“ವೆನೆಜುವೆಲಾದ ಅಧ್ಯಕ್ಷ ನಾನೇ!”: ಸಾಮಾಜಿಕ ಜಾಲತಾಣದಲ್ಲಿ ಎಡಿಟ್ ಮಾಡಿದ ಫೋಟೋ ಹಂಚಿಕೊಂಡು ಡೊನಾಲ್ಡ್ ಟ್ರಂಪ್ ಸಂಚಲನ

ವಾಷಿಂಗ್ಟನ್: ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ನಾನೇ ಎಂದು ಅಮೆರಿಕದ (USA) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಣೆ ಮಾಡಿದ್ದಾರೆ.

ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಟ್ರಂಪ್ ವೆನೆಜುವೆಲಾದ (Venezuela) ಹಂಗಾಮಿ ಅಧ್ಯಕ್ಷ ಎಂಬ ಹುದ್ದೆಯೊಂದಿಗೆ ತಮ್ಮನ್ನು ಚಿತ್ರಿಸಿಕೊಳ್ಳುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ತಮ್ಮ ಟ್ರೂತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಪೋಸ್ಟ್, ಜನವರಿ 2026 ರ ಹೊತ್ತಿಗೆ ಟ್ರಂಪ್ ಅವರನ್ನು ವೆನೆಜುವೆಲಾದ ಅಧ್ಯಕ್ಷ ಎಂದು ಬಿಂಬಿಸುವ ಕಿಪೀಡಿಯಾ ಪುಟದ ಡಿಜಿಟಲ್ ಸಂಪಾದಿತ ಚಿತ್ರವನ್ನು ತೋರಿಸಿದೆ