ಭಾರತ ಮತ್ತು ಚೀನಾ ನಡುವೆ ರಾಜತಾಂತ್ರಿಕ ಸಂಬಂಧ ವೃದ್ಧಿ: ದೆಹಲಿ-ಶಾಂಘೈ ವಿಮಾನಯಾನ

ಹೊಸದಿಲ್ಲಿ: 2020ರ ಗಲ್ವಾನ್ ಗಡಿ ಸಂಘರ್ಷ ಮತ್ತು ಕೋವಿಡ್-19 ನಂತರ ಭಾರತ ಮತ್ತು ಚೀನಾ ನಡುವಿನ ನೇರ ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿತ್ತು.ಆದರೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ಸುಂಕ ನೀತಿಯಿಂದಾಗಿ ಚೀನಾ ಹಾಗೂ ಅಮೆರಿಕಾ ನಡುವೆ ರಾಜತಾಂತ್ರಿಕ ಸಂಬಂಧ ಮತ್ತೆ ಬಲಗೊಳ್ಳುತ್ತಿದೆ.

ಇದರ ಫಲವಾಗಿ ರದ್ದಾಗಿದ್ದ ವಿಮಾನ ಸೇವೆಗಳು ಪುನರಾಂಭಗೊಳ್ಳಲು ಅ.26ರಿಂದ ಭಾರತ-ಚೀನಾ ನಡುವೆ ಇಂಡಿಗೋ ವಿಮಾನಯಾನದಿಂದ ಕೋಲ್ಕತ್ತಾ ಮತ್ತು ಗುವಾಂಗ್ಝೌಗೆ ನೇರ ವಿಮಾನ ಸಂಚಾರ ಆರಂಭಗೊಳ್ಳಲಿದೆ. ಇನ್ನೂ ಇದರ ಜೊತೆಗೆ ನ.9ರಿಂದ ಚೀನಾ ಈಸ್ಟರ್ನ್ ಏರ್ಲೈನ್ಸ್ ನವೆಂಬರ್ 9 ರಿಂದ ಶಾಂಘೈ ಮತ್ತು ದೆಹಲಿಗೆ ನೇರ ವಿಮಾನ ಪುನರಾರಂಭಗೊಳಿಸಲಿವೆ.
ನವೆಂಬರ್ 9ರಿಂದ ಶಾಂಘೈ-ದೆಹಲಿ ನೇರ ವಿಮಾನ ಸೇವೆ
ಇನ್ನೂ ಈ ಕುರಿತು ಮಾಹಿತಿ ನೀಡಿರುವ ಚೀನಾ ಈಸ್ಟರ್ನ್ ಏರ್ಲೈನ್ಸ್ ” ನವೆಂಬರ್ 9 ರಿಂದ ಚೀನಾ ಈಸ್ಟರ್ನ್ ಏರ್ಲೈನ್ಸ್ ಶಾಂಘೈ ಮತ್ತು ದೆಹಲಿ ನಡುವೆ ವಿಮಾನ ಹಾರಾಟವನ್ನು ಪುನರಾರಂಭಿಸಲಿದೆ. ಸೇವೆಗಳು ವಾರಕ್ಕೆ ಮೂರು ಬಾರಿ ಅಂದರೆ – ಬುಧವಾರ, ಶನಿವಾರ ಮತ್ತು ಭಾನುವಾರ – A330-200 ವಿಮಾನದೊಂದಿಗೆ ಕಾರ್ಯನಿರ್ವಹಿಸಲಿವೆ. ಈ ಸೇವೆಯ ಪುನರಾರಂಭವು ಭಾರತದಲ್ಲಿ ಚೀನಾ ಈಸ್ಟರ್ನ್ ಏರ್ಲೈನ್ಸ್ ಜಾಲದ ಸಂಪೂರ್ಣ ಪುನಃಸ್ಥಾಪನೆಯನ್ನು ಸೂಚಿಸುತ್ತದೆ, ಇದು ಜನರಿಂದ ಜನರಿಗೆ ವಿನಿಮಯ ಮತ್ತು ಆರ್ಥಿಕ ಮತ್ತು ವ್ಯಾಪಾರ ಸಹಯೋಗಕ್ಕೆ ಹೊಸ ಆವೇಗವನ್ನು ಒದಗಿಸುತ್ತದೆ” ಎಂದು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.