Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಾಂಗ್ರೆಸ್ ಮಾಜಿ ಸಂಸದ ಶಕೀಲ್ ಅಹ್ಮದ್‌ಗೆ ಜೀವಬೆದರಿಕೆ: ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದೇ ಮುಳುವಾಯಿತೇ?

Spread the love

ಪಾಟ್ನಾ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ‘ಡರ್ಪೋಕ್’ (ಹೆದರು ಪುಕ್ಕಲು) ಮತ್ತು ಅಸುರಕ್ಷಿತ ರಾಜಕಾರಣಿ ಎಂದು ಕರೆದ ಕಾಂಗ್ರೆಸ್‌ನ ಮಾಜಿ ಸಂಸದ ಶಕೀಲ್ ಅಹ್ಮದ್ (Shakeel Ahmad) ಅವರಿಗೆ ಇದೀಗ ಜೀವಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಹಾರದಿಂದ ಮೂರು ಬಾರಿ ಶಾಸಕರಾಗಿ ಮತ್ತು ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅಹ್ಮದ್ ತಮ್ಮ ಪಾಟ್ನಾ ಮತ್ತು ಮಧುಬನಿಯಲ್ಲಿರುವ ನಿವಾಸಗಳ ಮೇಲೆ ದಾಳಿ ನಡೆಸಲು ಸ್ವತಃ ಪಕ್ಷದ ಆಡಳಿತವೇ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ. ಈ ಮಾಹಿತಿ ತಮ್ಮ ಕಾಂಗ್ರೆಸ್ ಸಹೋದ್ಯೋಗಿಗಳೇ ರಹಸ್ಯವಾಗಿ ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಬರೆದಿರುವ ಅವರು, “ಇದು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ” ಎಂದಿದ್ದಾರೆ. ಪ್ರತ್ಯೇಕ ಪೋಸ್ಟ್‌ನಲ್ಲಿ, ರಾಹುಲ್ ಗಾಂಧಿ ವಿರುದ್ಧ ಮಾತನಾಡಿದ್ದಕ್ಕಾಗಿ ಅಹ್ಮದ್ ಅವರ ಪ್ರತಿಕೃತಿಗಳನ್ನು ಸುಡುವಂತೆ ಇತರ ಗುಂಪಿನ ಸದಸ್ಯರನ್ನು ವ್ಯಕ್ತಿಯೊಬ್ಬರು ಕೇಳಿಕೊಂಡಿದ್ದ ವಾಟ್ಸಾಪ್ ಗ್ರೂಪ್ ಚಾಟ್‌ನ ಸ್ಕ್ರೀನ್‌ಶಾಟ್ ಅನ್ನು ಸಹ ಅವರು ಹಂಚಿಕೊಂಡಿದ್ದಾರೆ.

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅಹ್ಮದ್, ಕಾಂಗ್ರೆಸ್‌ನಲ್ಲಿರುವ ನನ್ನ ಸ್ನೇಹಿತರಿಂದ ನನಗೆ ಹಲವಾರು ಫೋನ್ ಕರೆಗಳು ಬಂದಿವೆ. ಅವರು ಪಕ್ಷದ ಕಾರ್ಯಕರ್ತರಿಗೆ ನನ್ನ ಮೇಲೆ ದಾಳಿ ಮಾಡಲು ಹೇಳಲಾಗಿದೆ ಎಂದು ತಿಳಿಸಿದ್ದಾರೆ. ತಮ್ಮ ಅಭಿಪ್ರಾಯ ತಪ್ಪಾಗಿರಬಹುದು, ಆದರೆ ಅದನ್ನು ವ್ಯಕ್ತಪಡಿಸಲು ನನಗೆ ಎಲ್ಲಾ ಹಕ್ಕು ಕೂಡಾ ಇದೆ. ಈ ನಡೆಯ ಹಿಂದೆ ಸ್ವತಃ ರಾಹುಲ್‌ ಗಾಂಧಿ ಅವರ ಕೈವಾಡವಿದೆ ಎಂಬುದು ಬಹಳ ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಶನಿವಾರ, ಅಹ್ಮದ್ ರಾಹುಲ್ ಗಾಂಧಿಯವರನ್ನು ‘ಡರ್ಪೋಕ್’ (ಹೇಡಿ) ಎಂದು ಕರೆದಿದ್ದರು. ಜೊತೆಗೆ ಪಕ್ಷದಲ್ಲಿರುವ ನಾಯಕರು ರಾಹುಲ್‌ ಗಾಂಧಿ ಅವರ ಬಗ್ಗೆ ಹೊಗಳುವವರಿಗೆ ಮಾತ್ರವೇ ಉತ್ತೇಜನ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

2025 ರಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ತೊರೆದ ಅಹ್ಮದ್, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗಾಂಧಿ, ಸಾರ್ವಜನಿಕ ಸ್ಥಾನಮಾನ ಹೊಂದಿರುವ ಹಿರಿಯ ನಾಯಕರ ಸಮ್ಮುಖದಲ್ಲಿ ಅನಾನುಕೂಲತೆಯನ್ನು ಅನುಭವಿಸುತ್ತಾರೆ ಎಂದು ಹೇಳಿದರು. ಅವರು ರಾಹುಲ್ ಅವರನ್ನು “ಸರ್ವಾಧಿಕಾರಿ” ಮತ್ತು “ಪ್ರಜಾಪ್ರಭುತ್ವ ವಿರೋಧಿ” ಎಂದು ಕರೆದಿದ್ದಾರೆ. ಮತ್ತು ಕಾಂಗ್ರೆಸ್‌ನ ಹಿರಿಯ ಸಹೋದ್ಯೋಗಿಗಳ ಮಾತನ್ನು ಅವರು ಕೇಳುವುದಿಲ್ಲ ಎಂದು ಹೇಳಿಕೊಂಡಿದ್ದರು.


Spread the love
Share:

administrator

Leave a Reply

Your email address will not be published. Required fields are marked *