450 ಕಿ.ಮೀ. ಪ್ರಯಾಣಿಸಿ ಹೊಸ ಆವಾಸಸ್ಥಾನ ಕಂಡುಕೊಂಡ ಹುಲಿ ‘ರಾಮಲಿಂಗ’

ಮುಂಬಯಿ: 450 ಕಿ.ಮೀ. ಪ್ರಯಾಣಿ ಸಿದ ರಾಮಲಿಂಗ ಹೆಸರಿನ ಹುಲಿ ಹೊಸ ಆವಾಸ ಸ್ಥಳ ಕಂಡುಕೊಂಡಿದೆ. ಮಹಾರಾಷ್ಟ್ರದ ವಿದರ್ಭದ ಟಿಪೇಶ್ವರ ಅಭಯಾರಣ್ಯದಿಂದ ಸುದೀರ್ಘ ಪ್ರಯಾಣ ಪ್ರಾರಂಭಿಸಿ, ಮರಾಠಾವಾಡದ ಧಾರಾಶಿವದ ಯೆಡ್ಶಿ ರಾಮ್‌ಲಿಂಗ ಅಭಯಾರಣ್ಯಕ್ಕೆ ಬಂದು ನೆಲೆ ಕಂಡಿದೆ.

ಈ ಮೂಲಕ ದಶಕಗಳ ಬಳಿಕ ಧಾರಾಶಿವದಲ್ಲಿ ಹುಲಿ ನೆಲೆಸಿದಂತಾಗಿದೆ.
ಯೆಡಿÏ ಅಭಯಾರಣ್ಯದಲ್ಲಿನ ಕೆಮರಾ ಟ್ರಾಪ್ ಹಾಗೂ ಟಿಪೇಶ್ವರ ಅಭಯಾರಣ್ಯದ ಕೆಮರಾ ಟ್ರಾಪ್‌ನ ಚಿತ್ರಗಳಲ್ಲಿನ ಸಾಮ್ಯತೆ ಗುರುತಿಸಿ, ಈ ಪ್ರಯಾಣ ಖಚಿತಪಡಿಸಲಾಗಿದೆ. 3 ವರ್ಷದ ರಾಮಲಿಂಗ, ತೆಲಂಗಾಣದ ಆದಿಲಾಬಾದ್, ಮಹಾರಾಷ್ಟ್ರದ ನಾಂದೇಡ್ ಮತ್ತು ಅಹಮದ್‌ಪುರ ಮುಖಾಂತರ ಯೆಡ್ಶಿಗೆ ಆಗಮಿಸಿದೆ.
ಯೆಡ್ಶಿ ಚಿಕ್ಕ ಅಭಯಾರಣ್ಯವಾಗಿದ್ದು, 22.5ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. ಹೀಗಾಗಿ ಇದರ ವ್ಯಾಪ್ತಿ ಮೀರಿಯೂ ಹುಲಿ ಸಂಚರಿಸುತ್ತಿದೆ. ಆದರೆ ಈವರೆಗೆ ಯಾವುದೇ ಮನುಷ್ಯರ ಮೇಲೆ ದಾಳಿ ಮಾಡಿಲ್ಲ. ಪ್ರಾರಂಭದಲ್ಲಿ ಆಕಳುಗಳನ್ನು ಬೇಟೆಯಾಡಿದರೂ, ಕಾಡಿನಲ್ಲೇ ಬೇಟೆ ಪ್ರಾಣಿಗಳ ಸಂಖ್ಯೆ ಹೆಚ್ಚಿರುವುದರಿಂದ ರಾಮಲಿಂಗ ತನ್ನ ಬೇಟೆಯನ್ನು ಕಾಡಿನತ್ತ ಮಾತ್ರವೇ ಬದಲಿಸಿದೆ ಎನ್ನಲಾಗಿದೆ.