ಕುರಿ ಕಾಯಲು ಹೋಗಿ ಬಾವಿಗೆ ಬಿದ್ದ ಇಬ್ಬರು ಮಕ್ಕಳು: ಸ್ಥಳದಲ್ಲೇ ಸಾವು

ಕಲಬುರಗಿ :ಬಾವಿಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟಿರುವ ದುರಂತಕರ ಘಟನೆ ಚಿತ್ತಾಪುರ ಪಟ್ಟಣದ ಹೊಸ ಮಿನಿ ವಿಧಾನಸೌಧದ ಬಳಿ ನಡೆದಿದೆ. ಕುಶಾಲ್ ಚನ್ನಪ್ಪ (8), ರಾಜು ಚನ್ನಪ್ಪ (14) ಮೃತಪಟ್ಟ ದುರ್ದೈವಿಗಳು.
ಬಾಲಕರು ಒಂಟಿ ಕಮಾನ್ ನಿಂದ ಕುರಿ ಕಾಯಲು ಮಿನಿ ವಿಧಾನಸೌದದ ಹತ್ತಿರ ಬಂದಿದ್ದರು.
ಈ ವೇಳೆ ಬಾವಿಗೆ ಇಳಿಯಲು ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳೀಯರಿಂದ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ಧಾವಿಸಿ ಶವಗಳನ್ನು ಹೊರ ತೆಗೆದಿದ್ದಾರೆ. ತಹಶೀಲ್ದಾರ್ ನಾಗಯ್ಯ ಹಿರೇಮಠ, ಪಿಎಸ್’ಐ ಶ್ರೀಶೈಲ್ ಅಂಬಾಟಿ, ವಿಜಯ ಕುಮಾರ, ಸವಿಕುಮಾರ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.