Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆರು ಪುಟಗಳ ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹ*ತ್ಯೆ: ಡೇಟಿಂಗ್ ಆ್ಯಪ್ ಪರಿಚಯ ತಂದಿಟ್ಟಿತು ಸಂಕಷ್ಟ!

Spread the love

ಮುಂಬೈ: ಗೆಳೆಯನ ಕಿರುಕುಳದಿಂದ ಬೇಸತ್ತು 24 ವರ್ಷದ ಸ್ನಾತಕೋತ್ತರ ದಂತ ವೈದ್ಯಕೀಯ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide)ಗೆ ಶರಣಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ತನ್ನ ಆರು ಪುಟಗಳ ಆತ್ಮಹತ್ಯೆ ಪತ್ರದಲ್ಲಿ ಗೆಳೆಯ ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾಳೆ. ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ.
ಮೃತಳನ್ನು ಮಾಸ್ಟರ್ ಆಫ್ ಡೆಂಟಲ್ ಸರ್ಜರಿ ವಿದ್ಯಾರ್ಥಿನಿ ಸ್ತುತಿ ಸೋನಾವಾನೆ ಎಂದು ಗುರುತಿಸಲಾಗಿದೆ. ಆಂಟೋಪ್ ಹಿಲ್​​ನಲ್ಲಿರುವ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ವಿಮಾ ಏಜೆಂಟ್ ಆಗಿರುವ ಫಜಲ್ ಮೊಹಮ್ಮದ್ ಖಾನ್ ಹೆಸರು ಕೇಳಿಬಂದಿದ್ದು, ಆತನನ್ನು ಬಂಧಿಸಲಾಗಿದೆ.
ಮುಂಬೈನ ಆಂಟೋಪ್ ಹಿಲ್ ನೆರೆಹೊರೆಯಲ್ಲಿ ಸ್ತುತಿ ತನ್ನ ಪೋಷಕರು ಮತ್ತು ಸಹೋದರಿಯೊಂದಿಗೆ ವಾಸವಾಗಿದ್ದಳು. ನಿನ್ನೆ ಬೆಳಗ್ಗೆ 11 ಗಂಟೆಯವರೆಗೆ ಅವಳು ತನ್ನ ಕೋಣೆಯಿಂದ ಹೊರಬರದಿದ್ದಾಗ, ಅವಳ ಪೋಷಕರು ಅವಳಿಗೆ ಕರೆ ಮಾಡಿದ್ದಾರೆ, ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅವರು ಅವಳ ಕೋಣೆಯ ಬಾಗಿಲು ಒಡೆದು ನೋಡಿದಾಗ, ಆಕೆ ಸೀಲಿಂಗ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ.
ಅವಳನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವಳು ಸತ್ತಿದ್ದಾಳೆಂದು ಘೋಷಿಸಿದ್ದಾರೆ. ಯುವತಿ ತನ್ನ ಕೋಣೆಯಲ್ಲಿ ಆರು ಪುಟಗಳ ‘ಆತ್ಮಹತ್ಯೆ ಪತ್ರ’ವನ್ನು ಬರೆದಿಟ್ಟಿದ್ದಾಳೆ. ಅದರಲ್ಲಿ ಅವಳು ಖಾನ್ ಹೆಸರಿಸಿದ್ದಾಳೆ ಮತ್ತು ಅವನು ನಿರಂತರವಾಗಿ ತನಗೆ ಕಿರುಕುಳ ನೀಡುತ್ತಿದ್ದ ಎಂದು ಬರೆದಿದ್ದಾಳೆ ಎಂದು ಆಂಟೋಪ್ ಹಿಲ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಯುವತಿ ಪೋಷಕರು ನೀಡಿರುವ ದೂರಿನ ಮೇಲೆ ಆರೋಪಿಯನ್ನು ಭಾರತೀಯ ದಂಡ ಸಂಹಿತೆ ಸೆಕ್ಷನ್ 108 ಸೇರಿದಂತೆ ಸಂಬಂಧಿತ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ಸಮಯದಲ್ಲಿ ಮೃತ ಯುವತಿ ಹಾಗೂ ಆರೋಪಿ ಡೇಟಿಂಗ್ ಆ್ಯಪ್ ಮೂಲಕ ಪರಿಷಯವಾಗಿದ್ದರು, ಕಳೆದ ಒಂದು ವರ್ಷದಿಂದ ಸಂಬಂಧದಲ್ಲಿದ್ದರು ಎಂಬುದು ತಿಳಿದುಬಂದಿದೆ.


Spread the love
Share:

administrator

Leave a Reply

Your email address will not be published. Required fields are marked *