Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರಿನಲ್ಲಿ ‘ಟ್ರಾಫಿಕ್ ನಿರ್ವಹಣೆ ತಂತ್ರಜ್ಞಾನ’: ವಾಹನ ಚಲಿಸಿದಂತೆ ಮುಂದಿನ ಸಿಗ್ನಲ್‌ ಗ್ರೀನ್ ಆಗುವ ವ್ಯವಸ್ಥೆಗೆ ವ್ಯಾಪಕ ಮೆಚ್ಚುಗೆ

Spread the love

ಬೆಂಗಳೂರು ಟ್ರಾಫಿಕ್ ಪೊಲೀಸರು ಜೆಸಿ ರಸ್ತೆಯಲ್ಲಿ ಸಿಂಕ್ರೊನೈಸ್ಡ್ ಸಿಗ್ನಲ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಇದು ಪೀಕ್ ಅವರ್-ಅಲ್ಲದ ವೇಳೆಯಲ್ಲಿ ಅನಗತ್ಯ ನಿಲುಗಡೆಗಳನ್ನು ತಪ್ಪಿಸಿ, ಟೌನ್‌ಹಾಲ್‌ನಿಂದ ಪೊಲೀಸ್ ಕಾರ್ನರ್ ಜಂಕ್ಷನ್‌ವರೆಗೆ ಸುಗಮ ಪ್ರಯಾಣವನ್ನು ಖಚಿತಪಡಿಸುತ್ತದೆ. ಈ ಹೊಸ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಸಾಮಾನ್ಯವಾಗಿ ಬೆಂಗಳೂರಿನ ಟ್ರಾಫಿಕ್ (Bengaluru Traffic) ಸಿಗ್ನಲ್​ಗಳಲ್ಲಿ ಸ್ವಯಂಚಾಲಿತ ವ್ಯವಸ್ಥೆ ಚಾಲೂ ಮಾಡಿರುತ್ತಾರೆ. ಇನ್ನು ಕೆಲವೆಡೆ ಪೊಲೀಸರೇ ಮ್ಯಾನುವಲ್ ಆಗಿ ಸಿಗ್ನಲ್ ನಿರ್ವಹಿಸುತ್ತಾರೆ. ಆದರೆ, ಈ ಸ್ವಯಂಚಾಲಿತ ವ್ಯವಸ್ಥೆ ವೇಳೆ ಪೀಕ್ ಅವರ್ ಅಲ್ಲದಿದ್ದಾಗಲೂ, ಇನ್ನೊಂದು ಬದಿಯಿಂದ ಸಂಚಾರ ದಟ್ಟಣೆ ಇಲ್ಲದಿರುವಾಗಲೂ ಸಿಗ್ನಲ್​​ನಲ್ಲಿ ವಿನಾ ಕಾರಣ ಕಾಯುತ್ತಲೇ ಇರಬೇಕಾಗುತ್ತದೆ. ಒಂದು ಸಿಗ್ನಲ್ ಗ್ರೀನ್ ಬಂತೆಂದು ಮುಂದೆ ಹೋಗುತ್ತಿದ್ದಂತೆಯೇ ಅಲ್ಲಿ ರೆಡ್ ಸಿಗ್ನಲ್ ಕಾಣಿಸುತ್ತಿರುತ್ತದೆ. ಹೀಗೆ ವಿನಾ ಕಾರಣ ಸಿಗ್ನಲ್​ನಲ್ಲಿ ಕಾಯಬೇಕಾಗುತ್ತದೆ. ಆದರೆ, ಈ ಪರಿಸ್ಥಿತಿ ಇನ್ನು ಇಲ್ಲವಾಗಲಿದೆ. ಬೆಂಗಳೂರಿನ (Bengaluru) ಟೌನ್​ಹಾಲ್ ಜಂಕ್ಷನ್​ನಿಂದ ಎನ್​ಆರ್​ ಜಂಕ್ಷನ್, ಪಿಎಸ್​​ ಜಂಕ್ಷನ್, ಪೊಲೀಸ್ ಕಾರ್ನರ್​ ವರೆಗೆ ಜೆಸಿ ರಸ್ತೆಯಲ್ಲಿ ಸಿಂಕ್ರೋನೈಸ್ಡ್ ಸಿಗ್ನಲ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಪಶ್ಚಿಮ ವಲಯ ಡಿಸಿಪಿ ಅನೂಪ್ ಎ ಶೆಟ್ಟಿ ಎಕ್ಸ್ ಮೂಲಕ ಮಾಹಿತಿ ನೀಡಿದ್ದಾರೆ.

ನಾವು ಟೌನ್‌ಹಾಲ್ ಜಂಕ್ಷನ್‌ನ ಜೆಸಿ ರಸ್ತೆ ಬದಿಯಿಂದ ಎನ್ಆರ್ ಜಂಕ್ಷನ್ – ಪಿಎಸ್ ಜಂಕ್ಷನ್ – ಪೊಲೀಸ್ ಕಾರ್ನರ್ ಜಂಕ್ಷನ್ ವರೆಗೆ ಸಿಗ್ನಲ್‌ಗಳನ್ನು ಸಿಂಕ್ರೊನೈಸ್ ಮಾಡಿದ್ದೇವೆ. ಸುಗಮ ಪ್ರಯಾಣವನ್ನು ಆನಂದಿಸಿ ಮತ್ತು ಜನದಟ್ಟಣೆ ಇಲ್ಲದ ಸಮಯದಲ್ಲಿ ಎಲ್ಲಾ ಸಂದರ್ಭಗಳಲ್ಲಿ ಗ್ರೀನ್​ ಸಿಗ್ನಲ್ ಇರಲಿದೆ ಎಂದು ಡಿಸಿಪಿ ಅನೂಪ್ ಎ ಶೆಟ್ಟಿ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.

ಟ್ರಾಫಿಕ್ ಸಿಗ್ನಲ್‌ ಸಿಂಕ್ರೊನೈಸೇಷನ್ ಎಂದರೇನು?
ಟ್ರಾಫಿಕ್ ಸಿಗ್ನಲ್‌ ಸಿಂಕ್ರೊನೈಸೇಷನ್ ಎಂದರೆ ಸುಧಾರಿತ ಸಂಚಾರ ನಿರ್ವಹಣೆ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದಾಗಿದೆ. ಈ ವ್ಯವಸ್ಥೆಯಲ್ಲಿ ವಾಹನಗಳ ಸಂಚಾರದ ಟಟ್ಟಣೆಗೆ ಅನುಗುಣವಾಗಿ ಗ್ರೀನ್ ಸಿಗ್ನಲ್​ಗಳು ಕಾಣಿಸಿಕೊಳ್ಳುವಂತೆ ಮಾಡಲಾಗುತ್ತದೆ. ಒಂದು ಕಡೆ ಗ್ರೀನ್ ಸಿಗ್ನಲ್ ಬಂದರೆ ಅಲ್ಲಿಂದ ವಾಹನಗಳು ಮುಂದೆ ಚಲಿಸಿದಂತೆ ಮುಂದಿನ ಸಿಗ್ನಲ್​​ನಲ್ಲಿಯೂ ಗ್ರೀನ್ ಸಿಗ್ನಲ್ ಕಾಣಿಸಿಕೊಳ್ಳಲಿದೆ. ಇದರೊಂದಿಗೆ, ನಾನ್ ಪೀಕ್ ಅವರ್​​ನಲ್ಲಿ ಸಿಗಮ ಸಂಚಾರ ಸಾಧ್ಯವಾಗಲಿದೆ. ಅದೇ ರೀತಿ, ವಾಹ ಸಂಚಾರ ವಿರಳವಾಗಿದ್ದರೂ ನಿರ್ದಿಷ್ಟ ಸಮಯ ಸಿಗ್ನಲ್​ನಲ್ಲಿ ಕಾಯುವುದು ತಪ್ಪಲಿದೆ.


Spread the love
Share:

administrator

Leave a Reply

Your email address will not be published. Required fields are marked *