Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟ್ರಂಪ್ ಭಾಷಣ: ಅಮೆರಿಕದ ಭವಿಷ್ಯ ಮತ್ತು ನೀತಿಗಳ ಬದಲಾವಣೆ

Spread the love

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಹಿಂದಿರುಗಿದ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಜಂಟಿ ಅಧಿವೇಶನದಲ್ಲಿ ಮಾತನಾಡಿದರು. ಈ ವೇಳೆ ತಮ್ಮ ಎರಡನೇ ಅಧಿಕಾರ ಅವಧಿಯ ಸಂಪೂರ್ಣ ಯೋಜನೆಗಳ ನೋಟವನ್ನು ಪ್ರಸ್ತುತಪಡಿಸಿದರು.
ಅಮೆರಿಕದ ನಾಗರಿಕರ ಆರ್ಥಿಕತೆ, ಭದ್ರತೆ ಮತ್ತು ಜಾಗತಿಕ ಸಹಕಾರ ಬಲಪಡಿಸುವ ಬದ್ಧತೆ ಬಗ್ಗೆ ಟ್ರಂಪ್ ಮಾತನಾಡಿದರು. ಎರಡನೇ ಅವಧಿಯ ಪ್ರಮುಖ ಆದ್ಯತೆ ಬಗ್ಗೆ ಪ್ರಸ್ತಾಪ ಮಾತನಾಡಿ, ಅಮೆರಿಕದ ಭದ್ರತೆ, ಆರೋಗ್ಯ ಮತ್ತು ಆರ್ಥಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುವುದಾಗಿ ಘೋಷಿಸಿದರು.

ಟ್ರಂಪ್ ಘೋಷಣೆ

ದೇಶೀಯ ಮತ್ತು ವಿದೇಶಾಂಗ ನೀತಿಯಲ್ಲಿ ಬದಲಾವಣೆ
ಕೆಲವು ವಾರಗಳಲ್ಲಿ ಆರ್ಥಿಕತೆಯನ್ನು ಸುಧಾರಿಸುವುದು
ಆರೋಗ್ಯ ವ್ಯವಸ್ಥೆಯ ಮೇಲ್ವಿಚಾರಣೆ ಮಾಡುವುದು
ಅಂತಾರಾಷ್ಟ್ರೀಯ ವ್ಯಾಪಾರ ಸಂಬಂಧಗಳ ಮೇಲೆ ನಿಗಾ
ಅಮೆರಿಕದ ನಾಗರಿಕರ ಜೀವನ ಮಟ್ಟವನ್ನು ಹೆಚ್ಚಿಸುವುದು
ಅಮೆರಿಕದ ಜಾಗತಿಕ ನಾಯಕತ್ವದ ಪಾತ್ರ ಬಲಪಡಿಸುವುದು.
ಕಾಂಗ್ರೆಸ್‌ಗೆ ಸಂದೇಶ

ತಮ್ಮ ನೀತಿಗಳನ್ನು ಬೆಂಬಲಿಸುವಂತೆ ಅಧಿವೇಶದನ ಸಭೆಗೆ ಟ್ರಂಪ್ ಮನವಿ ಮಾಡಿಕೊಂಡರು. ಅಮೆರಿಕವನ್ನು ಬಲಿಷ್ಠ ಮತ್ತು ಸಮೃದ್ಧ ದೇಶವನ್ನಾಗಿ ಮಾಡಲು ಸಹಾಯ ಮಾಡಬೇಕು. ಒಗ್ಗಟ್ಟಾಗಿ ದೇಶದ ಹಿತಾಸಕ್ತಿಗಾಗಿ ಕೆಲಸ ಮಾಡೋಣ. ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ರೂಪಿಸಲು ಇದೇ ಒಳ್ಳೆಯ ಸಮಯ ಎಂದು ಟ್ರಂಪ್ ಹೇಳಿದರು.
ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

ಅಮೆರಿಕದ ಕನಸು ಅಜೇಯವಾಗಿದೆ. ಹಲವು ದಶಕಗಳಲ್ಲಿ ಕಾಣದ ಜನಾದೇಶ ನಮಗೆ ಸಿಕ್ಕಿದೆ. ರಿಪಬ್ಲಿಕನ್ ಪಕ್ಷದ ಗೆಲುವು ಶ್ಲಾಘನೀಯ
ಇನ್ಮುಂದೆ ಅಮೆರಿಕದಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ಲಿಂಗಗಳು ) ಮಾತ್ರ ಇರುತ್ತವೆ. ಮಹಿಳಾ ಕ್ರೀಡೆಗಳಲ್ಲಿ ಪುರುಷರು ಭಾಗವಹಿಸುವುದು ನಿಷೇಧ
ವಾಕ್ ಸ್ವಾತಂತ್ರ್ಯಕ್ಕೆ ಉತ್ತೇಜನ ಮತ್ತು ಅಮೆರಿಕದ ಏಕೈಕ ಅಧಿಕೃತ ಭಾಷೆ ಇಂಗ್ಲಿಷ್
ಮೆಕ್ಸಿಕೋ ಕೊಲ್ಲಿ (Gulf of Mexico) ಇನ್ಮುಂದೆ ಅಮೆರಿಕದ ಕೊಲ್ಲಿಯಾಗಿ (Gulf of America) ಮರುನಾಮಕರಣ
ನಮ್ಮ ಪ್ರತಿಯೊಂದು ಹೊಸ ನಿರ್ಧಾರವೂ ಹಳೆಯ 100 ನಿರ್ಧಾರಗಳನ್ನು ಹಿಮ್ಮೆಟ್ಟಿಸಲಿದೆ
ದೇಶಕ್ಕೆ ಪ್ರಯೋಜನಕಾರಿಯಲ್ಲದ ಬೈಡೆನ್ ನೀತಿಗಳು ರದ್ದು. ಹಿಂದಿನ 4 ವರ್ಷಗಳಲ್ಲಿ ಮಾಡಲು ಸಾಧ್ಯವಾಗದ್ದನ್ನು ತಮ್ಮ ಸರ್ಕಾರ 43 ದಿನದಲ್ಲಿ ಮಾಡಿದೆ
‘ಅಮೆರಿಕಾ ಹಿಂತಿರುಗಿದೆ’ (America Is Back).
DOGE ಉತ್ತಮ ಕೆಲಸ ಮಾಡಿದೆ. ಅಸಂಬದ್ಧ ನೀತಿಗಳನ್ನು ರದ್ದುಗೊಳಿಸಿದೆ.

ಇದೇ ವೇಳೆ ಏಪ್ರಿಲ್ 2 ರಿಂದ ಭಾರತ ಮತ್ತು ಚೀನಾ ವಿರುದ್ಧ ಪರಸ್ಪರ ಸುಂಕ (Reciprocal tariffs ) ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಇದಕ್ಕೂ ಮೊದಲು ಕೆನಡಾ ಮತ್ತು ಮೆಕ್ಸಿಕೊ ಮೇಲೆ ಅಮೆರಿಕ ಈ ಸುಂಕ ವಿಧಿಸಿತ್ತು. ಕೆನಡಾ, ಮೆಕ್ಸಿಕೊ, ಭಾರತ ಮತ್ತು ದಕ್ಷಿಣ ಕೊರಿಯಾಗಳು ನಮ್ಮ ಮೇಲೆ ಬಹಳಷ್ಟು ಸುಂಕಗಳನ್ನು ವಿಧಿಸುತ್ತವೆ ಎಂದು ಟ್ರಂಪ್ ಆರೋಪಿಸಿದ್ದರು. ಏಪ್ರಿಲ್ 2 ರಿಂದ ಕೆನಡಾ, ಮೆಕ್ಸಿಕೊ, ಚೀನಾ ಮತ್ತು ಭಾರತದ ಮೇಲೆ ಪರಸ್ಪರ ತೆರಿಗೆ ವಿಧಿಸುತ್ತೇವೆ. ನಮ್ಮ ಮೇಲೆ ತೆರಿಗೆ ವಿಧಿಸುವವರ ಮೇಲೆ, ನಾವು ಸಹ ಅಷ್ಟೇ ಪ್ರಮಾಣದ ತೆರಿಗೆಯನ್ನು ವಿಧಿಸುತ್ತೇವೆ ಎಂದು ಟ್ರಂಪ್ ಘೋಷಣೆ ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *