ಟ್ರಂಪ್ ಸುಂಕದ ಹೊಡೆತ: ಭಾರತೀಯ ಷೇರು ಮಾರುಕಟ್ಟೆ ಭಾರೀ ಕುಸಿತ

ಮುಂಬೈ : ಟ್ರಂಪ್ ಭಾರತದ ಮೇಲೆ ಹೇರಿದ 50 % ಸುಂಕಕ್ಕೆ ಭಾರತದ ಷೇರು ಮಾರಕಟ್ಟೆ ಭಾರೀ ಕುಸಿತ ಕಂಡಿದೆ. ಅಗಸ್ಟ್ 27 ರಂದು ಕುಸಿತ ಕಂಡಿದ್ದ ಮಾರ್ಕೆಟ್ ಇಂದು ಮತ್ತೆ ಕುಸಿತ ಕಂಡಿದೆ.

ಬೆಳಿಗ್ಗೆ ಮಾರುಕಟ್ಟೆ ವಹಿವಾಟು ಪ್ರಾರಂಭವಾಗುತ್ತಿದ್ದಂತೆ ಷೇರು ಮಾರುಕಟ್ಟೆ ಕುಸಿತ ಆರಂಭಿಸಿದೆ. ಸೆನ್ಸೆಕ್ಸ್ 200 ಪಾಯಿಂಟ್‌ಗಳಷ್ಟು ಮತ್ತು ನಿಫ್ಟಿ 50 ಪಾಯಿಂಟ್‌ಗಳಷ್ಟು ಕುಸಿತ ಆಗಿದೆ. ವಿದೇಶಿ ಹೂಡಿಕೆ ಹಿಂತೆಗೆಯುತ್ತಿರುವುದು ಹಾಗೂ ಏಷ್ಯಾದ ಮಾರುಕಟ್ಟೆಗಳ ದುರ್ಬಲ ಪ್ರವೃತ್ತಿ ಕೂಡಾ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಬಹುತೇಕ ಷೇರುಗಳು ಮೌಲ್ಯಗಳು ಕೂಡ ಇಳಿಯುತ್ತಿದೆ.