ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ಸಂಚು ವಿಫಲ; ರಸ್ತೆಬದಿಯ ಐಇಡಿ ನಿಷ್ಕ್ರಿಯಗೊಳಿಸಿದ ಸೇನೆ.

ಶ್ರೀನಗರ: ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟಿಸಲು ಮುಂದಾಗಿದ್ದ ಭಯೋತ್ಪಾದಕರ ದಾಳಿಯನ್ನು ಸೇನೆ ತಡೆದಿದೆ. ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿ ಸೋಮವಾರ ಭದ್ರತಾ ಪಡೆಗಳು ಐಇಡಿಯನ್ನು ಸಮಯಕ್ಕೆ ಸರಿಯಾಗಿ ನಿಷ್ಕ್ರಿಯಗೊಳಿಸುವ ಮೂಲಕ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದರು.

ಶೋಪಿಯಾನ್‌ನ ಹಫ್ ಪ್ರದೇಶದ ರಸ್ತೆಬದಿಯಲ್ಲಿ ಭಯೋತ್ಪಾದಕರು ಐಇಡಿಯನ್ನು ಇಟ್ಟಿದ್ದರು.ಭದ್ರತಾ ಪಡೆಗಳ ವಾಹನಗಳು ಈ ರಸ್ತೆಯಲ್ಲಿ ಆಗಾಗ ಸಂಚರಿಸುತ್ತವೆ. ಐಇಡಿ ಪತ್ತೆಯಾದ ನಂತರ, ಭದ್ರತಾ ಪಡೆಗಳು ರಸ್ತೆಯನ್ನು ಸಂಚಾರಕ್ಕೆ ನಿರ್ಬಂಧಿಸಿ ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ಕರೆಸಿದರು. ತಂಡವು ನಿಯಂತ್ರಿತ ಸ್ಫೋಟದ ಮೂಲಕ ಐಇಡಿಯನ್ನು ನಾಶಪಡಿಸಿತು.