ಪ್ರವಾಸದ ಹೆಸರಿನಲ್ಲಿ ಮೋಸ: ಮೈಸೂರಿನಲ್ಲಿ ಇಬ್ಬರು ಮಹಿಳೆಯರಿಗೆ 18.5 ಲಕ್ಷ ವಂಚನೆ!

ಮೈಸೂರು: ಕಡಿಮೆ ಖರ್ಚಿನಲ್ಲಿ ಉತ್ತರಪ್ರದೇಶ ಹಾಗೂ ದೆಹಲಿ ಪ್ರವಾಸ ಮಾಡಿಸುವುದಾಗಿ ನಂಬಿಸಿ ಮೈಸೂರಿನ ಇಬ್ಬರು ಮಹಿಳೆಯರಿಗೆ ಒಟ್ಟು 18.50 ಲಕ್ಷ ವಂಚಿಸಿದ್ದಾರೆ.ಈ ಸಂಬಂಧ ಇಬ್ಬರು ಮಹಿಳೆಯರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಿದ್ದಾರ್ಥನಗರದ ಸುವರ್ಣ ಎಂಬುವರು 5.96 ಲಕ್ಷ ಹಾಗೂ ಗಾಯಿತ್ರಿಪುರಂ ನ ಪಂಕಜ ಎಂಬುವರು 12.61 ಲಕ್ಷ ಹಣ ಕಳೆದುಕೊಂಡಿದ್ದಾರೆ.ಆನ್ ಲೈನ್ ನಲ್ಲಿ ಕಡಿಮೆ ಖರ್ಚಿನಲ್ಲಿ ದೆಹಲಿ ಹಾಗೂ ಉತ್ತರಪ್ರದೇಶ ಪ್ರವಾಸ ಮಾಡಿಸುವುದಾಗಿ ಜಾಹಿರಾತು ಪ್ರಕಟವಾಗಿದೆ

ಆಸಕ್ತಿಯಿಂದ ಮೊಬೈಲ್ ನಂಬರ್ ಗೆ ಸಂಪರ್ಕಿಸಿದಾಗ ಕೆಲವು ಪ್ಯಾಕೇಜ್ ಗಳ ಮಾಹಿತಿ ನೀಡಿ ವಿವಿದ ಹಂತಗಳಲ್ಲಿ ಹಣ ಹಾಕಿಸಿಕೊಂಡಿದ್ದಾರೆ.ತಿಂಗಳುಗಳೇ ಉರುಳಿದರೂ ಪ್ರವಾಸಕ್ಕೆ ಕರೆದೊಯ್ದಿಲ್ಲ.ನಂತರ ವಂಚಕರು ಸಂಪರ್ಕಕ್ಕೆ ಸಿಕ್ಕಿಲ್ಲ. ಮೋಸ ಹೋದ ಮಹಿಳೆಯರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ
