ಪಾಕಿಸ್ತಾನದಲ್ಲಿ ಬಡತನಕ್ಕೆ ಜಿಎಸ್‌ಟಿ ಕಾರಣವೆಂದು ವಿಶ್ವಬ್ಯಾಂಕ್ ವರದಿ

ಹೊಸದಿಲ್ಲಿ: ಪಾಕಿಸ್ಥಾನದಲ್ಲಿ ಬಡತನ ಹೆಚ್ಚಾಗಲು ದೇಶದಲ್ಲಿನ ಸಾಮಾನ್ಯ ಮಾರಾಟ ತೆರಿಗೆ (ಜಿ ಎಸ್‌ಟಿ) ಕಾರಣವಾಗುತ್ತಿದೆ ಎಂದು ವಿಶ್ವಬ್ಯಾಂಕ್‌ನ ವರದಿಯೊಂದು ತಿಳಿಸಿದೆ. ಆದಾಗ್ಯೂ ಆರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿರುವ ಬೆನಜೀರ್ ಆದಾಯ ಬೆಂಬಲ(ಬಿಐಎಸ್‌ಪಿ)ದಂತಹ ಮಾಸಿಕ ಸಹಾಯಧನ ಯೋಜನೆಗಳು ದೇಶದ ಆರ್ಥಿಕ ಅಸಮಾನತೆಯನ್ನು ತೊಡೆದು ಹಾಕಲು ನೆರವಾಗುತ್ತಿದೆ ಎಂದೂ ಬ್ಯಾಂಕ್ ಹೇಳಿದೆ.
ಜಿಎಸ್‌ಟಿಯಂತಹ ಪರೋಕ್ಷ ತೆರಿಗೆ ಹೊರತುಪಡಿಸಿದರೆ, ಶಿಕ್ಷಣ ಕ್ಷೇತ್ರದ ಖರ್ಚು ಪಾಕ್ ಆರ್ಥಿಕ ಅಸಮಾನತೆಗೆ ಕಾರಣವಾಗಿದೆ. ಇದನ್ನು ಕೊನೆಗಾಣಿಸಲು ಸಾಮಾಜಿಕ ವೆಚ್ಚ, ಆಂತರಿಕ ಆದಾಯ ಸಂಗ್ರಹದ ದಕ್ಷತೆ ಸುಧಾರಿಸಲು ಹಾಗೂ ಯೋಜನೆಗಳನ್ನು ಆರ್ಹರಿಗೆ ತಲುಪಿಸುವಂಥ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಬ್ಯಾಂಕ್ ಸಲಹೆ ನೀಡಿದೆ.