Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟ್ರಂಪ್ ಹೇಳಿಕೆಗಳು ಅರ್ಥಹೀನ; ಯುದ್ಧದ ಅಂತ್ಯವನ್ನು ನಾವೇ ನಿರ್ಧರಿಸುತ್ತೇವೆ: ಇರಾನ್ ಸೇನೆ ತಿರುಗೇಟು

Spread the love

ಟೆಹ್ರಾನ್: ಇರಾನ್-ಅಮೆರಿಕ ನಡುವಿನ ಸಂಘರ್ಷದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಗಳಿಗೆ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRCG) ತೀವ್ರ ಪ್ರತಿಕ್ರಿಯೆ ನೀಡಿದೆ. ಯುದ್ಧ ಯಾವಾಗ ಮತ್ತು ಹೇಗೆ ಮುಗಿಯಬೇಕು ಎಂಬುದನ್ನು ವಾಷಿಂಗ್ಟನ್ ಅಲ್ಲ ಟೆಹ್ರಾನ್ ನಿರ್ಧರಿಸುತ್ತದೆ ಎಂದು IRGC ಹೇಳಿದೆ ಎಂದು ವರದಿಯಾಗಿದೆ.
ಸೋಮವಾರ ಅಮೆರಿಕದ ಮಾಧ್ಯಮಗಳೊಂದಿಗೆ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧವು “ಬಹುಮಟ್ಟಿಗೆ ಮುಗಿದಿದೆ” ಎಂದು ಹೇಳಿದ್ದಾರೆ. ಆದರೆ ಕೆಲವೇ ಗಂಟೆಗಳ ಬಳಿಕ ರಿಪಬ್ಲಿಕನ್ ಪಕ್ಷದ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು ಭಿನ್ನ ಸ್ವರ ವ್ಯಕ್ತಪಡಿಸಿದರು. ಅಮೆರಿಕ ಈಗಾಗಲೇ “ಅನೇಕ ರೀತಿಯಲ್ಲಿ ಗೆದ್ದಿದೆ, ಆದರೆ “ಇನ್ನೂ ಸಂಪೂರ್ಣವಾಗಿ ಗೆದ್ದಿಲ್ಲ” ಎಂದು ಅವರು ಹೇಳಿದರು. ಇರಾನ್ “ಸಂಪೂರ್ಣವಾಗಿ ಮತ್ತು ನಿರ್ಣಾಯಕವಾಗಿ ಸೋಲಿಸಲ್ಪಡುವವರೆಗೆ” ಯುದ್ಧ ಮುಂದುವರಿಯಲಿದೆ ಎಂದೂ ತಿಳಿಸಿದ್ದಾರೆ.

ಸಿಬಿಎಸ್ ನ್ಯೂಸ್‌ನ ಶ್ವೇತಭವನ ವರದಿಗಾರ ವೀಜಿಯಾ ಜಿಯಾಂಗ್ ಅವರಿಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ಟ್ರಂಪ್, ಯುದ್ಧ “ನಿಗದಿತ ಸಮಯಕ್ಕಿಂತ ಬಹಳ ಮುಂದಿದೆ” ಎಂದು ತಿಳಿಸಿದ್ದಾರೆ. ಇರಾನ್ ನ ಮಿಲಿಟರಿ ಸಾಮರ್ಥ್ಯಗಳು ತೀವ್ರವಾಗಿ ಕುಸಿದಿವೆ ಎಂದು ಹೇಳಿದ ಅವರು, “ಅವರಿಗೆ ನೌಕಾಪಡೆ ಇಲ್ಲ, ಸಂವಹನ ವ್ಯವಸ್ಥೆ ಇಲ್ಲ, ವಾಯುಪಡೆಯೂ ಇಲ್ಲ” ಎಂದು ಹೇಳಿದ್ದಾರೆ.
ಟ್ರಂಪ್‌ ಅವರ ಹೇಳಿಕೆಗಳಿಗೆ IRGC ತೀಕ್ಷ್ಯ ಪ್ರತಿಕ್ರಿಯೆ ನೀಡಿದೆ. ಸಂಘರ್ಷ ಹೇಗೆ ಮತ್ತು ಯಾವಾಗ ಕೊನೆಗೊಳ್ಳಬೇಕು ಎಂಬುದನ್ನು ಅಮೆರಿಕ ಅಲ್ವ, ಟೆಹ್ರಾನ್ ನಿರ್ಧರಿಸುತ್ತದೆ ಎಂದು IRGC ವಕ್ತಾರರು ಹೇಳಿದ್ದಾರೆ ಎಂದು ಇರಾನಿನ ಸರಕಾರಿ ಮಾಧ್ಯಮ ವರದಿ ಮಾಡಿದೆ.

ಸಿಬಿಎಸ್ ನ್ಯೂಸ್‌ನ ಶ್ವೇತಭವನ ವರದಿಗಾರ ವೀಜಿಯಾ ಜಿಯಾಂಗ್ ಅವರಿಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ಟ್ರಂಪ್, ಯುದ್ಧ “ನಿಗದಿತ ಸಮಯಕ್ಕಿಂತ ಬಹಳ ಮುಂದಿದೆ” ಎಂದು ತಿಳಿಸಿದ್ದಾರೆ. ಇರಾನ್ ನ ಮಿಲಿಟರಿ ಸಾಮರ್ಥ್ಯಗಳು ತೀವ್ರವಾಗಿ ಕುಸಿದಿವೆ ಎಂದು ಹೇಳಿದ ಅವರು, “ಅವರಿಗೆ ನೌಕಾಪಡೆ ಇಲ್ಲ ಸಂವಹನ ವ್ಯವಸ್ಥೆ ಇಲ್ಲ, ವಾಯುಪಡೆಯೂ ಇಲ್ಲ” ಎಂದು ಹೇಳಿದ್ದಾರೆ.
ಟ್ರಂಪ್‌ ಅವರ ಹೇಳಿಕೆಗಳಿಗೆ IRGC ತೀಕ್ಷ್ಯ ಪ್ರತಿಕ್ರಿಯೆ ನೀಡಿದೆ. ಸಂಘರ್ಷ ಹೇಗೆ ಮತ್ತು ಯಾವಾಗ ಕೊನೆಗೊಳ್ಳಬೇಕು ಎಂಬುದನ್ನು ಅಮೆರಿಕ ಅಲ್ಲ, ಟೆಹ್ರಾನ್ ನಿರ್ಧರಿಸುತ್ತದೆ ಎಂದು IRGC ವಕ್ತಾರರು ಹೇಳಿದ್ದಾರೆ ಎಂದು ಇರಾನಿನ ಸರಕಾರಿ ಮಾಧ್ಯಮ ವರದಿ ಮಾಡಿದೆ.

ಟ್ರಂಪ್ ಅವರ ಹೇಳಿಕೆಗಳನ್ನು “ಅಸಂಬದ್ಧ” ಎಂದು ತಳ್ಳಿಹಾಕಿದ ವಕ್ತಾರರು, ಅಮೆರಿಕ ಮತ್ತು ಇಸ್ರೇಲ್ ದಾಳಿಗಳು ಮುಂದುವರಿದರೆ ಈ ಪ್ರದೇಶದಿಂದ “ಒಂದು ಲೀಟರ್ ತೈಲವೂ ರಫ್ತು ಮಾಡಲು ಅವಕಾಶ ನೀಡುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಕೊಲ್ಲಿಯ ಪ್ರದೇಶದ ಮೂಲಕ ನಡೆಯುವ ಇಂಧನ ಸಾಗಣೆಗೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಸೂಚಿಸಿದ್ದಾರೆ.
ಈ ಪ್ರದೇಶದಲ್ಲಿನ ಭದ್ರತೆ “ಎಲ್ಲರಿಗೂ ಇರಬಹುದು ಅಥವಾ ಯಾರಿಗೂ ಇರದಿರಬಹುದು” ಎಂದು IRGC ಎಚ್ಚರಿಕೆ ನೀಡಿದ್ದು, ಅಗತ್ಯವಿದ್ದರೆ ಇರಾನ್ ಪ್ರಾದೇಶಿಕ ಸ್ಥಿರತೆಯನ್ನು ಅಡ್ಡಿಪಡಿಸುವ ರೀತಿಯಲ್ಲಿ ಪ್ರತಿಕ್ರಿಯಿಸಬಹುದು ಎಂದು ಸೂಚಿಸಿದೆ.

ವಾರಾಂತ್ಯದಲ್ಲಿ ಇರಾನ್ ನ ಇಂಧನ ಮೂಲಸೌಕರ್ಯಗಳ ಮೇಲೆ ಅಮೆರಿಕ-ಇಸ್ರೇಲ್ ದಾಳಿಗಳ ಅಲೆಯ ನಂತರ ಈ ಬೆದರಿಕೆಗಳ ವಿನಿಮಯ ನಡೆದಿದೆ. ಶನಿವಾರ ತಡರಾತ್ರಿ ಟೆಹ್ರಾನ್ ಮತ್ತು ನೆರೆಯ ಅಲ್ಲೋರ್ಜ್ ಪ್ರಾಂತ್ಯಗಳಲ್ಲಿ ಇರುವ ಐದು ತೈಲ ಡಿಪೋಗಳು ದಾಳಿಯಿಂದ ಹಾನಿಗೊಂಡಿವೆ ಎಂದು ಇರಾನಿನ ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಗಳ ಪರಿಣಾಮವಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆ ರವಿವಾರದವರೆಗೆ ರಾಜಧಾನಿ ಪ್ರದೇಶವನ್ನು ಆವರಿಸಿತ್ತು. ದಾಳಿಗಳ ನಂತರ ಟೆಹ್ರಾನ್ ಪ್ರಾಂತ್ಯದಲ್ಲಿ ಇಂಧನ ಸರಬರಾಜು ತಾತ್ಕಾಲಿಕವಾಗಿ ಅಡ್ಡಿಯಾಯಿತು. ಆದರೆ ಎರಡು ಅಥವಾ ಮೂರು ದಿನಗಳಲ್ಲಿ ಸರಬರಾಜು ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶವು ದೀರ್ಘಕಾಲದ ಸಂಘರ್ಷಕ್ಕೆ ಸಿದ್ಧವಾಗುತ್ತಿದೆ ಎಂದು ಇರಾನಿನ ಅಧಿಕಾರಿಗಳು ಸೂಚಿಸಿದ್ದಾರೆ. ಟೆಹ್ರಾನ್ ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳು, ಡೋನ್ ಗಳು ಮತ್ತು ಯುದ್ಧ ನೌಕೆಗಳನ್ನು ಸಂಗ್ರಹಿಸಿದ್ದು, ಕನಿಷ್ಠ ಆರು ತಿಂಗಳ ಕಾಲ ಹೆಚ್ಚಿನ ತೀವ್ರತೆಯ ಯುದ್ಧವನ್ನು ಮುಂದುವರಿಸಲು ಸಾಮರ್ಥ್ಯವಿದೆ ಎಂದು IRGC ವಕ್ತಾರರು ತಿಳಿಸಿದ್ದಾರೆ.
ಇದರ ಜೊತೆಗೆ ಶೀಘ್ರದಲ್ಲೇ ಹೊಸ ತಂತ್ರಗಳನ್ನು ಪರಿಚಯಿಸುವ ಸಾಧ್ಯತೆಯಿದ್ದು, ದೀರ್ಘ ಶ್ರೇಣಿಯ ಮತ್ತು ಹೆಚ್ಚು ಸುಧಾರಿತ ಕ್ಷಿಪಣಿಗಳನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಇದುವರೆಗೆ ನಡೆದ ಅಮೆರಿಕ ಮತ್ತು ಇಸ್ರೇಲ್ ದಾಳಿಗಳಲ್ಲಿ ಇರಾನ್‌ನಲ್ಲಿ 1,332 ಮಂದಿ ಸಾವನ್ನಪ್ಪಿದ್ದಾರೆ ಎಂದು ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿ ತಿಳಿಸಿದೆ. ಸಾವಿರಾರು ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳನ್ನು ಒಳಗೊಂಡಂತೆ 9,669 ನಾಗರಿಕ ಸೌಲಭ್ಯಗಳಿಗೆ ಹಾನಿಯಾಗಿದೆ ಎಂದು ಸಂಸ್ಥೆ ವರದಿ ಮಾಡಿದೆ.


Spread the love
Share:

administrator

Leave a Reply

Your email address will not be published. Required fields are marked *