ಭಾರತೀಯರ ಎಐ ಕಲಿಕೆಯ ಬಗ್ಗೆ ಓಪನ್ ಎಐ ಸಿಇಓ ಹೇಳಿದ್ದೇನು?

ಭಾರತೀಯರು ಎಐ ವಿಚಾರದಲ್ಲಿ ಸಂತೋಷಪಡುವ ಹಾಗೂ ತಮ್ಮ ಬೆನ್ನು ತಟ್ಟಿಕೊಳ್ಳುವ ಸಂತೋಷದ ವಿಚಾರವೊಂದನ್ನು OpenAI ಸಿಇಒ ಹಂಚಿಕೊಂಡಿದ್ದಾರೆ. ಈ ಮೂಲಕ ಹೊಸ ಹೊಸ ವಿಷಯಗಳನ್ನು ಕಲಿಯುವುದರಲ್ಲಿ ಭಾರತೀಯರು ಮುಂದಿದ್ದಾರೆ. ಭಾರತೀಯರು ಯಾವುದೇ ಹೊಸ ವಿಚಾರವನ್ನಾದರೂ ಬೇಗ ಕಲಿಯುತ್ತಾರೆ ಎನ್ನುವುದು ಇದೀಗ ಬಹಿರಂಗವಾಗಿದೆ.

ಎಐ ವಿಚಾರದಲ್ಲಿ ನಾವು ಹಿಂದುಳಿದ್ದೇವೆ. ಭಾರತೀಯರು ಎಐ ಬೇಗ ಕಲಿತುಕೊಳ್ಳುವುದಿಲ್ಲ ಅಥವಾ ಅದನ್ನು ಅಳವಡಿಸಿಕೊಳ್ಳುವಲ್ಲಿ ಹಿಂದುಳಿಯಲ್ಲಿದ್ದಾರೆ ಎನ್ನುವ ಮಾತುಗಳ ನಡುವೆಯೇ ಮಹತ್ವದ ವಿಚಾರವೊಂದು ಬಹಿರಂಗವಾಗಿದೆ. ಎಐ ವಿಚಾರದಲ್ಲಿ ಭಾರತೀಯರು ಹಿಂದುಳಿದಿಲ್ಲ. ವಿಶ್ವದ ವಿವಿಧ ರಾಷ್ಟ್ರಗಳಿಗೆ ಪೈಪೋಟಿ ನೀಡಲಿದ್ದಾರೆ ಎನ್ನುವ ವಿಚಾರವನ್ನು OpenAI ಸಿಇಒ ಸ್ಯಾಮ್ ಆಲ್ಟ್‌ಮನ್ ಅವರು ಹೇಳಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಕೃತಕ ಬುದ್ಧಿಮತ್ತೆ (Aartificial Intelligence) ಅಳವಡಿಸಿಕೊಳ್ಳುವ ವಿಚಾರದಲ್ಲಿ ಹಾಗೂ ಅದನ್ನು ಕೆಲಸದಲ್ಲಿ ಬಳಸಿಕೊಳ್ಳುವಲ್ಲಿ ಭಾರತೀಯರು ಮುಂಚೂಣಿಯಲ್ಲಿದ್ದಾರೆ. ಭಾರತವು ಎಐ ವಿಚಾರದಲ್ಲಿ ಜಾಗತಿಕವಾಗಿ ಅತ್ಯಂತ ಉತ್ಸಾಹಭರಿತ ದೇಶಗಳಲ್ಲಿ ಒಂದಾಗಿದೆ ಎಂದು ಸ್ಯಾಮ್ ಅವರು ಹೇಳಿದ್ದಾರೆ. ಭಾರತವು ಚೀನಾ ಹಾಗೂ ಅಮೆರಿಕಾಗಿಂತ ಎಐ ಬಳಕೆಯ ವಿಚಾರದಲ್ಲಿ ಹಿಂದುಳಿಯುವ ಆತಂಕದ ನಡುವೆ ಈ ವಿಷಯದಲ್ಲಿ ಉತ್ತಮ ಬೆಳವಣಿಗೆ ನಡೆದಿದೆ. ಭಾರತವು ಜಾಗತಿಕವಾಗಿ ಒಪನ್‌ಐನ ಅತಿದೊಡ್ಡ ಮಾರುಕಟ್ಟೆಯಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, ಭಾರತೀಯರು ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ವೇಗವಾಗಿ AI ಅನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಪೀಪಲ್ ಬೈ ಡಬ್ಲ್ಯೂಟಿಎಫ್ ಪಾಡ್‌ಕ್ಯಾಸ್ಟ್‌ನಲ್ಲಿ ನಿಖಿಲ್ ಕಾಮತ್ ಅವರೊಂದಿಗೆ ಮಾತನಾಡಿರುವ ಆಲ್ಟ್‌ಮನ್ ಅವರು, ಈಗ ಎಐ ವಿಚಾರದಲ್ಲಿ ಭಾರತವು ಸಾಕಷ್ಟು ಅಭಿವೃದ್ಧಿಯಾಗಿದೆ. ಐಎ ಟೂಲ್‌ಗಳನ್ನು ಕಲಿತುಕೊಳ್ಳುವುದಕ್ಕೆ ಭಾರತೀಯರು ಅತ್ಯಂತ ಉತ್ಸಾಹಿತರಾಗಿದ್ದಾರೆ. ಎಐ ಬಳಕೆಗೆ ಅತ್ಯಂತ ದೊಡ್ಡ ಸಮಾಜ ಇದೆ ಎಂದರೆ ಅದು ಭಾರತ ಎಂದು ಅವರು ಹೇಳಿದ್ದಾರೆ.
ಭಾರತೀಯರು ವಿವಿಧ ವಿಷಯಗಳನ್ನು ಕಲಿಯುವುದಕ್ಕೆ, ಹೊಸ ಅವಕಾಶಗಳು ಮತ್ತು ಸಮಸ್ಯೆಗಳ ಪರಿಹಾರಕ್ಕೆಂದು ಎಐ ಬಳಕೆ ಮಾಡುತ್ತಿದ್ದಾರೆ. ಇದರಿಂದ ಹೊಸ ಆವಿಷ್ಕಾರಗಳು ಭಾರತದಲ್ಲಿ ಆಗಲಿವೆ. ಎಐನಿಂದ ಭವಿಷ್ಯವನ್ನು ಉತ್ತಮಪಡಿಸಿಕೊಳ್ಳುವುದರಲ್ಲಿ ಭಾರತೀಯರು ನಿಪುಣರು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ನವೋದ್ಯಮಗಳಲ್ಲಿಯೂ ಎಐ ಬಳಕೆ ಸಾಕಷ್ಟಿದೆ ಎಂದಿದ್ದಾರೆ. ಇದು ಭಾರತವು ಎಐ ಅಭಿವೃದ್ಧಿಯಲ್ಲಿ ಮುಂದೆ ಸಾಗಿರುವುದರ ಸಂಕೇತ ಎಂದೇ ಪರಿಗಣಿಸಲಾಗಿದೆ.
ಮುಂಬೈ ಅಥವಾ ಬೆಂಗಳೂರಿನಲ್ಲಿರುವ 25 ವರ್ಷದ ಯುವಕನೊಬ್ಬ ಕಂಪನಿಯನ್ನು ಪ್ರಾರಂಭಿಸಲು ಬಯಸಿದರೆ ಏನು ಮಾಡಬಹುದು ಎನ್ನುವ ವಿಚಾರಕ್ಕೆ ಆಲ್ಟ್‌ಮನ್, ಇದು ಬಹುಶಃ ಅವರ ವೃತ್ತಿಜೀವನವನ್ನು ಪ್ರಾರಂಭಿಸಲು ಅತ್ಯುತ್ತಮವಾದ ಸಮಯವಾಗಿದೆ. ಅದಕ್ಕೆ ಎಐ ಸಹಾಯ ಮಾಡಬಲ್ಲದು ಎಂದಿದ್ದಾರೆ. ಎಐ ಬರುವುದಕ್ಕಿಂತ ಮುಂಚೆ ಕಂಪನಿಗಳನ್ನು ಪ್ರಾರಂಭಿಸುವುದು ದೊಡ್ಡ ಸವಾಲಿನ ಕೆಲಸವಾಗಿತ್ತು. ದಶಕಗಳ ಅನುಭವ ಹಾಗೂ ದೊಡ್ಡ ತಂಡಗಳು ಇದಕ್ಕಾಗಿ ಕೆಲಸ ಮಾಡಬೇಕಾಗಿತ್ತು. ಆದರೆ ಇದೀಗ ಕಂಪ್ಯೂಟರ್ ಹಾಗೂ AI ಕ್ರಾಂತಿಯೊಂದಿಗೆ 25 ವರ್ಷ ವಯಸ್ಸಿನ ಯುವಕನಿಗೆ ಇತಿಹಾಸದಲ್ಲೇ ಹಿಂದೆಂದಿಗಿಂತಲೂ ಹೆಚ್ಚಿನ ಆಧುನಿಕ ತಂತ್ರಜ್ಞಾನ ನೆರವಾಗಿದೆ ಎಂದು ಅವರು ಹೇಳಿದ್ದಾರೆ.
