ದೇಶಾದ್ಯಂತ ದಿಢೀರ್ ಕೈ ಕೊಟ್ಟ UPI: ಕೋಟ್ಯಾಂತರ ಬಳಕೆದಾರರ ಪರದಾಟ

ದೇಶಾದ್ಯಂತ ಏಕೀಕೃತ ಪಾವತಿ ಇಂಟರ್ಫೇಸ್ (UPI) ಸೇವೆಯು ಬುಧವಾರ(ಮಾ.26) ಸುಮಾರು ಎರಡೂವರೆ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಈ ಸಮಯದಲ್ಲಿ, ಜನರು ಗೂಗಲ್ ಪೇ, ಫೋನ್‌ಪೇ ಮತ್ತು ಪೇಟಿಎಂ ನಂತಹ ಅಪ್ಲಿಕೇಶನ್‌ಗಳ ಮೂಲಕ ಹಣವನ್ನು ವರ್ಗಾಯಿಸುವಲ್ಲಿ ಸಮಸ್ಯೆಗಳನ್ನು ಎದುರಿಸಿದರು. ಇದಲ್ಲದೆ, 10 ಕ್ಕೂ ಹೆಚ್ಚು ಬ್ಯಾಂಕ್‌ಗಳ ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ ಸೇವೆಗಳ ಮೇಲೂ ಪರಿಣಾಮ ಬೀರಿತು.
ಬುಧವಾರ ಸಂಜೆ ಇದ್ದಕ್ಕಿದ್ದಂತೆ ಬಳಕೆದಾರರು ಅಪ್ಲಿಕೇಶನ್‌ಗೆ ಲಾಗಿನ್ ಆಗಲು ಮತ್ತು ನೆಟ್ ಬ್ಯಾಂಕಿಂಗ್ ಅನ್ನು ಸಹ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಸಂಜೆ ವೇಳೆ ದೇಶಾದ್ಯಂತ ಹಲವು ಚಿಕ್ಕ ಮಳಿಗೆಯಿಂದ ಹಿಡಿದು ಶಾಪಿಂಗ್ ಮಾಲ್‌ಗಳವರೆಗೆ ಯುಪಿಐ ಬಳಕೆಯಲ್ಲಿ ವ್ಯತ್ಯಯವಾಗಿ ಜನರು ಪರದಾಡಬೇಕಾಯಿತು.
ಡೌನ್‌ಡೆಕ್ಟರ್ ಪ್ರಕಾರ, ಬುಧವಾರ ಸಂಜೆ 7 ರಿಂದ 9:30 ರ ನಡುವೆ ಯುಪಿಐ ಮೂಲಕ ಪಾವತಿಗಳನ್ನು ಮಾಡುವಲ್ಲಿ ಬಳಕೆದಾರರು ಗರಿಷ್ಠ ಸಮಸ್ಯೆಗಳನ್ನು ಎದುರಿಸಿದರು. ಈ ಅವಧಿಯಲ್ಲಿ 23,000 ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಆದ್ರೆ ಈ ತಾಂತ್ರಿಕ ದೋಷಕ್ಕೆ ಕಾರಣ ತಿಳಿದುಬಂದಿಲ್ಲ.

ಅಡಚಣೆಗೆ ವಿಷಾದ ವ್ಯಕ್ತಪಡಿಸಿದ NPCI, ಸಮಸ್ಯೆಗೆ ಪರಿಹಾರ!
‘ಬಳಕೆದಾರರು ತಾತ್ಕಾಲಿಕ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದರು, ಇದರಿಂದಾಗಿ UPI ನಲ್ಲಿ ಭಾಗಶಃ ಅಡಚಣೆ ಉಂಟಾಯಿತು’ ಎಂದು ರಾಷ್ಟ್ರೀಯ ಪಾವತಿ ನಿಗಮ (NPCI) ತಿಳಿಸಿದೆ. ಈಗ ಈ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ವ್ಯವಸ್ಥೆಯು ಸ್ಥಿರವಾಗಿದೆ’ ಎಂದು ಎನ್‌ಪಿಸಿಐ ತಿಳಿಸಿದೆ.
“ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಮಧ್ಯಂತರ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿತ್ತು, ಇದರಿಂದಾಗಿ UPI ಭಾಗಶಃ ಕುಸಿತ ಕಂಡಿತ್ತು. ಅದನ್ನು ಈಗ ಪರಿಹರಿಸಲಾಗಿದೆ ಮತ್ತು ವ್ಯವಸ್ಥೆಯು ಸ್ಥಿರವಾಗಿದೆ. ಅನಾನುಕೂಲತೆಗೆ ವಿಷಾದಿಸುತ್ತೇವೆ” ಎಂದು ಎನ್‌ಪಿಸಿಐ ಸಂಸ್ಥೆ X (ಟ್ವಿಟರ್) ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.
10 ಕ್ಕೂ ಹೆಚ್ಚು ಬ್ಯಾಂಕ್‌ಗಳ ಪಾವತಿ ಅಪ್ಲಿಕೇಶನ್‌ಗಳ ಮೇಲೆ ಪರಿಣಾಮ ಬೀರಿದೆ.
ಪಾವತಿ ಅಪ್ಲಿಕೇಶನ್‌ಗಳಲ್ಲದೆ, ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಸೇರಿದಂತೆ 10 ಕ್ಕೂ ಹೆಚ್ಚು ಬ್ಯಾಂಕ್‌ಗಳ ಸೇವೆಗಳ ಮೇಲೆ ಪರಿಣಾಮ ಬೀರಿತು. ಸುಮಾರು 2 ಗಂಟೆಗಳ ನಂತರ ಫೋನ್‌ಪೇ ಸೇವೆಗಳು ಪುನರಾರಂಭಗೊಂಡವು. ಆದಾಗ್ಯೂ, ಕೆಲವು ಬಳಕೆದಾರರು ನಂತರವೂ ಸಮಸ್ಯೆಗಳನ್ನು ಎದುರಿಸುತ್ತಿದ್ದರು.
82% ಜನರು ಪಾವತಿಗಳನ್ನು ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ
ಡೌನ್‌ಡೆಕ್ಟರ್ ಪ್ರಕಾರ, ಸುಮಾರು 82% ಜನರು ಪಾವತಿ ಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾರೆ. ಶೇ. 14 ರಷ್ಟು ಜನರು ಹಣ ವರ್ಗಾವಣೆಯಲ್ಲಿ ಸಮಸ್ಯೆಗಳನ್ನು ಎದುರಿಸಿದರೆ, ಶೇ. 5 ರಷ್ಟು ಜನರು ಅಪ್ಲಿಕೇಶನ್ ಪ್ರವೇಶಿಸುವಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾರೆ.
ಭಾರತದಲ್ಲಿ, RTGS ಮತ್ತು NEFT ಪಾವತಿ ವ್ಯವಸ್ಥೆಗಳ ಕಾರ್ಯಾಚರಣೆಯು RBI ಬಳಿಯಿದೆ. IMPS, RuPay, UPI ನಂತಹ ವ್ಯವಸ್ಥೆಗಳನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ನಿರ್ವಹಿಸುತ್ತದೆ. ಜನವರಿ 1, 2020 ರಿಂದ ಯುಪಿಐ ವಹಿವಾಟುಗಳಿಗೆ ಶೂನ್ಯ ಶುಲ್ಕದ ಚೌಕಟ್ಟನ್ನು ಸರ್ಕಾರ ಕಡ್ಡಾಯಗೊಳಿಸಿತ್ತು.
