ಕಾರವಾರದ ಬಾಡ ಕಡಲತೀರದಲ್ಲಿ ಅಜ್ಞಾತ ರಾಫ್ಟ್ ಪತ್ತೆ: ಕೊಚ್ಚಿಯಲ್ಲಿ ಮುಳುಗಿದ ಹಡಗಿನದಾಗಿ ಶಂಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಾಡ ಕಡಲತೀರದಲ್ಲಿ ಹಡಗಿನ ರಾಫ್ಟ್ ಪತ್ತೆಯಾದ ಘಟನೆ ನಡೆದಿದೆ.

ನಿನ್ನೆ ರಾತ್ರಿ ವೇಳೆ ಕಡಲ ತೀರಕ್ಕೆ ತೇಲಿ ಬಂದ ರಾಫ್ಟ್ ಮಾದರಿಯ ವಸ್ತುಗಳು ಪತ್ತೆಯಾಗಿದ್ದು, ಸ್ಥಳಕ್ಕೆ ಕರಾವಳಿ ಕಾವಲುಪಡೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಈ ವಸ್ತುಗಳು ಕೇರಳದ ಕೊಚ್ಚಿಯಲ್ಲಿ ಮುಳುಗಿರುವ ಹಡಗಿನ ರಾಫ್ಟ್ ಎಂಬ ಶಂಕೆ ವ್ಯಕ್ತವಾಗಿದೆ. ಮೇ 24ರಂದು ಲೈಬೀರಿಯನ್ ಧ್ವಜ ಹೊತ್ತ ಕಂಟೇನರ್ ಹಡಗು (ಎಂಎಸ್ಸಿ ಎಲ್ಸಾ 3 ಎಂಬ ಹಡಗು) ಕೊಚ್ಚಿ ಅರಬ್ಬೀ ಸಮುದ್ರದಲ್ಲಿ ಮುಳುಗಿತ್ತು. ಈ ಹಡಗಿನ ರಾಫ್ಟ್ ಆಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.