Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಮೆರಿಕ ವಶಪಡಿಸಿದ ಹಡಗಿನಲ್ಲಿ ಮೂವರು ಭಾರತೀಯರು

Spread the love

ಮಾಸ್ಕೊ: ಅಮೆರಿಕ ಬುಧವಾರ ವಶಪಡಿಸಿಕೊಂಡಿರುವ ರಷ್ಯಾ ತೈಲ ಟ್ಯಾಂಕರ್ ನಲ್ಲಿ ಮೂವರು ಭಾರತೀಯರು ಸೇರಿದಂತೆ ಒಟ್ಟು 28 ಮಂದಿ ಸಿಬ್ಬಂದಿ ಇದ್ದರು ಎಂದು ರಷ್ಯಾ ಅಧಿಕೃತವಾಗಿ ಪ್ರಕಟಿಸಿದೆ.

ರಷ್ಯಾ ಧ್ವಜವಿದ್ದ ಮರಿನೆರಾ ತೈಲ ಟ್ಯಾಂಕರನ್ನು ಕೆರೀಬಿಯನ್ ಸಮುದ್ರದಿಂದ ಹಿಂಬಾಲಿಸುತ್ತಾ ಬಂದ ಅಮೆರಿಕದ ನೌಕಾಪಡೆ ಉತ್ತರ ಅಟ್ಲಾಂಟಿಕ್ ನಲ್ಲಿ ವಶಪಡಿಸಿಕೊಂಡಿತ್ತು ಎಂದು ರಷ್ಯಾದ ಸಾರಿಗೆ ಸಚಿವಾಲಯ ಹೇಳಿದೆ. ವೆನೆಝುವೆಲಾ ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ಈ ಟ್ಯಾಂಕರ್ ವಶಪಡಿಸಿಕೊಳ್ಳಲಾಗಿದೆ ಎಂದು ಅಮೆರಿಕನ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬೆಲ್ಲಾ 1′ ಹೆಸರಿನ ಈ ತೈಲ ಸಾಗಾಣಿಕೆ ಹಡಗನ್ನು ಖಾಸಗಿ ವ್ಯಾಪಾರಿಯೊಬ್ಬರು ಬಾಡಿಗೆಗೆ ಪಡೆದಿದ್ದು, ಗಯಾನಾ ಧ್ವಜದಡಿ ಕಾರ್ಯಾಚರಣೆ ಮಾಡುತ್ತಿತ್ತು. ಇದರಲ್ಲಿ 28 ಮಂದಿ ಸಿಬ್ಬಂದಿ ಇದ್ದರು; ಅವರಲ್ಲಿ ಜಾರ್ಜಿಯಾದ ಆರು ಮಂದಿ, ಉಕ್ರೇನ್ ನ 17 ಮಂದಿ, ಭಾರತದ ಮೂವರು ಹಾಗೂ ಇಬ್ಬರು ರಷ್ಯನ್ ಪ್ರಜೆಗಳು ಸೇರಿದ್ದಾರೆ ಎಂದು ಸಾರಿಗೆ ಇಲಾಖೆ ವಿವರಿಸಿದೆ.

ನಿರ್ಬಂಧಿತ ಟ್ಯಾಂಕರ್ ಗಳ ನಿಷೇಧವನ್ನು ಉಲ್ಲಂಘಿಸಿದ ಆರೋಪದಲ್ಲಿ ಮತ್ತು ಅಮೆರಿಕದ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಅದನ್ನು ಏರುವ ಪ್ರಯತ್ನಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಹಡಗು ವಶಪಡಿಸಿಕೊಳ್ಳಲಾಗಿದೆ. ಅಮೆರಿಕದ ಸೇನೆ ಹಾಗೂ ಕರಾವಳಿ ಕಾವಲು ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಟ್ಯಾಂಕರ್ ವಶಪಡಿಸಿಕೊಂಡಿದೆ ಎಂದು ಇಬ್ಬರು ಅಮೆರಿಕನ್ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಅಮೆರಿಕನ್ ಪಡೆಗಳು ರಷ್ಯಾದ ಹಡಗು ವಶಪಡಿಸಿಕೊಂಡಿರುವುದು ಇದೇ ಮೊದಲು. ವೆನೆಝುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಕಳೆದ ಶನಿವಾರ ವಶಕ್ಕೆ ಪಡೆದ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿದೆ.


Spread the love
Share:

administrator

Leave a Reply

Your email address will not be published. Required fields are marked *