾದನಾ ಘಟಕಕ್ಕೆ ಸೇರಿದ ಕಲ್ಲಿದ್ದಲು ಅಕ್ರಮ ಸಾಗಾಟದ ಕುರಿತು 2023ರಲ್ಲಿ ಟಿವಿ9 ವಿಸ್ತೃತವಾದ ವರದಿ ಬಿತ್ತರಿಸಿತ್ತು. ಆ ಬಳಿಕ ಕೆಪಿಸಿಎಲ್ ಅಧಿಕಾರಿಗಳು ರಾಯಚೂರು ಗ್ರಾಮೀಣ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದರು. ಈ ಮಧ್ಯೆ ಮತ್ತೆ ವೈಟಿಪಿಎಸ್ ಘಟಕಕ್ಕೆ ಸೇರಿದ ಕಲ್ಲಿದ್ದಿಲು ಅಕ್ರಮ ಸಾಗಾಟದ ಆರೋಪ ಕೇಳಿಬಂದಿದೆ.


Spread the love
Share:

administrator

Leave a Reply

Your email address will not be published. Required fields are marked *