Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪ್ರಿಯಾಂಕಾ ಗಾಂಧಿಯನ್ನ ಪ್ರಧಾನಿ ಮಾಡೇ ಮಾಡ್ತೀವಿ: ಇಂದಿರಾ ಗಾಂಧಿಯಂತೆ ಸೇಡು ತೀರಿಸಿಕೊಳ್ತಾರೆ ಎಂದ ಸಂಸದ ಇಮ್ರಾನ್ ಮಸೂದ್

Spread the love

ನವದೆಹಲಿ: ಕಾಂಗ್ರೆಸ್ (Congress) ಜನರಲ್ ಸೆಕ್ರೆಟರಿ, ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ಅವರನ್ನು `ಪ್ರಧಾನಿ’ಯಾಗಿ ಮಾಡೇ ಮಾಡ್ತೀವಿ, ಪಿಎಂ ಆಗುವ ಸಾಮರ್ಥ್ಯ ಅವರು ಹೊಂದಿದ್ದಾರೆ, ನೋಡ್ತಿರಿ ಅಂತ ಉತ್ತರ ಪ್ರದೇಶದ ಸಹರಾನ್‌ಪುರ ಕಾಂಗ್ರೆಸ್ (Congress) ಸಂಸದ ಇಮ್ರಾನ್ ಮಸೂದ್ (Imran Masood) ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರ ಹೆಚ್ಚಳ ಕುರಿತು ಪ್ರಿಯಾಂಕಾ ಗಾಂಧಿ ಹೇಳಿಕೆಯನ್ನು ಸಮರ್ಥಿಸಿಕೊಂಡು ಮಾತನಾಡಿದ ಅವರು, ಪ್ರಿಯಾಂಕಾ ಅವರನ್ನು ಪ್ರಧಾನಿಯನ್ನಾಗಿ ಮಾಡಿದರೆ, ತನ್ನ ಅಜ್ಜಿ ಇಂದಿರಾ ಗಾಂಧಿಯಂತೆ ಹೇಗೆ ಸೇಡು ತೀರಿಸಿಕೊಳ್ಳುತ್ತಾರೆ ನೋಡ್ತಾ ಇರಿ ಅಂದಿದ್ದಾರೆ. ಆಕೆ ಇಂದಿರಾ ಗಾಂಧಿ ಮೊಮ್ಮಗಳು. ಅವರು ಪಾಕಿಸ್ತಾನಕ್ಕೆ ತುಂಬಾ ಹಾನಿಯನ್ನುಂಟು ಮಾಡಿದ್ದಾರೆ. ಆ ಗಾಯಗಳು ಇನ್ನೂ ವಾಸಿಯಾಗಿಲ್ಲ. ಪ್ರಧಾನಿಯನ್ನಾಗಿ ಮಾಡಿದರೆ ಆಕೆ ಹೇಗೆ ಪ್ರತೀಕಾರ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ನೋಡಿ, ನಿಮಗೆ ಆ ಎದೆಗಾರಿಕೆ ಇಲ್ಲ ಅಂದಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂ ಯುವಕ ದೀಪು ಚಂದ್ರ ದಾಸ್ ಹತ್ಯೆಯ ನಂತರ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಗಮನ ಹರಿಸಬೇಕೆಂದು ಕೇಂದ್ರವನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಇತ್ತೀಚಿಗೆ ಒತ್ತಾಯಿಸಿದ್ದರು. ಇದಕ್ಕೆ ಬಿಜೆಪಿ ವ್ಯಂಗ್ಯವಾಡಿದ್ದು, ಎಲ್ಲ ಕಡೆಯಿಂದಲೂ ಇದೇ ಬೇಡಿಕೆಯಿದೆ, ನಾನೂ ರಾಜಕೀಯ ಪ್ರವೇಶ ಮಾಡಬೇಕು ಅಂತಿದ್ದಾರೆ ಎಂದು ಪತಿ ರಾಬರ್ಟ್ ವಾದ್ರಾ ಹೇಳಿದ್ದಾರೆ. ತರೂರ್, ಇಮ್ರಾನ್ ಮಸೂದ್, ಎಲ್ಲರೂ ರಾಹುಲ್ ಗಾಂಧಿ ವಿರುದ್ಧ ಅಂತ ಲೇವಡಿ ಮಾಡಿದೆ.


Spread the love
Share:

administrator

Leave a Reply

Your email address will not be published. Required fields are marked *