Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಣದ ವಾಗ್ವಾದದ ಹಿನ್ನೆಲೆಯಲ್ಲಿ ಮಹಿಳೆಯನ್ನು ಕೊಲೆ ಮಾಡಿ ಚರಂಡಿಗೆ ಎಸೆದ ಟೈಲರ್

Spread the love

ನವದೆಹಲಿ: ಹಣದ ವಿಚಾರದಲ್ಲಿ ಉಂಟಾದ ಜಗಳದಿಂದಾಗಿ ದೆಹಲಿಯಲ್ಲಿ  ಮಹಿಳೆಯ ಕತ್ತು ಹಿಸುಕಿ ಆಕೆಯ ಮೃತದೇಹವನ್ನು ಚರಂಡಿಗೆ ಎಸೆದ ಘಟನೆ ನಡೆದಿದೆ. ಈ ಕೊಲೆ ಮಾಡಿದ 35 ವರ್ಷದ ಟೈಲರ್ ಅನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಂದಾಪುರ ನಿವಾಸಿಯಾಗಿರುವ ಮೃತ ಮಹಿಳೆ ಆಗಸ್ಟ್ 21ರಂದು ನಾಪತ್ತೆಯಾಗಿದ್ದಾರೆ ಎಂದು ಆಕೆಯ ತಾಯಿ ದೂರು ನೀಡಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆ ಮಹಿಳೆಯ ಕೊನೆಯ ಚಲನವಲನಗಳನ್ನು ಪತ್ತೆಹಚ್ಚಲು ಪ್ರಯತ್ನಿಸಿದ್ದಾರೆ.

ಆಗಸ್ಟ್ 23ರಂದು ಮಧ್ಯಾಹ್ನ 2.54ರ ಸುಮಾರಿಗೆ ಪೊಲೀಸ್ ಠಾಣೆಗೆ ಯಾರೋ ಮೃತದೇಹವನ್ನು ಕಂಡವರು ಫೋನ್ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಆ ಮೃತದೇಹವನ್ನು ಪತ್ತೆಹಚ್ಚಿದ ಪೊಲೀಸರು ತನಿಖೆ ನಡೆಸಿದ್ದಾರೆ.

ಪ್ರಾಥಮಿಕ ತನಿಖೆಯ ನಂತರ ಆ ಮೃತದೇಹ ಕಾಣೆಯಾದ ಮಹಿಳೆಯದ್ದಾಗಿದ್ದು, ಆಗಸ್ಟ್ 21ರಂದು ಆಕೆಯ ತಾಯಿ ತನ್ನ ಮಗಳು ಕಾಣೆಯಾಗಿರುವುದಾಗಿ ದೂರು ನೀಡಿದ್ದರು.

ತನಿಖಾಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶಿಲಿಸಿ, ತಾಂತ್ರಿಕ ಕಣ್ಗಾವಲು ಬಳಸಿ ಆ ಮಹಿಳೆಯ ಕೊನೆಯ ಚಲನವಲನಗಳನ್ನು ಪತ್ತೆಹಚ್ಚಿದರು. ಆಗಸ್ಟ್ 21ರಂದು ಕೊನೆಯ ಬಾರಿಗೆ ಆಕೆಯ ಮನೆಗೆ ಟೈಲರ್ ಬಂದಿದ್ದ. ಆತ ಉತ್ತರ ಪ್ರದೇಶದ ಹಾರ್ಡೋಯ್ ಮೂಲದ ಸಲೀಮ್ ಎಂದು ಗುರುತಿಸಲಾಗಿದೆ. ಆತನ ವಿಚಾರಣೆ ನಡೆಸಿದಾಗ ಕೊಲೆಯ ಸಂಗತಿ ಬೆಳಕಿಗೆ ಬಂದಿದೆ.

“ಬಳಿಕ, ಆ ಆರೋಪಿಯು ಅಡಗಿಸಿಟ್ಟ ಮಹಿಳೆಯ ಶವದೊಂದಿಗೆ ಆ ಕಟ್ಟಡದಿಂದ ಹೊರಬರುತ್ತಿರುವುದು ಕಂಡುಬಂದಿದೆ” ಎಂದು ಪೊಲೀಸರು ಹೇಳಿದ್ದಾರೆ.

ಸಲೀಮ್ ಮತ್ತು ಆ ಮಹಿಳೆ ಪರಸ್ಪರ ಪರಿಚಿತರಾಗಿದ್ದರು. ಅವರಿಬ್ಬರೂ ಸಾಕಷ್ಟು ತಿಂಗಳಿಂದ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆ ಮಹಿಳೆ ತನಗೆ ನೀಡಬೇಕಿದ್ದ ಹಣವನ್ನು ವಾಪಾಸ್ ಕೊಡುವಂತೆ ಕೇಳುತ್ತಿದ್ದರು. ಇದು ಅವರಿಬ್ಬರ ಮಧ್ಯೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು ಎನ್ನಲಾಗಿದೆ.

“ಕೋಪದ ಭರದಲ್ಲಿ ಆ ಟೈಲರ್ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಬೈಕ್​ನಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋಗಿ ಚರಂಡಿಗೆ ಎಸೆದಿದ್ದಾನೆ. ಆದರೆ ಅದನ್ನು ಕೆಲವರು ನೋಡಿದ್ದರಿಂದ ಹೆಸರಿದ ಸಲೀಮ್ ಆ ಸ್ಥಳದಿಂದ ಪರಾರಿಯಾಗಿದ್ದಾನೆ” ಎಂದು ಪೊಲೀಸರು ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *