ಐಫೋನ್‌ನಲ್ಲಿ ಟ್ರೂಕಾಲರ್ ಕರೆ ರೆಕಾರ್ಡಿಂಗ್ ಸ್ಥಗಿತ

ಯುಎಸ್ : ಟ್ರೂಕಾಲರ್ (True caller) ಶೀಘ್ರದಲ್ಲೇ ಐಫೋನ್‌ನಲ್ಲಿ (iPhone) ಕರೆ ರೆಕಾರ್ಡಿಂಗ್ (Call recording) ಸೌಲಭ್ಯ ನೀಡುವುದನ್ನು ನಿಲ್ಲಿಸಲಿದೆ. ಕರೆ ರೆಕಾರ್ಡ್ ಮಾಡಲು ವಿನ್ಯಾಸಗೊಳಿಸಲಾದ APP ಗಳನ್ನು ಗೂಗಲ್ (Google) ಬಂದ್ ಮಾಡಿದೆ.ಕರೆ ಮಾಡುವವರ ಹೆಸರು ಗುರುತಿಸುವ ಸೌಲಭ್ಯ ಹೊಂದಿರೋ ಟ್ರೂಕಾಲರ್ನ್ನು ಅಪ್ಲಿಕೇಶನ್ Android ಮತ್ತು iOS ಪ್ಲಾಟ್‌ಫಾರ್ಮ್‌ಗಳಲ್ಲಿ ಸುಲಭವಾಗಿ ಸಿಗುತ್ತಿದೆ.

ಸ್ವೀಡನ್ ಮೂಲದ ಟ್ರೂಕಾಲರ್, ಸ್ಪ್ಯಾಮ್ ಕರೆ, ಮೆಸೇಜ್ಗಳನ್ನು ತಡೆಯಲು ನಾನಾ ಕ್ರಮ ಕೈಗೊಳ್ಳುತ್ತಿದೆ.
ಆದ್ರೆ ಐಫೋನ್‌ನಲ್ಲಿ ಇನ್ಮುಂದೆ ಕರೆ ರೆಕಾರ್ಡಿಂಗ್ ಇಲ್ಲ.ಟ್ರೂಕಾಲರ್‌ನ ಕರೆ ರೆಕಾರ್ಡಿಂಗ್ ಸೌಲಭ್ಯ ಸೆಪ್ಟೆಂಬರ್ 30 ರಿಂದ ಐಫೋನ್‌ನಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಅಂದ್ರೆ ಐಫೋನ್‌ನಲ್ಲಿ ಇನ್ಮುಂದೆ ಕರೆಗಳನ್ನು ರೆಕಾರ್ಡ್ ಮಾಡೋಕಾಗಲ್ಲ. ಈಗಾಗಲೇ ರೆಕಾರ್ಡ್ ಮಾಡಿದ ಕರೆಗಳು ಕೂಡಾ ಡಿಲೀಟ್ ಆಗಲಿವೆ.ಸ್ಪ್ಯಾಮ್ ಕರೆಗಳನ್ನು ಎದುರಿಸಲು ನಾವು ಗಮನ ಹರಿಸುತ್ತಿದ್ದೇವೆ. ಆದ್ದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ’ ಎಂದು ಟ್ರೂಕಾಲರ್‌ನ iOS ವಿಭಾಗದ ನಿರ್ದೇಶಕ ನಕುಲ್ ಕಬ್ರಾ ತಿಳಿಸಿದ್ದಾರೆ.
ಕಾಲರ್ ಐಡೆಂಟಿಫಿಕೇಶನ್ ಪ್ಲಾಟ್‌ಫಾರ್ಮ್ ಆಗಿರೋ ಟ್ರೂಕಾಲರ್, ತನ್ನ ಬಳಕೆದಾರರಿಗೆ ಮೂರು ಆಯ್ಕೆಗಳನ್ನು ನೀಡಿದೆ. ಈಗಾಗಲೇ ಇರುವ ರೆಕಾರ್ಡಿಂಗ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇಮೇಲ್ ಮತ್ತು ಇತರ ಅಪ್ಲಿಕೇಶನ್ ಗಳ ಮೂಲಕ ಹಂಚಿಕೊಳ್ಳಿ ಇಲ್ಲವೇ ಟ್ರೂಕಾಲರ್‌ನಿಂದ ಐಕ್ಲೌಡ್‌ಗೆ ಬದಲಾಯಿಸಿ ಎಂದು ಹೇಳಿದೆ.
ಸದ್ಯ, ಟ್ರೂಕಾಲರ್ ಆಂಡ್ರಾಯ್ಡ್‌ನಲ್ಲಿ ತನ್ನ ಡಯಲರ್‌ನಲ್ಲಿ ವಿಶೇಷವಾಗಿ ನೀಡಿರೋ ಬಟನ್ ಒತ್ತಿದರೆ ಕರೆ ರೆಕಾರ್ಡ್ ಆಗುತ್ತದೆ. ಆದರೆ, iOS ಬಳಕೆದಾರರು ಅಪ್ಲಿಕೇಶನ್ ಮೂಲಕ ರೆಕಾರ್ಡಿಂಗ್ ಮಾಡೋಕೆ ಆಗೋದಿಲ್ಲ.ಸೆಪ್ಟೆಂಬರ್ 30 ರ ನಂತರ iOS ನಲ್ಲಿ ಕರೆ ರೆಕಾರ್ಡಿಂಗ್ ಸೌಲಭ್ಯ ಕಣ್ಮರೆಯಾಗುತ್ತದೆ. ಆಂಡ್ರಾಯ್ಡ್‌ನಲ್ಲಿ ಟ್ರೂಕಾಲರ್‌ನ ಕರೆ ರೆಕಾರ್ಡಿಂಗ್ ಸೌಲಭ್ಯವೂ ಹೋಗುತ್ತಾ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಐಫೋನ್ ರಫ್ತಿನಲ್ಲಿ ಭಾರತ ದಾಖಲೆ :
ಐಫೋನ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದ ಚೀನಾಕ್ಕೆ ಭಾರತ ಶಾಕ್ ಕೊಟ್ಟಿದೆ. ಅಮೆರಿಕಕ್ಕೆ ಐಫೋನ್‌ಗಳನ್ನು ರಫ್ತು ಮಾಡುವಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದ್ದು, ಭಾರತದಿಂದ ಅಮೆರಿಕಕ್ಕೆ ಐಫೋನ್ ರಫ್ತು ದಾಖಲೆಯ ಮಟ್ಟವನ್ನು ತಲುಪಿದೆ.
ಮಾರುಕಟ್ಟೆ ಸಂಶೋಧನಾ ಕಂಪನಿ ಓಮ್ಡಿಯಾ ಈ ವರದಿಯನ್ನು ಬಿಡುಗಡೆ ಮಾಡಿದ್ದು, ಕಳೆದ ಏಪ್ರಿಲ್ ತಿಂಗಳಲ್ಲಿ ಭಾರತದಿಂದ ಅಮೆರಿಕಕ್ಕೆ ಸುಮಾರು 30 ಲಕ್ಷ ಐಫೋನ್‌ಗಳನ್ನು ಕಳುಹಿಸಲಾಗಿದೆ. ಆದರೆ ಇದೇ ತಿಂಗಳಿನಲ್ಲಿ ಚೀನಾದಿಂದ ಕೇವಲ ಅಮೆರಿಕಕ್ಕೆ 9 ಲಕ್ಷ ಐಫೋನ್‌ಗಳನ್ನು ಮಾತ್ರ ಕಳುಹಿಸಲಾಗಿದೆ. ಬೀಜಿಂಗ್‌ನಿಂದ ವಾಷಿಂಗ್ಟನ್‌ಗೆ ಐಫೋನ್ ಸಾಗಣೆಯು ಸುಮಾರು ಶೇಕಡಾ 76ರಷ್ಟು ಕುಸಿತ ಕಂಡಿದೆ.
ಭಾರತದಲ್ಲಿ ಐಫೋನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸದಂತೆ ಟಿಮ್ ಕುಕ್ ಅವರಿಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಲಹೆ ನೀಡಿದ ಬೆನ್ನಲ್ಲೇ ಈ ವರದಿ ಬಂದಿದ್ದು, ಭಾರತದ ಸಾಮರ್ಥ್ಯವನ್ನು ಕೆಳ ಮಟ್ಟದಲ್ಲಿ ಕಂಡ ಡೋನಾಲ್ಡ್ ಟ್ರಂಪ್ ಗಪ್ ಚುಪ್ ಆಗುವಂತೆ ಮಾಡಿದೆ.
