ವರ್ಕ್ಫ್ರಮ್ ಹೋಂ ಆಮಿಷ: ₹2.57 ಲಕ್ಷ ಕಳೆದುಕೊಂಡ ಮಹಿಳೆ; ಟೆಲಿಗ್ರಾಂನಲ್ಲಿ ವಂಚನೆ

ಚಿಕ್ಕಮಗಳೂರು: ಅಂತರ್ಜಾಲದಲ್ಲಿ ವರ್ಕ್ಫ್ರಮ್ ಹೋಂ ಕುರಿತಾದ ಆಕರ್ಷಕ ಜಾಹೀರಾತನ್ನು ನಂಬಿದ ಚಿಕ್ಕಮಗಳೂರಿನ ಮಹಿಳೆಯೊಬ್ಬರು ₹2,57,600 ಕಳೆದುಕೊಂಡಿರುವ ಘಟನೆ ನಡೆದಿದೆ.

ವಂಚಿಸಿದ್ದು ಹೇಗೆ?
ಸೈಬರ್ ವಂಚಕರು ಟೆಲಿಗ್ರಾಂ ಆ್ಯಪ್ ಮೂಲಕ ‘ವರ್ಕ್ಫ್ರಮ್ ಹೋಂ ಮಾಡಲು ಇಚ್ಛಿಸುವವರು ಈ ಲಿಂಕ್ ಕ್ಲಿಕ್ ಮಾಡಿ’ ಎಂದು ಜಾಹೀರಾತು ಕಳುಹಿಸಿದ್ದರು. ಈ ಆಮಿಷಕ್ಕೆ ಬಲಿಯಾದ ಮಹಿಳೆ ಲಿಂಕ್ ಕ್ಲಿಕ್ ಮಾಡಿ, ವಂಚಕರ ಸೂಚನೆಗಳನ್ನು ಪಾಲಿಸಿದ್ದಾರೆ.
ಮೊದಲಿಗೆ, ವಂಚಕರು ಸಣ್ಣ ಟಾಸ್ಕ್ಗಳನ್ನು ನೀಡಿ, ವಿಶ್ವಾಸ ಗಳಿಸಲು ₹1000 ಮತ್ತು ₹1300 ಪಾವತಿಸಿದ್ದಾರೆ. ನಂತರ, ‘ಹಣ ಇನ್ವೆಸ್ಟ್ ಮಾಡಿದರೆ ದುಪ್ಪಟ್ಟು ಲಾಭ’ ಎಂದು ಆಮಿಷ ಒಡ್ಡಿ, ಹಂತಹಂತವಾಗಿ ₹2,57,600 ಪಡೆದುಕೊಂಡು ಮೋಸ ಮಾಡಿದ್ದಾರೆ.
ವಂಚನೆಗೊಳಗಾದ ಮಹಿಳೆ ಚಿಕ್ಕಮಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣವನ್ನು ತನಿಖೆಗೆ ಒಳಪಡಿಸಿದ್ದು, ಸೈಬರ್ ವಂಚಕರನ್ನು ಪತ್ತೆಹಚ್ಚುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಇಂತಹ ಆನ್ಲೈನ್ ಜಾಹೀರಾತುಗಳ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.