Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

700 ರೂ. ಟಿಕೆಟ್ 380 ರೂ.ಗೆ ಮಾರುತ್ತಿದ್ದ ಟಿಟಿಇ ಅಮಾನತು; ರೈಲ್ವೆ ಇಲಾಖೆಯ ಖಡಕ್ ಕ್ರಮ!

Spread the love

ದುಡ್ಡು ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ, ದುಡ್ಡಿನ ಮಹಿಮೆಯೇ ಅಂತಹದ್ದು. ಕೆಲವರು ಹಣ ಮಾಡಲು ಕಳ್ಳ ದಾರಿಯನ್ನು ಹಿಡಿಯುವುದನ್ನು ನೀವು ನೋಡಿರುತ್ತೀರಿ. ಆದರೆ ಇದೀಗ ‘ವಂದೇ ಭಾರತ್ ಎಕ್ಸ್‌ಪ್ರೆಸ್’ (Vande Bharath Express) ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ಅಧಿಕೃತ ದರಕ್ಕಿಂತ ಕಡಿಮೆ ದರಕ್ಕೆ ಟಿಕೆಟ್ ಮಾರುತ್ತಿದ್ದ ವೇಳೆ ಟಿಟಿಇ ಸಿಕ್ಕಿ ಬಿದ್ದಿದ್ದಾನೆ. ತಕ್ಷಣವೇ ಕ್ರಮ ಕೈಗೊಂಡ ರೈಲ್ವೆ ಇಲಾಖೆಯೂ ಟಿಟಿಇಯನ್ನು (TTE) ಕೆಲಸದಿಂದ ಅಮಾನತುಗೊಳಿಸಿದೆ.
ಘರ್ ಕೆ ಕಲೇಷ್ (Ghar Ke Kalesh) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಟಿಟಿಇ ಹಾಗೂ ಪ್ರಯಾಣಿಕರ ನಡುವಿನ ಸಂಭಾಷಣೆ ನೀವು ಗಮನಿಸಬಹುದು. 700 ರೂಪಾಯಿ ವಂದೇ ಭಾರತ್ ಟಿಕೆಟ್ ನ್ನು ಕೇವಲ 380 ರೂಪಾಯಿಗಳಿಗೆ ಕೊಡುವುದಾಗಿ ಟಿಟಿಇ ಹೇಳುತ್ತಿರುವುದನ್ನು ಕಾಣಬಹುದು. ಟಿಟಿಇ ಇದು ನಿಯಮಕ್ಕೆ ವಿರುದ್ಧ ಎಂದು ಹೇಳುತ್ತಲೇ, ಕಡಿಮೆ ಹಣಕ್ಕೆ ಪ್ರಯಾಣದ ವ್ಯವಸ್ಥೆ ಮಾಡುವುದಾಗಿ ಹೇಳುತ್ತಿರುವುದನ್ನು ನೀವು ಕಾಣಬಹುದು.ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ. ದಾನಾಪುರ ವಿಭಾಗದ ರೈಲ್ವೆ ವ್ಯವಸ್ಥಾಪಕರು, ಸಂಬಂಧಿತ ಟಿಟಿಇಯನ್ನು ತನಿಖೆ ಮುಗಿಯುವವರೆಗೆ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.ಈ ವಿಡಿಯೋ ನಲವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡುಕೊಂಡಿದ್ದು, ಒಬ್ಬ ಬಳಕೆದಾರ, ಭ್ರಷ್ಟಾಚಾರದ ಪರಮಾವಧಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನಮ್ಮ ದೇಶದ ವ್ಯವಸ್ಥೆಯನ್ನು ಹಾಳು ಮಾಡುವವರು ಇಂತಹವರೇ ಎಂದು ಹೇಳಿದ್ದಾರೆ. ಮತ್ತೊಬ್ಬರು, ಟಿಟಿಇ ಸಹಾಯ ಮಾಡುವ ಮನೋಭಾವ ತುಂಬಾನೇ ಇದೆ ಎಂದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *